Friday, September 20, 2024

DBT Amount status-ಮನೆಯಲ್ಲೇ ಕುಳಿತು ಆಧಾರ ಕಾರ್ಡ ಸಂಖ್ಯೆ ಹಾಕಿ ಯಾವ ಯೋಜನೆಗಳಡಿ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಸಾರ್ವಜನಿಕರಿಗೆ ಹಾಗೂ ರೈತರಿಗೆ ಉಚಿತವಾಗಿ ಕೆಲಯೊಂದು ಯೋಜನೆಗಳನ್ನು ಬಿಟ್ಟದ್ದಾರೆ. ಆ ಯೋಜನೆಗಳ ಅಡಿಯಲ್ಲಿ ಸಾರ್ವಜನಿಕರ ಖಾತೆಗೆ ನೇರ ಹಣ ಜಮೆ ಆಗುವ ವ್ಯವಸ್ತೆಗಳಿದ್ದು ಅದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಾರ್ವಜನಿಕರ ಬಳಿ ಅಂಡ್ರಾಯ್ಡ್ ಮೊಬೈಲ್ ಪೋನ್‌ಗಳಿದ್ದು ಅದನ್ನು ಬಳಕೆ ಮಾಡಿಕೊಂಡು ಮನೆಯಲ್ಲೇ ಕುಳಿತು ಆಧಾರ ಕಾರ್ಡ ಸಂಖ್ಯೆ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಡಿಬಿಟಿ ಕರ್ನಾಟಕ(DBT Karnataka mobile app) ಮೊಬೈಲ್ ಅಪ್ಲಿಕೇಶನ್‌ನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ ಕಾರ್ಡ ಸಂಖ್ಯೆ ಹಾಕಿ ಲಾಗಿನ್(login)ಆಗುವುದರ ಮೂಲಕ ಯಾವ ಯೋಜನೆಗಳಡಿ ಎಷ್ಟು ಹಣ ನಿಮ್ಮ ಖಾತೆಗೆ ಜಮೆ ಆಗಿದೆ ಎಂದು ಮನೆಯಲ್ಲೇ ಕುಳಿತು ತಿಳಿದುಕೊಳ್ಳಬಹದು.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

DBT amount status-ಆಧಾರ ಕಾರ್ಡ ಸಂಖ್ಯೆ ಹಾಕಿ ಯಾವೆಲ್ಲ ಯೋಜನೆಗಳಿಂದ ಎಷ್ಟು ಹಣ ಜಮೆಯಾಗಿದೆ ಎಂದು ತಿಳಿಯುವ ವಿಧಾನ:

ಸಾರ್ವಜನಿಕ/ರೈತರು ತಮ್ಮ ಮೊಬೈಲ್‌ನಲ್ಲಿ ಈ ಕೆಳಗೆ ವಿವರಿಸಿರುವ ವಿಧಾನಗಳನ್ನು ಅನುಸರಿಸಿ ಗೂಗಲ್ ಪ್ಲೇ ಸ್ಟೋರ್ (Google play store)ಭೇಟಿ ಮಾಡಿ ಇ-ಆಡಳಿತ ಇಲಾಖೆಯ “ಡಿಬಿಟಿ ಕರ್ನಾಟಕ(DBT Karnataka mobile app)ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ವಿಧಾನ-1:ಮೊದಲು (DBT Karnataka mobile app Download link)ಈಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಮೂಲಕ ‘ಡಿಬಿಟಿ ಕರ್ನಾಟಕ(DBT Karnataka mobile app)ಅಪ್ಲಿಕೇಶನ್‌ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ವಿಧಾನ-2:ಎರಡನೇ ಹಂತದಲ್ಲಿ ಸಹಾಯಧನ/ಆರ್ಥಿಕ ನೆರವು ಪಡೆಯುತ್ತಿರುವ ಅರ್ಜಿದಾರರ ಆಧಾರ ಕಾರ್ಡ ಸಂಖ್ಯೆಯನ್ನು ಹಾಕಿ ನಂತರ ಆಧಾರ ಕಾರ್ಡನಲ್ಲಿರುವ ಮೊಬೈಲ್ ನಂಬರಗೆ 6 ಅಂಕಿಯ OTP/ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಮುಂದುವರೆಯಿರಿ.

ಇದನ್ನೂ ಓದಿ:Govt schemes benifits-ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಪಡೆಯಲು ಈ ಕೆಲಸ ಕಡ್ಡಾಯ!

ವಿಧಾನ-3:ಎರಡನೇ ಹಂತ ಮುಗಿದ ಮೇಲೆ ನಿಮಗೆ ನೆನಪಿನಲ್ಲಿ ಉಳಿಯುವ ಹಾಗೆ ನಾಲ್ಕು/೪ ನಂಬರಿನ ಪಾಸ್ವರ್ಡ/ PASSWORDನ್ನು ರಚನೆ ಮಾಡಿಕೊಳ್ಳಬೇಕು. ನಂತರ ಅರ್ಜಿದಾರ/ಫಲಾನುಭವಿಯ ಹೆಸರು,ವಿಳಾಸ,ಫೋಟೋ ಹಾಗೂ ವೈಯಕ್ತಿಕ ವಿವರಗಳು ಗೋಚರಿಸುತ್ತದೆ. ಕೊನೆಯಲ್ಲಿ ಮೊಬೈಲ್(MOBILE NUMBER)ನಂಬರ್ ಹಾಕಿ “ಸರಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ವಿಧಾನ-4:ಮೇಲಿನ ವಿಧಾನಗಳನ್ನು ಅನುಸರಿಸಿದ ಬಳಿಕ (DBT Karnataka mobile)ಅಪ್ಲಿಕೇಶನ್‌ನ ಮುಖಪುಟ ಭೇಟಿಮಾಡಿ ನೀವು ಈಗಾಗಲೇ ರಚನೆ ಮಾಡಿರುವ ೪ ಅಂಕಿಯ ಪಾಸ್ವರ್ಡ/PASSWORD ನಮೂದಿಸಿ ಲಾಗಿನ್ ಆಗಬೇಕು.

ಅಲ್ಲಿ ಮುಖಪುಟದಲ್ಲಿ 4ಆಯ್ಕೆಗಳು ಕಾಣಿಸುತ್ತವೆ. 1)ಪಾವತಿ ಸ್ಥಿತಿ/Payment status 2)ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಯೋಜನೆ/Adhar link status 3)ಪ್ರೋಫೈಲ್/Profile 4)ಕನ್ನಡ/English ಭಾಷೆ ಆಯ್ಕೆ.

1)ಪಾವತಿ ಸ್ಥಿತಿ/Payment status:ಈ ಆಯ್ಕೆಯ ಮೇಲೆ ಕ್ಲಿಕ್/Click ಮಾಡಿ ಎಲ್ಲಾ ಯೋಜನೆಗಳ ಹೆಸರು ತೋರಿಸುತ್ತದೆ. ಪ್ರತಿಯೊಂದು ಯೋಜನೆ ಮೇಲೆ ಕ್ಲಿಕ್/Click ಮಾಡಿ ಹಣ ಪಾವತಿಯ ವಿವರ/Payment status ತಿಳಿದುಕೊಳ್ಳಬಹುದು.

2)ಬ್ಯಾಂಕ್ ಖಾತೆ ಜೊತ ಆಧಾರ್ ಸಂಯೋಜನೆ/ Adhar link status:ಈ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಯಾವ ಬ್ಯಾಂಕಿಗೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಬಹುದು.

3)ಪ್ರೋಫೈಲ್/Profile:ಇದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ವಿವರ ಇತ್ಯಾದಿ ಮಾಹಿತಿ ಇರುತ್ತದೆ.

4)ಕನ್ನಡ/English:ಈ ಆಯ್ಕೆ ಬಳಸಿ ಕನ್ನಡ/English ಎರಡು ಭಾಷೆಯಲ್ಲಿಯೂ ಈ   ಅಪ್ಲಿಕೇಶನ್‌ನ್ನು ಬಳಸಬಹುದು.

ಇತ್ತೀಚಿನ ಸುದ್ದಿಗಳು

Related Articles