Friday, September 20, 2024

Crop Loan Check-ಮೊಬೈಲ್ ನಲ್ಲೇ ಚೆಕ್ ಮಾಡಬಹುದು ನಿಮ್ಮ ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ? ಇಲ್ಲಿದೆ ಮಾಹಿತಿ.

ಕರ್ನಾಟಕ ರಾಜ್ಯದಲ್ಲಿ ಕೃಷಿಗೆ ಯೋಗ್ಯವಾದ ಪ್ರದೇಶ ಬಳಕೆ ಜಾಗ ತುಂಬಾ ಇರುವುದರಿಂದ, ಕೃಷಿ ಮಾಡಲು ಸಹಕಾರಿ ಸಂಘಗಳು, ಪ್ರಾಥಮಿಕ ಪತ್ತಿನ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಕೃಷಿ ಸಾಲವನ್ನು ಪಡೆದುಕೊಳ್ಳುತ್ತಾರೆ. ಈ ಕೃಷಿ ಸಾಲವನ್ನು ಪಡೆದುಕೊಂಡ ರೈತರು ಕೃಷಿ ಬೀಜ, ರಸಗೊಬ್ಬರ ಮತ್ತು ಇನ್ನಿತರ ಕೃಷಿ ಬಳಕೆಗೆ ಈ ಸಾಲದ ಹಣವನ್ನು ಉಪಯೋಗಿಸುತ್ತಾರೆ.

ಕೃಷಿ ಸಾಲವನ್ನು ಪಡೆದ ರೈತರು ತಮ್ಮ ಜಮೀನಿನ ಪಹಣಿ/RTC ಗಳಲ್ಲಿ ತಾವು ಪಡೆದುಕೊಂಡಿರುವ ಸಾಲದ ಮೊತ್ತ ಹಾಗೂ ಆ ಸಾಲವನ್ನು ಯಾವ ಬ್ಯಾಂಕ್ ನಿಂದ ಪಡೆದುಕೊಂಡಿದ್ದಾರೆ ಎಂಬ ಎಲ್ಲಾ ಮಾಹಿತಿಯನ್ನು ರೈತರು ನೀಡುವ ಪಹಣಿ/RTC ಗಳಲ್ಲಿ ನಮೂದು ಮಾಡಲಾಗುತ್ತದೆ. ಏಕೆಂದರೆ ಈ ಪಹಣಿ/RTC ಗಳನ್ನು ಬಳಸಿ ಬೇರೆ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಸಾಲವನ್ನು ಪಡೆದುಕೊಳ್ಳಬಾರದೆಂಬ ಕಾರಣ ಹಾಗೂ ಯಾವುದೇ ಬ್ಯಾಂಕ್ ಗಳು ಸಾಲ ನೀಡದಿರಲು ಸಹಕಾರಿಯಾಗುತ್ತದೆ.

ಇನ್ನೂ ಎಷ್ಟೋ ಜನ ರೈತರಿಗೆ ತಾವು ಪಡೆದುಕೊಂಡ ಸಾಲವನ್ನು ಸೊಸೈಟಿ ಅಥವಾ ಬ್ಯಾಂಕಗಳಲ್ಲಿ ಸಾಲವನ್ನು ಸಂಪೂರ್ಣವಾಗಿ ಸಂದಾಯ ಮಾಡಿದ್ದರು ಸಹ ಅವರ ಪಹಣಿ/RTC ಗಳಲ್ಲಿ ಹಳೆ ಸಾಲದ ವಿವರಗಳು ಹಾಗೆ ಉಳಿದಿರುತ್ತವೆ. ಹಾಗಾಗಿ ರೈತರ ಜಮೀನಿನ ಪಹಣಿ/RTC ಯಲ್ಲಿ ಸಾಲದ ವಿವರವನ್ನುಹೇಗೆ ಚೆಕ್ ಮಾಡಿಕೊಳ್ಳಬೇಕು ಎಂದು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರೈತರಿಗೆ ಶುಭ ಸುದ್ಧಿ ಜೂನ್ 18 ರಂದು ರೈತರಿಗೆ ರೂ.2000 ಹಣ ಬಿಡುಗಡೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ.

ಇನ್ನೂ ಎಷ್ಟೋ ಜನಕ್ಕೆ ಪಹಣಿ/RTC ಗಳು ಜಂಟಿ ಖಾತೆಗಳಲ್ಲಿ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಅವರಿಗೆ ಗೊತ್ತಿಲ್ಲದೆ ಬೇರೆಯವರು ಅವರ ಜಮೀನಿನ ಮೇಲೆ ಸಾಲ ತೆಗೆದುಕೊಂಡಿದ್ದಾರೆಯೋ? ಅಥವಾ ತೆಗೆದುಕೊಂಡಿದ್ದರು ಯಾವ ಬ್ಯಾಂಕ್ ಹಾಗೂ ಸೊಸೈಟಿಯಲ್ಲಿ ತೆಗೆದುಕೊಂಡಿದ್ದಾರೆ ಎಂದು ನಿಮ್ಮ ಪಹಣಿ/RTC ಗಳಲ್ಲಿ ನೋಡಿಕೊಳ್ಳಬಹುದು.

