ನಮಸ್ಕಾರ ರೈತರೇ, 2024 ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡಿಕೊಂಡ ರೈತರಿಗೆ ಅವರ ಮೊಬೈಲ್ ಗಳಿಗೆ sms ಕಳುಹಿಸಲಾಗಿದೆ. ಅದರ ಅರ್ಥ ಏನು ಎಂದು ಮತ್ತು ಅದರ ಮಾಹಿತಿಯನ್ನು ತಿಳಿಯಲು ನೀವು ಕೃಷಿ ಇಲಾಖೆಗೆ ಭೇಟಿ ಮಾಡದೆ ತಿಳಿದುಕೊಳ್ಳಬಹುದು.
ಹೌದು ರೈತರೇ 2024 ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮುಕ್ತಾಯವಾಗಿದ್ದು ತಾವು ಸಮೀಕ್ಷೆ ಮಾಡಿದ ಸರ್ವೇ ನಂಬರ್ಗಳನ್ನು ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಪ್ರೋವಲ್ ( ಪರಿಶೀಲನೆ) ಮಾಡುತ್ತಿದ್ದು ಅದರಲ್ಲಿ ವ್ಯತ್ಯಾಸ ಇದ್ದರೆ ಮರು ಸಮೀಕ್ಷೆಗೆ ಹಾಕಿ ಎಂದು sms ಕಳುಹಿಸಲಾಗುತ್ತಿದೆ.
ಆದ್ದರಿಂದ ತಾವು ಸಮೀಕ್ಷೆ ಮಾಡಿದ ತಾಕುಗಳಲ್ಲಿ ಬೆಳೆ ವ್ಯತ್ಯಾಸ ಕಂಡು ಬಂದರೆ ತಾವು ಮನೆಯಲ್ಲಿ ಕುಳಿತು ನೋಡಿಕೊಳ್ಳಬಹುದು. ಹಾಗೂ ಯಾವುದೇ ಇಲಾಖೆಗೆ ಭೇಟಿ ಮಾಡದೆ ನಿಮ್ಮ ಮೊಬೈಲ್ ನಲ್ಲಿ ಮನೆಯಲ್ಲೇ ಕುಳಿತು ಮರು ಸಮೀಕ್ಷೆಗೆ ಹಾಕಬಹುದು. ಅದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
Crop survey sms- ಬೆಳೆ ಸಮೀಕ್ಷೆ ಬಗ್ಗೆ ಮೊಬೈಲ್ ಗೆ sms ಬಂದಿದಿಯೇ? ನಿಮ್ಮ ಬೆಳೆ ಸಮೀಕ್ಷೆ ಹೀಗೆ ಚೆಕ್ ಮಾಡಿಕೊಳ್ಳಿ.
1)ಮೊದಲಿಗೆ GOOGLE PLYSTORE ಹೋಗಿ ಅಲ್ಲಿ bele darshak app ನ್ನು ಡೌನ್ಲೋಡ್ ಮಾಡಿಕೊಳ್ಳಿ. ಅಥವಾ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ bele darshank app ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ನಮೂದಿಸಿ ಮುಂದೆವರೆಯಿರಿ. (ರೈತರ ಗಮನಕ್ಕೆ ಋತು ಆಯ್ಕೆಯಲ್ಲಿ ವಾರ್ಷಿಕ ಬೆಳೆಗಳಿಗೆ ಮುಂಗಾರು ಮಾತ್ರ ಆಯ್ಕೆ ಮಾಡಬೇಕು, ಬೇರೆ ಬೆಳೆಗಳಿಗೆ ಬೆಳೆದ ಹಂಗಾಮು ಆಯ್ಕೆ ಮಾಡಿಕೊಳ್ಳಿ).
3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.
5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.
6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಮುಂದೆವರೆಯಿರಿ.
7)ಕ್ಲಿಕ್ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.
8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ.
9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್, ಮೊಬೈಲ್ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.
10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.
ಇದನ್ನೂ ಓದಿ:ಯಾವುದೇ ಜಮೀನನ್ನು ಖರೀದಿ ಮಾಡುವಾಗ ತಪ್ಪದೇ ಈ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಿ!
ದಾಖಲಾದ ಬೆಳೆ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….
ಸೂಚನೆ: ಯಾವುದೇ ಕಾರಣಕ್ಕೂ ಸುಮ್ನೆ ಮರು ಸಮೀಕ್ಷೆ ಹಾಕಬೇಡಿ ಏಕೆಂದರೆ ಅದನ್ನೂ ಮರು ಸಮೀಕ್ಷೆ ಮಾಡದೆ ಇದ್ದಲ್ಲಿ ತಾವು ಸಮೀಕ್ಷೆ ಮಾಡಿಕೊಂಡಿದ್ದು ವ್ಯರ್ಥವಾಗುತ್ತದೆ. ಮರು ಸಮೀಕ್ಷೆ ಹಾಕಿದ ಮೇಲೆ ತಾವು ಅದನ್ನೂ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಸಮೀಕ್ಷೆ ಮಾಡಿಸಿಕೊಳ್ಳಿ.