Thursday, September 19, 2024

DAESI COURSE-ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಪರವಾನಿಗೆ ಪಡೆಯಬೇಕಾದರೆ ಈ ಕೋರ್ಸ ಮಾಡಿದರೆ  ಸಾಕು!

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ಕೃಷಿ ಮಾಡಲು ಬೀಜ, ಗೊಬ್ಬರ, ಕೀಟನಾಶಕಗಳ ಅಗತ್ಯವಾಗಿ ಬೇಕಾಗುತ್ತದೆ. ಈ ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಬೇಕಾದರೆ  ಸಂಬಂಧಪಟ್ಟ ಇಲಾಖೆಗಳಿಂದ ಮಾರಾಟ ಪರವಾನಿಗೆಗಳನ್ನು ಪಡೆಯಬೇಕಾಗುತ್ತದೆ. ಮಾರಾಟ ಪರವಾನಿಗೆ ಪಡೆಯಬೇಕೆಂದರೆ ಅದಕ್ಕೆ ಆದಕೆಲವು ಕೋರ್ಸಗಳಿವೆ ಅವುಗಳನ್ನು ಮಾಡಿದರೆ ಮಾತ್ರ ನಿಮಗೆ ಮಾರಾಟ ಪರವಾನಿಗೆ ಸಿಗುತ್ತದೆ.

ಬೆಳೆಗಳ ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರಾಟ ಮಾಡಬೇಕಾದರೆ, ಈ ಕೋರ್ಸ ಮಾಡಿದರೆ ಇನ್ನೂ ಮುಂದೆ ನೀವು ಸ್ವಂತ ಅಂಗಡಿಗಳನ್ನು ಹಾಕಿಕೊಳ್ಳಬಹುದು. ಆ ಕೋರ್ಸ ಯಾವುದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ಮುಂಚೆ ಈ ಮಾರಾಟ ಪರವಾನಿಗೆ ಕೇವಲ ಬಿ ಎಸ್ಸಿ ಕೃಷಿ(Bsc Agriculture), ಬಿ ಎಸ್ಸಿ(Bsc Horticulture), ಬಿ ಎಸ್ಸಿ ಕೆಮಿಸ್ಟ್ರಿ(Bsc Chemistry) ಮಾಡಿದವರಿಗೆ ಮಾತ್ರ ಪರವಾನಿಗೆ ನೀಡಲಾಗುತ್ತಿತ್ತು. ಇದರಿಂದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ಮಳಿಗೆಗಳ ಕೊರತೆ ಉಂಟಾಗಿ ರೈತರಿಗೆ ಕೃಷಿ ಮಾಡಲು ಸಮಸ್ಯೆಗಳು ಉಂಟಾಗುತ್ತಿತ್ತು. ಇನ್ನೂ ಮುಂದಕ್ಕೆ 1 ವರ್ಷದ Diploma in Agricultural Extension Services For Input Dealers(DAESI) Course ಮಾಡಿದವರಿಗೆ ಮಾರಾಟ ಪರವಾನಿಗೆ ಪಡೆಯಬಹುದು.

ಇದನ್ನೂ ಓದಿ:ಕ್ರಿಮಿನಾಶಕಗಳನ್ನು ಬಳಸುವಾಗ ರೈತರು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆ ಕ್ರಮಗಳ ಬಗ್ಗೆ ನಿಮಗೆ ಗೊತ್ತೆ?

ಈ ಕೋರ್ಸ ಮಾಡಬಯಸುವವರು ನಿಮ್ಮ ತಾಲೂಕುಗಳಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಛೇರಿ (ಕೃಷಿ ಇಲಾಖೆ) ಅಥವಾ ನಿಮ್ಮ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಈ ಕೋರ್ಸ 1 ವರ್ಷದ ಅವಧಿಯ ಕೋರ್ಸ ಆಗಿರುತ್ತದೆ.

ಕೋರ್ಸ ಮಾಡಲು ಬೇಕಾಗುವ ದಾಖಲೆಗಳು:

1)DAESI Course ಅರ್ಜಿ ಫಾರಂ

2)SSLC ಅಂಕ ಪಟ್ಟಿ ಜೆರಾಕ್ಸ್‌

3)ಆಧಾರ್‌ ಕಾರ್ಡ ಜೆರಾಕ್ಸ್‌

4)2-PASSPORT SIZE PHOTOS

ಇದನ್ನೂ ಓದಿ:ಮನೆಯಲ್ಲೇ ಕುಳಿತು ಆಧಾರ್‌ ಕಾರ್ಡ ಸಂಖ್ಯೆ ಹಾಕಿ ಯಾವ ಯೋಜನೆಗಳಡಿ ಎಷ್ಟು ಹಣ ಬಂದಿದೆ ಎಂದು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

ಈ ಕೋರ್ಸನ ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ (ಕೃಷಿ ಇಲಾಖೆ) ಹಾಗೂ ನಿಮ್ಮ ಜಿಲ್ಲೆಗಳಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles