Thursday, September 19, 2024

Crop insurance: ಬೆಳೆವಿಮೆ ಹಣ ದೊರೆಯಲು ಎಲ್ಲಾ ರೈತರು ಈ ಕೆಲಸ ಮಾಡುವುದು ಕಡ್ಡಾಯ:ಯಾವ ಹಂತದಲ್ಲಿ ಮಾಡುವುದು? ಇದರಿಂದ ಪ್ರಯೋಜನವೇನು? ಸಂಪೂರ್ಣ ಮಾಹಿತಿ.

Crop insurance: ಬೆಳೆವಿಮೆ ಹಣ ದೊರೆಯಲು ಬರ ಪರಿಹಾರ , ಬೆಳೆ ಪರಿಹಾರ ಕ್ಕೆ ಎಲ್ಲಾ ರೈತರು ಈ ಕೆಲಸ ಮಾಡುವುದು ಕಡ್ಡಾಯ:
ಯಾವ ಹಂತದಲ್ಲಿ ಮಾಡುವುದು? ಇದರಿಂದ ಪ್ರಯೋಜನವೇನು? ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ, ನೀವು ಬೆಳೆ ವಿಮೆ ಮಾಡಿಸಿದ್ದಿರಾ ?ಯಾವ ಬೆಳೆಗೆ ಮಾಡಿಸಿದ್ದಿರಿ? ಬೆಳೆವಿಮೆ ಹಣ ಸಿಗುವುದಕ್ಕೆ ರೈತ ಬಾಂದವರೂ ಏನು ಮಾಡಬೇಕು ? ಕೇವಲ ಬೆಳೆ ವಿಮೆ ಮಾಡಿಸಿ ಕೂತರೇ ಸಾಲದು ನಿಮ್ಮ ಖಾತೆಗಳಿಗೆ ನೀವು ತುಂಬಿದ ಹಣ ಸಿಗುವುದಕ್ಕೆ ಕಡ್ಡಾಯ ಈ ಬೆಳೆ ಸಮೀಕ್ಷೆ ಕಾರ್ಯ ನೀವು ಮಾಡಲೇಬೇಕು, ಯಾವ ಅಪ್ಲೀಕೇಶನ್ ಹೇಗೇ ಮಾಡುವುದು ತೋರಿಸಿ ಕೊಡುತ್ತೆವೆ.

ಆತ್ಮೀಯ ರೈತ ಬಾಂಧವರೇ ನಾವು ಬೆಳೆ ವಿಮೆ ಮಾಡಿಸಿದ ನಂತರ ನಮ್ಮ ಹೊಲದಲ್ಲಿ ಆ ಬೆಳೆಯನ್ನು ಬೆಳೆದಿದ್ದೇವೆ ಎಂಬ ಸಾಕ್ಷಿಗಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವಂತಹ ಮುಂಗಾರು ಬೆಳೆ ಸಮೀಕ್ಷೆ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಲೇಬೇಕು. ಯಾವ ಹಂತದಲ್ಲಿ ಮತ್ತು ಯಾವ ಯಾವ ಹಂಗಾಮಿನಲ್ಲಿ ಮಾಡಬೇಕು ಅಂತ ಮಾಹಿತಿ ನೀಡಿರುತ್ತೆವೆ.

ಮುಖ್ಯವಾಗಿ ಬೆಳೆ ಸಮೀಕ್ಷೆಯನ್ನು ಈ ಹಂತದಲ್ಲಿ ಮಾಡಬೇಕಾಗಿರುತ್ತದೆ:

Season (ಹಂಗಾಮು) : ಮುಂಗಾರು, ಪೂರ್ವ ಮುಂಗಾರು
Sowing Season:ಬಿತ್ತನೆ ಸಮುಯ: 1 ನೇ ಏಪ್ರಿಲ್ – ಜೂನ್ 30,
Enumeration Period:ಬೆಳೆ ವಿಸ್ತೀರ್ಣ ಅಂದಾಜು ಮಾಡುವ ಅವಧಿ: ಜುಲೈ 1- 31 ಜುಲೈ ಆಗಿರುತ್ತದೆ.

