Thursday, September 19, 2024

Crop Insurance Premium-ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಕಟ್ಟಿದರೇ ಎಷ್ಟು ಪರಿಹಾರ ಬರುತ್ತೆ, ಎಂಬ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.

2024-25ನೇ ಸಾಲಿನ ಮುಂಗಾರು ಕರ್ನಾಟಕ ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬರುತ್ತಿದ್ದು, ರೈತರು ಉಳುಮೆಗೆ ಭೂಮಿ ತಯಾರಿ ಮಾಡಿಕೊಳ್ಳತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ರೈತರಿಗೆ ತಮ್ಮ ಬೆಳೆಗಳ ಬೆಳೆ ವಿಮೆ(Crop Insurance) ಮಾಡಿಸಿಕೊಳ್ಳಲು ರಾಜ್ಯ ಸರಕಾರದಿಂದ ಅವಕಾಶ ನೀಡಲಾಗಿದೆ.

2024-25ನೇ ಸಾಲಿನ ಮುಂಗಾರು ಹಂಗಾಮು ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ (Crop Insurance) ಮಾಡಿಕೊಳ್ಳಲು ಅವಕಾಶವಿದ್ದು, ಯಾವ ಬೆಳೆಗೆ ಎಷ್ಟು ಮೊತ್ತದ ಪ್ರಿಮೀಯಂ/ವಿಮೆ ಕಟ್ಟಬೇಕು? ಒಂದು ವೇಳೆ ನಿಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆ ಹಾನಿಯಾದಾಗ ವಿಮಾ ಘಟಕದಿಂದ ಬೆಳೆನಷ್ಟ ಪರಿಹಾರ ಹಣ ಎಷ್ಟು ಬರುತ್ತದೆ ಎಂಬ ಇತ್ಯಾದಿ ಮಾಹಿತಿಯನ್ನುಈ ಲೇಖನದಲ್ಲಿ ತಿಳಿಸಲಾಗಿದೆ.

ರೈತರು ತಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆಯ (Crop Insurance) ಅಧಿಕೃತ ಸಂರಕ್ಷಣೆ (Samrakshane) ವೆಬ್ಸೈಟ್ ನ್ನು ಭೇಟಿ ಮಾಡಿ ಈ ವರ್ಷ ಮುಂಗಾರು ಹಂಗಾಮಿನ ಬೆಳೆ ವಿಮೆಯ ಸಂಪೂರ್ಣ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: ಎರೆಹುಳು ಗೊಬ್ಬರ ಘಟಕ ರಚನೆಗೆ ಗ್ರಾಮ ಪಂಚಾಯತನಿಂದ ರೂ.20000 ಸಾವಿರ ಸಹಾಯಧನ!

Kharif Crop Insurance-2024:ಯಾವೆಲ್ಲ ಬೆಳೆಗೆ ವಿಮೆ ಕಟ್ಟಬೇಕು? ಎಂಬ ಸಂಪೂರ್ಣ ಮಾಹಿತಿ ಪಡೆಯುವ ವಿಧಾನ:

ಬೆಳೆವಿಮೆ(Crop Insurance) ಕುರಿತು ಎಲ್ಲಾ ಮಾಹಿತಿಯನ್ನು ರಾಜ್ಯ ಸರಕಾರದ ಸಂರಕ್ಷಣೆ (Samrakshane) ಪೊರ್ಟಲ್ ನಲ್ಲಿ ದಾಖಲಿಸಲಾಗಿದ್ದು,ರೈತರು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಈ ವರ್ಷ ಯಾವ ಬೆಳೆಗೆ ಎಷ್ಟು ವಿಮೆ ಪ್ರೀಮಿಯಂ ಪಾವತಿ ಮಾಡಬೇಕು ಮತ್ತು ವಿಮಾ ಮೊತ್ತ ಎಷ್ಟು? ಎಂದು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Step-1:ರೈತರು ತಮ್ಮ ಮೊಬೈಲ್‌ ನಲ್ಲಿ ಪ್ರಥಮದಲ್ಲಿ ಈ KHARIF CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2024-25 “ ಹಾಗೂ ಋತು: ಮುಂಗಾರು/kharif” ಎಂದು ಸೆಲೆಕ್ಟ್‌ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಬೇಕು.

ಸೂಚನೆ:ಮುಖಪುಟದಲ್ಲಿ ಮೇಲೆ ಕಾಣುವ ಕನ್ನಡ/English ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

Step-2: ಬಳಿಕ ಈ ಪೇಜಿನ ಕೆಳಗೆ “Farmers’ಕಾಲಂ ನಲ್ಲಿ ಕಾಣುವ “crop you can insure/ವಿಮೆ ಮಾಡಬಹುದಾದ ಬೆಳೆಗಳ” ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

Step-3:ಈ ಪೇಜ್‌ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು “Display” ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ನೀವು ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು? ಎನ್ನುವ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗದ ನಿರ್ವಹಣೆ ಹಾಗೂ ರಸಗೊಬ್ಬರ ಬಳಕೆ ಮಾಹಿತಿ.

Premium Calculator-ಯಾವ ಬೆಳೆಗೆ ಎಷ್ಟು ಪ್ರೀಮಿಯಂ ಕಟ್ಟಬೇಕು? ಎಷ್ಟು ಪರಿಹಾರ ಮೊತ್ತ ಬರುತ್ತೆ ಎಂಬ ಮಾಹಿತಿ ತಿಳಿಯಲು ಕೆಳಗಿನ ವಿಧಾನ ನೋಡಿ:

ವಿಧಾನ-1:ಮೊದಲಿಗೆ ಈ INSURANCE Premium Calculator ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ/ಹಳ್ಳಿ ಮತ್ತು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆ ವಿಸ್ತೀರ್ಣ ಕಾಲಂನಲ್ಲಿ ಎಷ್ಟು ಎಕರೆ ಎಂದು ನಮೂದು ಮಾಡಿ ಪಕ್ಕದಲ್ಲಿ ಗುಂಟ/ಸೆಂಟ್ಸ ಅನ್ನು ನಮೂದಿಸಿ “ಪ್ರೀಮಿಯಂ ವಿವರ” ಬಟನ್ ಮೇಲೆ ಕ್ಲಿಕ್ ಮಾಡಿದರೆ”ರೈತನ ಪಾಲು” ಕಾಲಂನಲ್ಲಿ ಎಷ್ಟು ಬೆಳೆ ವಿಮೆ ಕಟ್ಟಬೇಕು? ಹಾಗೂ ಹಾನಿಯಾದಲ್ಲಿ ವಿಮಾ ಕಂಪನಿ ನೀಡುವ ಪರಿಹಾರ ಮೊತ್ತದ ವಿವರ ಗೋಚರಿಸುತ್ತದೆ.

ಇತ್ತೀಚಿನ ಸುದ್ದಿಗಳು

Related Articles