Saturday, October 5, 2024

Crop survey checking-ಬೆಳೆ ಸಮೀಕ್ಷೆಯ ಅವಧಿ ಮುಕ್ತಾಯವಾಗಿದ್ದು ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿದೆಯೇ? ಹೀಗೆ ತಿಳಿದುಕೊಳ್ಳಿ.

ನಮಸ್ಕಾರ ರೈತರೇ, 2024ರ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಆದ್ದರಿಂದ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಲಾಗಿದ್ದರೇ ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ಹೇಗೆ ತಿಳಿದುಕೊಳ್ಳಬೇಕು ಎಂದು ನಿಮಗೆ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಮುಂಗಾರು ಹಂಗಾಮಿನ 2024 ರ ರೈತರ ಬೆಳೆ ಸಮೀಕ್ಷೆ ಆ್ಯಪ್ ಮುಕ್ತಾಯವಾಗಿದ್ದು, ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ ಸಹ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದ್ದು, ರೈತರು ಬೆಳೆದ ಬೆಳೆಗಳ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಈ ಬೆಳೆ ಸಮೀಕ್ಷೆ ಕೆಲಸವು ಸುಮಾರು 8 ವರ್ಷಗಳಿಂದ 2016 ರಿಂದ ಆರಂಭವಾಗಿದ್ದು, ಅದರಲ್ಲಿ ರೈತರ ಬೆಳೆ ಸಮೀಕ್ಷೆ ಆ್ಯಪ್ ನ್ನು 2020 ರಿಂದ ಬಿಡುಗಡೆ ಮಾಡಲಾಗಿದೆ. ಈ ವರ್ಷವು ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಈ ಬೆಳೆ ಸಮೀಕ್ಷೆ ಮಾಹಿತಿಯನ್ನು ಹಲವಾರು ಯೋಜನೆಗಳು ಮತ್ತು ಸರಕಾರಿ ಸೌಲಭ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.

ಇದನ್ನೂ ಓದಿ:ರಾಜ್ಯದ ರೈತರಿಗೆ ಕಂದಾಯ ಸಚಿವರಿಂದ ಸಿಹಿ ಸುದ್ಧಿ “ಬಗರ್ ಹುಕುಂ” ಮರು ಚಾಲನೆ!

Crop survey-ಬೆಳೆ ಸಮೀಕ್ಷೆ ಮಾಹಿತಿಯನ್ನು ಎಲ್ಲಿ ಪ್ರಯೋಜನಕ್ಕೆ ಬರುತ್ತದೆ ಗೊತ್ತಾ?

1)ಕೃಷಿ/ ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿ ಕಡ್ಡಾಯವಾಗಿ ಬೇಕು.

2)ಬೆಳೆ ವಿಮೆ ಮಾಡಿಸಲು ಮತ್ತು ಅದರ ಪರಿಹಾರ ಪಡೆಯಲು ಕಡ್ಡಾಯವಾಗಿ ಬೇಕು.

3)ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಯಂತ್ರೋಪಕರಣ ಮತ್ತು ಇತರೆ ಸೌಲಭ್ಯಗಳನ್ನು ಪಡೆಯಲು ಬೇಕು.

4)ಬೆಳೆ ಹಾನಿ ಮತ್ತು ಬೆಳೆ ನಷ್ಟ ಉಂಟಾದಾಗ ಬೆಳೆ ಸಮೀಕ್ಷೆ ಮಾಹಿತಿ ಬೇಕು.

5)ಸಾಂಖಿಕ್ಯ ಇಲಾಖೆಗೆ ಬೇಕಾಗುತ್ತದೆ.

Crop survey checking-ನಿಮ್ಮದು ಬೆಳೆ ಸಮೀಕ್ಷೆ ಆಗಿದೆಯೇ ಇಲ್ಲವೇ ಎಂದು ನೋಡುವ ವಿಧಾನ.

1)ಮೊದಲಿಗೆ ಈ ಲಿಂಕ್ ಮೇಲೆ (bele darshak app) ಕ್ಲಿಕ್ ಮಾಡಿ bele darshak app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದುವರೆಯಿರಿ.

3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್‌ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ.

ಇದನ್ನೂ ಓದಿ:ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಬಿಡುಗಡೆಯ ದಿನಾಂಕ ಪ್ರಕಟ! ಇಕೆವೈಸಿ ಚೆಕ್ ಮಾಡಿಕೊಳ್ಳಿ.

7)ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್‌, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

11)ತಾವು ದಾಖಲಿಸಿದ ಬೆಳೆಯಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದರೆ ನೀವು ಅಲ್ಲೇ ಕೆಳಗಡೆ ಇರುವ ಆಕ್ಷೇಪಣೆ ಸಲ್ಲಿಸಿ ಇರುವ ಆಯ್ಕೆಯನ್ನು ಆಯ್ಕೆ ಮಾಡಿ ಆಕ್ಷೇಪಣೆ ಸಲ್ಲಿಸಬಹುದು.

ದಾಖಲಾದ ಬೆಳೆ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….

ಇತ್ತೀಚಿನ ಸುದ್ದಿಗಳು

Related Articles