Season ತಡ ಮುಂಗಾರು : 1ಜುಲೈ – 31 ನೇ ಅಗಸ್ಟ
Sowing Season:ಬಿತ್ತನೆ ಸಮುಯ: 1 ನೇ ಸೆಪ್ಟಂಬರ್‍ – 30 ನೇ ಸೆಪ್ಟಂಬರ್‍.
Enumeration Period:ಬೆಳೆ ವಿಸ್ತೀರ್ಣ ಅಂದಾಜು ಮಾಡುವ ಅವಧಿ: 1ನೇ ಜನವರಿ-31 ನೇ ಜನವರಿ ಆಗಿರುತ್ತದೆ.

Season ಹಿಂಗಾರು :
Sowing Season:ಬಿತ್ತನೆ ಸಮುಯ: 1 ನೇ ಸೆಪ್ಟಂಬರ್‍ – 31 ನೇ ಡಿಸೆಂಬರ್‍ ಅಗಿರುತ್ತದೆ.
Enumeration Period:ಬೆಳೆ ವಿಸ್ತೀರ್ಣ ಅಂದಾಜು ಮಾಡುವ ಅವಧಿ: 1ನೇ ಜನವರಿ -ಜನವರಿ 31 ಆಗಿರುತ್ತದೆ.

Season ಬೇಸಿಗೆ :
Sowing Season:ಬಿತ್ತನೆ ಸಮುಯ:
1ನೇ ಜನವರಿ – ಮಾರ್ಚ 31 ಆಗಿರುತ್ತದೆ.
Enumeration Period:ಬೆಳೆ ವಿಸ್ತೀರ್ಣ ಅಂದಾಜು ಮಾಡುವ ಅವಧಿ: 1 ನೇ ಏಪ್ರೀಲ್ – 30ನೇ ಏಪ್ರೀಲ್ . ಈ ರೀತಿ ಹಂಗಾಮುಗಳನ್ನು ಸರ್ಕಾರ ನಿಗಧಿ ಮಾಡಿರುತ್ತದೆ.

ಬೆಳೆ ಸಮೀಕ್ಷೆ ಸಮಯ ನಿಗದಿಪಡಿಸಲು ಈ ಕೆಳಕಂಡ ಮೂಲ ತತ್ವಗಳು ಪಾಲಿಸುವುದು ಅಗತ್ಯವಾಗಿರುತ್ತದೆ.

ನಿಮ್ಮ ಜಮೀನನಲ್ಲಿ ಬೆಳೆಗಳ ಬಿತ್ತನೆ ಪೂರ್ಣಗೊಂಡಿರಬೇಕು.
ಬೆಳೆಗಳು ಗುರುತಿಸುವಂತಿರಬೇಕು.
ಯಾವುದೇ ಬೆಳೆಗಳ ಕಟಾವು ಆರಂಭವಾಗಿರಬಾರದು.

ಕೃಷಿಗೆ ಸಂಬಂಧಿಸಿದ ಇತರೆ ಯೋಜನೆಗಳು:

ಇದನ್ನೂ ಓದಿ: Integrated Farming System: ಕೃಷಿ ಇಲಾಖೆ ಈ ಯೋಜನೆಯಡಿ ಪ್ರತಿ ರೈತ ಫಲಾನುಭವಿಗೆ ಒಂದು ಲಕ್ಷದವರೆಗೆ ಸಹಾಯಧನ:
ಇದನ್ನೂ ಓದಿ: ಬೆಳೆಸಾಲ ಪಡೆಯಲು ರೈತರ ನೋಂದಣಿ ಸಂಖ್ಯೆ ಪಡೆಯುವ ಸುಲಭ ವಿಧಾನ.

ಇದನ್ನೂ ಓದಿ: ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಪಡೆಯಲು ತಪ್ಪದೇ ಈ ಕೆಲಸ ಮಾಡಿ!!

