ನಮಸ್ಕಾರ ರೈತರೇ, ಕೃಷಿ ಮಾಡಲು ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿವಿಧ ಸಹಕಾರಿ ಸಂಘಗಳ ಮೂಲಕ ಬೆಳೆ ಸಾಲ ಪಡೆದ ರೈತರ ಕೃಷಿ ಸಾಲ ಮನ್ನ ಮಾಡಿದ್ದು ಅದರ ಪಟ್ಟಿಯನ್ನು ನೋಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ.
ಈ ಹಿಂದೆ ಅಂದರೆ 2017 ರಿಂದ 2018 ರಲ್ಲಿ ರೈತರ ಬೆಳೆ ಸಾಲ ಮನ್ನಾವನ್ನು ರಾಜ್ಯ ಸರಕಾರದಿಂದ ಮಾಡಲಾಗಿತ್ತು. ಹಂತಹಂತವಾಗಿ 50 ಸಾವಿರ ಒಮ್ಮೆ ಮತ್ತೊಮ್ಮೆ 1 ಲಕ್ಷದ ವರೆಗೆ ವಿವಿಧ ಬ್ಯಾಂಕ್ ಗಳ ಕೃಷಿ ಸಾಲವನ್ನು ಮನ್ನಾ ಮಾಡಲಾಗಿದ್ದು ಇದಕ್ಕೆ ಒಟ್ಟು 7,662 ಕೋಟಿ ವೆಚ್ಚ ಮಾಡಲಾಗಿದೆ.
ಈ ಸಾಲ ಮನ್ನಾವು ಯಾವೆಲ್ಲ ರೈತರಿಗೆ ಸಿಕ್ಕಿದೇ ಎಂದು ನೋಡಲು ಹಾಗೂ ರೈತರು ಈ ಸಾಲ ಮನ್ನಾದ ಪ್ರಯೋಜನವನ್ನು ಖಚಿತ ಪಡಿಸಿಕೊಳ್ಳಲು ಸಾಲ ಮನ್ನಾ ಪಟ್ಟಿಯಲ್ಲಿ ತಮ್ಮ ಹೆಸರಿದಿಯೇ ಎಂದು ಚೆಕ್ ಮಾಡಲು ಮತ್ತು ಎಷ್ಟು ಮೊತ್ತದ ಸಾಲ ಮನ್ನಾ ಮಾಡಲಾಗಿದೇ? ಎಂದು ತಿಳಿದುಕೊಳ್ಳಬಹುದು.
ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿಕೊಳ್ಲಲು ಇನ್ನೂ ಅವಕಾಶವಿದೆ! ತಪ್ಪದೇ ಮಾಡಿಕೊಳ್ಳಿ ಇಲ್ಲಿದೆ ಅದರ ಮಾಹಿತಿ.
Dcc bank crop loan list-ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ನೋಡುವ ವಿಧಾನ!
ಸರಕಾರದ ಇ-ಆಡಳಿತ ವಿಭಾಗದಿಂದ ಅಭಿವೃದ್ಧಿ ಪಡಿಸಿರುವ ಮಾಹಿತಿ ಕಣಜ ಜಾಲತಾಣವನ್ನು ಪ್ರವೇಶಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರೈತರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿಯನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.
ವಿಧಾನ-1:ಮೊದಲಿಗೆ ಈ crop loan list ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ಕಾಣುವ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-2:ಇದಾದ ಬಳಿಕ ಮಾದರಿ/type ಆಯ್ಕೆಯಲ್ಲಿ ರೈತ/farmer ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲೂಕು, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿ.
ವಿಧಾನ-3:ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ರೈತವಾರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ನೋಡಬಹುದು.
National bank crop loan-ರಾಷ್ಟ್ರೀಕೃತ ಬ್ಯಾಂಕಿನ ಬೆಳೆ ಸಾಲ ನೋಡುವ ವಿಧಾನ!
ಮೇಲೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘಗಳ ಸಾಲ ಬೆಳೆ ಸಾಲ ಮನ್ನಾ ವರದಿಯನ್ನು ನೋಡಿದ ರೀತಿಯಲ್ಲೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ರಾಷ್ಟ್ರೀಕೃತ ಬ್ಯಾಂಕಿನ ಬೆಳೆ ಸಾಲ ಮನ್ನಾ ವರದಿಯನ್ನು ನೋಡಬಹುದು.
ಇದನ್ನೂ ಓದಿ:ಈ ಇಲಾಖೆಗಳಿಂದ ಜನರಿಗೆ ವಿವಿಧ ಯೋಜನೆಯಡಿ ಹಣ ಬರುವ ಯೋಜನೆಗಳಿವೆ! ಅದರ ಮಾಹಿತಿ ತಿಳಿಯಿರಿ.
ವಿಧಾನ-1:ಮೊದಲಿಗೆ ಈ crop loan list ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
ವಿಧಾನ-2:ಮಾಹಿತಿ ಕಣಜ ವೆಬ್ ಪೇಜ್ ನ್ನು ಪ್ರವೇಶ ಮಾಡಿದ ಬಳಿಕ ಇಲ್ಲಿ ಕಂದಾಯ ಇಲಾಖೆ ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-3:ತದನಂತರ ಕಂದಾಯ ಇಲಾಖೆಯ ಸೇವೆಗಳು ಆಯ್ಕೆಯನ್ನು ಕ್ಲಿಕ್ ಮಾಡಿ ವಾಣಿಜ್ಯ ಬ್ಯಾಂಕ್ಗಳ ಸಾಲ ಮನ್ನಾ ವರದಿ ಎನ್ನುವ ಆಯ್ಕೆ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
ವಿಧಾನ-4:ಈ ಪೇಜ್ ನಲ್ಲಿ ಮಾದರಿ/type ಆಯ್ಕೆಯಲ್ಲಿ ರೈತ/farmer ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲೂಕು, ತಾಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿ ಸಲ್ಲಿಸಿ ಬಟನ್ ಕ್ಲಿಕ್ ಮಾಡಿದರೆ ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ವರದಿ ತೋರಿಸುತ್ತದೆ.