ನಿಮ್ಮ ಜಮೀನಿನ ಯಾವ ಸರ್ವೇ ನಂಬರನಲ್ಲಿ ಎಷ್ಟು ಸಾಲವಿದೆ? ಚೆಕ್ ಮಾಡುವ ವಿಧಾನ.

Step-1:ನಿಮಗೆ ಇಲ್ಲಿ ಕಾಣಿಸುತ್ತಿರುವ Bhoomi Online Land Records ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

Step-2:ಕ್ಲಿಕ್ ಮಾಡಿದ ಮೇಲೆ ನಿಮಗೆ Bhoomi Online Land Records View ಎಂಬ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.

Step-3:ನಂತರ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು, ನಂತರ ತಾಲೂಕು ಆಯ್ಕೆ ಮಾಡಬೇಕು, ಇದಾದ ನಂತರ ಹೋಬಳಿ ಆಯ್ಕೆ ಮಾಡಬೇಕು, ನಂತರ ನಿಮ್ಮ ಗ್ರಾಮ/ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಸರ್ವೇ ನಂಬರ ಹಾಕಿ ನಂತರ GO ಮೇಲೆ ಕ್ಲಿಕ್ ಮಾಡಬೇಕು. ನಂತರ Surnoc ನಲ್ಲಿ Star ಆಯ್ಕೆಮಾಡಬೇಕು. ಹಿಸ್ಸಾ ನಂಬರ್ ಆಯ್ಕೆ ಮಾಡಬೇಕು. ನಂತರ Fetch Details ಮೇಲೆಕ್ಲಿಕ್ ಮಾಡಬೇಕು.

ಇದನ್ನೂ ಓದಿ: ಕಂದಾಯ ಇಲಾಖೆಯಿಂದ ಪಹಣಿ/ RTC ಗೆ ಆಧಾರ್ ಲಿಂಕ್ ಆಂದೋಲನ! ಮನೆಯಲ್ಲೇ ಕುಳಿತು ಲಿಂಕ್ ಮಾಡಲು ಇಲ್ಲಿದೆ ಮಾಹಿತಿ.

Step-4:ನಂತರ ನಿಮಗೆ ಅಲ್ಲಿ ಜಮೀನಿನ ಮಾಲೀಕರ ಹೆಸರು ಕಾಣಿಸುತ್ತದೆ. ಅಲ್ಲಿ ಯಾವ ಮಾಲೀಕರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಆ ಜಮೀನಿನ ಖಾತಾ ನಂಬರ್ ಸಹ ನಿಮಗೆ ಕಾಣಿಸುತ್ತದೆ. ಅಲ್ಲಿ View ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಪಹಣಿ/RTC ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೇ ನಂಬರ್ ಆ ಸರ್ವೇ ನಂಬರ್ ಅಡಿಯಲ್ಲಿ ಹಿಸ್ಸಾ ನಂಬರ್ ಹಾಗೂ ಒಟ್ಟು ಎಷ್ಟು ಎಕರೆ ಜಮೀನಿದೆ ತೋರಿಸುತ್ತದೆ.

ಆ ಸರ್ವೇ ನಂಬರ್ ನ ಪಹಣಿ/RTC ಯಲ್ಲಿ ಮಾಲೀಕರ ಹೆಸರು ಹಾಗೂ ಅವರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಎದುರುಗಡೆ ನಿಮ್ಮ ಜಮೀನು ಯಾವಾಗ ವಿಭಾಗ/ ಮುಟೇಶನ್ ಆಗಿದೆ ಎಂಬ ಮಾಹಿತಿಯೂ ಇರುತ್ತದೆ.

ಹಕ್ಕುಗಳು ಕಾಲಂನಲ್ಲಿ ನೋಡಿದರೆ ರೈತರು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದಾರೆ, ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಇದರೊಂದಿಗೆ ಯಾವಾಗ ಸಾಲ ಪಡೆಯಲಾಗಿದೆ ಎಂಬ ಮಾಹಿತಿ ಕೂಡ ಇರುತ್ತದೆ. ಈ ಸಾಲವನ್ನು ನೀವೇ ಪಡೆದಿದ್ದೀರೋ ಅಥವಾ ನಿಮ್ಮ ಜಮೀನಿನ ಮೇಲೆ ನಿಮ್ಮ ಹೆಸರಲ್ಲಿ ಬೇರೆಯವರೂ ಪಡೆದಿದ್ದಾರೋ ಎಂಬುದು ನಿಮಗೆ ತಿಳಿಯುತ್ತದೆ.

ಇತ್ತೀಚಿನ ಸುದ್ದಿಗಳು

Related Articles