Thursday, November 21, 2024

Crop insurance amount-ರಾಜ್ಯದ 17.61 ಲಕ್ಷ ರೈತರಿಗೆ 2.021 ಕೋಟಿ ಬೆಳೆ ವಿಮೆ ಹಣ ಜಮೆ ಮಾಡಲಾಗಿದೆ! ಚೆಕ್ ಮಾಡಿಕೊಳ್ಳುವ ವಿಧಾನ.

ನಮಸ್ಕಾರ ರೈತರೇ, 2023-24ನೇ ಸಾಲಿನ ಫಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ರೈತರಿಗೆ ಇಲ್ಲಿಯವರೆಗೆ 2.021 ಕೋಟಿ ಬೆಳೆ ವಿಮೆ(crop insurance) ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗಿದೆ. ಎಂದು ರಾಜ್ಯದ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ರೈತರ ಬೆಳೆಗಳಿಗೆ ಬೆಳೆ ವಿಮೆ(bele vime) ಸೌಲಭ್ಯವನ್ನು ಒದಗಿಸಲು ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆಯಡಿ 2023-24ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 17.61 ಲಕ್ಷ ಅರ್ಹ ರೈತರಿಗೆ 2.021 ಕೋಟಿ ಬೆಳೆ ವಿಮೆ ಹಣ ವರ್ಗಾವಣೆ ಮಾಡಲಾಗಿದೆ.

ಯಾರೆಲ್ಲ ರೈತರು 2023-24ನೇ ಸಾಲಿನಲ್ಲಿ ನಿಮ್ಮ ಬೆಳೆಗಳಿಗೆ ಬೆಳೆ ವಿಮೆ ಹಣವನ್ನು ಪಾವತಿ ಮಾಡಿದ್ದಿರಾ ಅವರಿಗೆ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಅದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ನೋಡಿಕೊಳ್ಳಬೇಕು ಎಂದು ಈ ಕೆಳಗೆ ನೀಡಲಾಗಿದೆ.

Bele vime amount-ಬೆಳೆ ವಿಮೆ ಹಣ ಪಾವತಿ ಮತ್ತು ಅರ್ಜಿ ಸ್ಥಿತಿಯನ್ನು ನೋಡುವ ವಿಧಾನ.

ರಾಜ್ಯ ಸರಕಾರ www.Samrakshane.karnataka.gov.in ವೆಬ್ಸೈಟ್‌ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಲಾಗಿದೆ ಸಂಪೂರ್ಣ ವಿವರ ಪಡೆಯಬಹುದು.

Step-1:ರೈತರು ತಮ್ಮ ಮೊಬೈಲ್‌ ನಲ್ಲಿ ಮೊದಲಿಗೆ ಈ CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2023-24 “ ಹಾಗೂ ಋತು: ಮುಂಗಾರು/kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಬೇಕು.

Step-2: ಬಳಿಕ ಈ ಪೇಜಿನ ಕೆಳಗೆ “Farmers”ಕಾಲಂ ನಲ್ಲಿ ಕಾಣುವ “check status ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು. ಮೊಬೈಲ್ ನಂಬರ್ ಹಾಕಿ captcha ಕೋಡ್ ನ್ನು ನಮೂದಿಸಿ “ಸರ್ಚ್” ಕ್ಲಿಕ್ ಮಾಡಿದರೆ ಆ ವರ್ಷದ ಬೆಳೆ ವಿಮೆ ಅರ್ಜಿ ವಿವರ ತೋರಿಸುತ್ತದೆ.

Step-3: ಇಲ್ಲಿ ಕಾಣಿಸುವ ಅರ್ಜಿಯ ವಿವರದ ಕೊನೆಯ ಕಾಲಂ ನಲ್ಲಿ ಕಾಣಿಸುವ “select” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮೆ ಆಗಿದ್ದರೆ “UTR details” ನಲ್ಲಿ ಆ ವರ್ಷ ಎಷ್ಟು ಹಣ ಜಮೆ ಆಗಿದೆ ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.

ಒಂದು ವೇಳೆ ನಿಮಗೆ ಬೆಳೆ ವಿಮೆ ಹಣ ಬರದೆ ಇದ್ದಲ್ಲಿ ಹತ್ತಿರದ ಕೃಷಿ ಬೆಳೆಗಳಿಗೆ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ತೋಟಗಾರಿಕೆ ಇಲಾಖೆಗೆ ಭೇಟಿ ಮಾಡಿ ವಿಚಾರಿಸಬಹುದು.

ಇತ್ತೀಚಿನ ಸುದ್ದಿಗಳು

Related Articles