ಆತ್ಮೀಯ ರೈತಬಾಂದವರೇ ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳು ರೈತರಿಗೆ ಉಪಯೋಗವಾಗಲೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ವರ್ಷ ಜಾರಿಗೆ ತರುತ್ತಿರುತ್ತವೆ. ಆ ಒಂದು ನಿಟ್ಟಿನಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಿಯಾಯಿತಿ ದರದಲ್ಲಿ ಟಾರ್ಪಲಿನ್ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗಿದ್ದರೆ ಟಾರ್ಪಲಿನ್ ಪಡೆಯಲು ದಾಖಲೆಗಳು ಏನುಬೇಕು?ಅರ್ಜಿ ಎಲ್ಲಿ ಸಲ್ಲಿಸಬೇಕು? ಆಯ್ಕೆ ಪ್ರಕ್ರಿಯೇ ಹೇಗೇ ತಿಳಿಯೋಣ.
ಇದನ್ನೂ ಓದಿ: ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ಕೃಷಿ ಉಪಕರಣಕ್ಕೆ NOC(ನೀರಾಕ್ಷೇಪಣಾ ಪತ್ರ) ಪಡೆಯುವುದು ಹೇಗೆ? ಅದರ ಅವಶ್ಯಕತೆ ಏನು?
ರೈತರು ಮೊದಲು ತಮ್ಮ ತಾಲೂಕಿನ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಜಮೀನಿನ ನೋಂದಣಿ ಮಾಡಿಸಬೇಕಾಗಿರುತ್ತದೆ. ಈ ನೋಂದಣಿಯನ್ನು ಮಾಡಿಸಲು ರೈತರು ದಾಖಲೆಗಳಾದ ಜಮೀನಿನ ಪಹಣಿ, ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪೋಟೋ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿಯಾದ ನಂತರ ಪ್ರತಿ ರೈತರಿಗೆ ಪ್ರತ್ಯೇಕವಾಗಿ ಒಂದು ನೋಂದಣಿ ಸಂಖ್ಯೆ ನೀಡಲಾಗುತ್ತದೆ.
ಈ ನೋಂದಣಿ ಸಂಖ್ಯೆಯಿಂದ ರೈತರು ಇಲಾಖೆಯ ಯಾವುದೇ ಯೋಜನೆಯ ಪ್ರಯೋಜನೆ ಪಡೆಯಲು ಸಹಾಯವಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದಲ್ಲಿ ಏಪ್ರೀಲ್ 10 ಅರ್ಜಿ ಸ್ವೀಕರಿಸಲಾಗುತ್ತಿದೆ. ಈ ತಾಲ್ಲೂಕಿನ ರೈತ ಬಾಂದವರು ಈ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬಹುದಾಗಿರುತ್ತದೆ.
ವಿತರಣೆ ಪ್ರಕ್ರಿಯೆ:
ಇಲಾಖೆಗೆ ಅರ್ಜಿ ಸಲ್ಲಿಸಿದ ರೈತರ ಹಿರಿತನದ ಆಧಾರ ಮೇಲೆ ಕೃಷಿ ಜಮೀನು ಹೊಂದಿದ ರೈತರಿಗೆ( ಮುಖ್ಯವಾಗಿ ನೋಂದಣಿ ಸಂಖ್ಯೆ) ಹೊಂದಿದ ರೈತರಿಗೆ ಇಲಾಖೆಗೆ ಬಂದ ಟಾರ್ಪಲಿನ್ ಅನುಗುಣವಾಗಿ ವಿತರಿಸಲಾಗುತ್ತದೆ.
(ವಿಶೇಷ ಮಾಹಿತಿ: ಇಲಾಖೆ ಮಾರ್ಗಸೂಚಿಗಳ ಆಧಾರ ಮೇಲೆ ಇಂತಿಷ್ಟು ಕಾಲಾವಕಾಶಗಳ ಒಳಗೆ ತೆಗೆದುಕೊಂಡ ಫಲಾನುಭವಿಗಳಿಗೆ ಅವಕಾಶ ವಿರುವುದಿಲ್ಲ ಇಲಾಖೆಯನ್ನು ಸಂಪರ್ಕಿಸಿದಾಗ ಅಧಿಕಾರಿಗಳು ಎಷ್ಟು ವರ್ಷಗಳಂತ ಮಾಹಿತಿ ನೀಡುತ್ತಾರೆ)
ಇದನ್ನೂ ಓದಿ: ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದಿಂದ ಯುವಕ ಯುವತಿಯರಿಗೆ ತರಬೇತಿಗೆ ಅರ್ಜಿ ಆಹ್ವಾನ:
ದಾಖಲೆಗಳು:
ರೈತರು ಪಹಣಿ ಪ್ರತಿ.
ಆಧಾರ್ ಕಾರ್ಡ ಪ್ರತಿ,
ಬ್ಯಾಂಕ್ ಪಾಸ್ ಬುಕ್ ಪ್ರತಿ
ಪೋಟೋ
ಅರ್ಜಿ
ಅರ್ಜಿ ಸಲ್ಲಿಸುವುದು ಎಲ್ಲಿ?
ತೀರ್ಥಹಳ್ಳಿ ತಾಲ್ಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು.
ಅರ್ಹ ಫಲಾನುಭವಿಗಳು ಖುದ್ದಾಗಿ ದಾಖಲೆಗಳನ್ನು ನೀಡಿ ಟಾರ್ಪಲಿನ್ ಪಡೆಯಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆ ತೀರ್ಥಹಳ್ಳಿ ತಾಲೂಕ ಹಾಗೂ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.
ಇದನ್ನೂ ಓದಿ: ಕೇಂದ್ರದ 6000/-ರೂ ರಾಜ್ಯದ 4000/-ರೂ ಬರದೆ ಇರಲು ಕಾರಣ,ಯೋಜನೆ ಮಾರ್ಗಸೂಚಿ ಸಂಪೂರ್ಣ ಮಾಹಿತಿ:
ಬೇರೆ ಬೇರೆ ಜಿಲ್ಲೆ ಮತ್ತು ತಾಲ್ಲೂಕಿನ ಕೃಷಿ ಇಲಾಖೆಗಳಲ್ಲಿ ಯೋಜನೆಯ ಅನುದಾನಗಳ ಅನುಗುಣವಾಗಿ ಲಬ್ಯವಿದ್ದರೆ ಪಡೆದುಕೊಳ್ಳಿ. ಇಲ್ಲವಾದರೆ ಮುಂದೆ ಅನುದಾನ ಬಂದಾಗ ಯೋಜನೆಯ ಫಲಾನುಭವಿಗಳು ಆಗಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.