ಬೆಳೆ ಸಮೀಕ್ಷೆ ಅಪ್ಲೀಕೇಶನ್ ಡೌನ್ಲೋಡ್ ಮಾಡುವ ಲಿಂಕ್ : https://play.google.com/store/apps/details?id=com.csk.farmer23_24.cropsurvey

2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ತಾವೇ ಖುದ್ದಾಗಿ ಗೂಗಲ್ ಪ್ಲೇಸ್ಟೋರ್‌ನಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ2023” ನ್ನು ಡೌನ್ ಲೋಡ್ ಮಾಡಿಕೊಂಡು ಬೆಳೆ ವಿವರಗಳನ್ನು ದಾಖಲಿಸಬೇಕಾಗಿದೆ.

ಬೆಳೆ ಸಮೀಕ್ಷೆಯನ್ನು ಮಾಡುವ ಪ್ರಕ್ರಿಯೇ ಹೇಗೆ?

ಮೇಲೆ ಕಾಣಿಸಿದ ಬೆಳೆ ಸಮೀಕ್ಷೆ ಅಪ್ಲೀಕೇಶನ್ ಡೌನ್ಲೋಡ್ ಮಾಡಿಕೊಂಡು ನಂತರ ತಮ್ಮ ಆಧಾರ್ ಕಾರ್ಡ್ ನ ಮೂಲಕ EKYC ಪ್ರಕ್ರಿಯೆ ಪೂರ್ಣಗೊಳಿಸಿ ನೊಂದಾಯಿಸಿಕೊಂಡು ನಂತರ ತಮ್ಮ ಜಮೀನಿನ ವಿವರಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಆನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ ಲೋಡ್ ಮಾಡಬೇಕು.

ಈ ಸಮೀಕ್ಷೆ ಮಾಡುವುದರಿಂದ ಪ್ರಯೋಜನಗಳು:


ಮೊದಲೆನದಾಗಿ ಸರ್ಕಾರದಿಂದ ವಿವಿಧ ಯೋಜನೆಗಳಿಂದ ಸಬ್ಸಡಿ ದೊರೆಯುವುದು,
ಕನಿಷ್ಠ ಬೆಂಬಲ ಬೆಲೆ ಯೋಜನೆ, ಬೆಳೆಸಾಲ,ಕೃಷಿ ಮತ್ತು ಕೃಷಿಯೇತರ ಇಲಾಖೆಗಳ ಪ್ರಯೋಜನಗಳು ದೊರೆಯುವುದು.

ಮುಖ್ಯವಾಗಿ ಬೆಳೆಗಳಿಗೆ ಮಾಡಿಸಿದ ಬೆಳೆ ವಿಮೆ ಯೋಜನೆ,(insurance) ಪ್ರಯೋಜನ ಪಡೆಯಲು ಈ ಕಾರ್ಯ ಅತೀ ಮುಖ್ಯವಾಗಿರುತ್ತದೆ.

ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ನಷ್ಟ ಪರಿಹಾರ ಪಡೆಯಲು,

ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಇನ್ನೂ ಹಲವಾರು ಪ್ರಯೋಜನೆಗಳು ರೈತರಿಗೆ ಅನುಕೂಲವಾಗುವದರಿಂದ ಎಲ್ಲಾ ರೈತರು ಬೆಳೆ ವಿವರಗಳನ್ನು ಆದಷ್ಟು ತ್ವರಿತವಾಗಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ದಾಖಲಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿರುತ್ತದೆ.

ರೈತರು ಬೆಳೆ ವಿವರಗಳನ್ನು ಅಪ್‌ಲೋಡ್ ಮಾಡದಿದ್ದಲ್ಲಿ ಮೇಲೆ ತಿಳಿಸಿದ ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗುವ ಸಾಧ್ಯತೆ ಇರುವುದರಿಂದ ರೈತರು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ವಿವರಗಳನ್ನು ದಾಖಲಿಸಬೇಕು.

ಇತ್ತೀಚಿನ ಸುದ್ದಿಗಳು

Related Articles