Thursday, November 21, 2024

CROP INSURANCE-ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯಲು ಇಲ್ಲಿದೆ ಉಪಯುಕ್ತ ಮಾಹಿತಿ ನಿಮಗಾಗಿ!

ರೈತರು ಬೆಳೆ ವಿಮೆ ಮತ್ತು ಬೆಂಬಲ ಬೆಲೆಯ ಲಾಭ ಪಡೆಯಲು  ರಾಜ್ಯ ಸರಕಾರದಿಂದ ಹೊಸ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ರೈತರು ಮುಖ್ಯವಾಗಿ ತಮ್ಮ ಜಮೀನಿನ ಬೆಳೆಗಳನ್ನು ಬೆಳೆ ಸಮೀಕ್ಷೆ APP ಮೂಲಕ ಸಮೀಕ್ಷೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಬೆಳೆ ವಿಮೆ(crop insurance) ಯೋಜನೆಯಡಿ ಬೆಳೆ ವಿಮೆ ಪರಿಹಾರ ಪಡೆಯಲು ಮತ್ತು ಬೆಂಬಲ ಬೆಲೆ(msp yojana) ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಈ ಲೇಖನದಲ್ಲಿ ತಿಳಿಸಲಾದ ಅಂಶಗಳನ್ನು ಪಾಲನೆ ಮಾಡುವುದು ಅತ್ಯಗತ್ಯವಾಗಿದೆ.

ಇದಲ್ಲದೆ ಬೆಳೆ ನಷ್ಟವಾದ ಸಮಯದಲ್ಲಿ ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರವನ್ನು ಪಡೆಯಲು ಬೆಳೆ ಸಮೀಕ್ಷೆಯಲ್ಲಿ ಬೆಳೆ ಮಾಹಿತಿ ಸೇರಿದಂತೆ ಇತ್ಯಾದಿ ವಿವರವು ಸರಿಯಾಗಿರುವುದು ಮುಖ್ಯವಾಗಿರುತ್ತದೆ.

ಇದನ್ನೂ ಓದಿ:ಕೃಷಿ ಹೊಂಡ(ಕೆರೆ) ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಮರಳಿ ಅವಕಾಶವಿದೆ.

ನಿಮ್ಮ ಜಮೀನಿನ ಬೆಳೆ ಸಮೀಕ್ಷೆ(crop survey) ವರದಿ ಸರಿಯಾಗಿದ್ದರೇ ಮಾತ್ರ ಬೆಂಬಲ ಬೆಲೆ ಮತ್ತು ಬೆಳೆ ಹಾನಿ ಪರಿಹಾರದ ಆರ್ಥಿಕ ನೆರವು ಪಡೆಯಬಹುದು:

ಪ್ರತಿ ವರ್ಷ ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ರಾಜ್ಯದ ಎಲ್ಲಾ ಜಮೀನಿನ ಬೆಳೆ ಮಾಹಿತಿಯನ್ನು ಡಿಜಿಟಲ್‌ ಮಾದರಿಯಲ್ಲಿ ಸಂಗ್ರಹಣೆ ಮಾಡಲು “Crop Survey Mobile App” ಮೂಲಕ ಸಮೀಕ್ಷೆ ಮಾಡಿ ಎಲ್ಲಾ ರೈತರು ತಮ್ಮ ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎನ್ನುವ ಮಾಹಿತಿಯನ್ನು ಕಲೆಹಾಕಿ ಈ ವರದಿಯ ಆಧಾರದ ಮೇಲೆ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಬೆಳೆ ಪರಿಹಾರದ ಆರ್ಥಿಕ ಹಣವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

Crop Survey-ಬೆಳೆ ಸಮೀಕ್ಷೆಯನ್ನು ಹೇಗೆ ಮಾಡಲಾಗುತ್ತದೆ?

ಜಿ.ಪಿ.ಎಸ್‌ ಆಧಾರಿತ Crop Survey Mobile App ಮೂಲಕ ಖಾಸಗಿ ನಿವಾಸಿಗಳು ರೈತರ ಜಮೀನನ್ನು ನೇರ ಭೇಟಿ ಮಾಡಿ ಜಿ.ಪಿ.ಎಸ್‌ ಫೋಟೋ ತೆಗೆದು ಆ ಜಮೀನಿನಲ್ಲಿ ಬೆಳೆದಿರುವ ಬೆಳೆ ವಿವರಗಳನ್ನು ನಮೂದಿಸಿ ಅಪ್ಲೋಡ್‌ ಮಾಡಲಾಗುತ್ತದೆ. ಇದೇ ಮಾಹಿತಿ ರೈತರು ಪಹಣಿ/RTC ಗೆ ನಮೂದು ಮಾಡಲಾಗುತ್ತದೆ. ಇದಲ್ಲದೆ ರೈತರೇ ಸ್ವತಹ ತಮ್ಮ ಜಮೀನಿನ ಬೆಳೆಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೂಲಕ ಅವಕಾಶ ಸಹ ಇರುತ್ತದೆ.

Importance of crop survey-ಬೆಳೆ ಸಮೀಕ್ಷೆಯ ಪ್ರಾಮುಖ್ಯತೆ ನಿಮಗೆ ಗೊತ್ತೇ?

1)ರಾಷ್ಟೀಕೃತ ಬ್ಯಾಂಕ್‌ ಮತ್ತು ಸಹಕಾರಿ ಸಂಘಗಳಲ್ಲಿ ಕೃಷಿ/ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆಯ ವರದಿ ಅತೀ ಮುಖ್ಯವಾಗಿ ಬೇಕಾಗುತ್ತದೆ.

2)ಅತೀವೃಷ್ಠಿ ಮತ್ತು ಅನಾವೃಷ್ಟಿಯಿಂದ ಇಂತಹ ಸಮಯದಲ್ಲಿ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಲು ದಾಖಲೆಗಳನ್ನು ಸಲ್ಲಿಸಲು ಈ ಬೆಳೆ ಸಮೀಕ್ಷೆಯ ವರದಿಗಳು ತುಂಬಾ ಪ್ರಯೋಜನಕ್ಕೆ ಬರುತ್ತವೆ.

3)ಬೆಂಬಲ ಬೆಲೆಯಲ್ಲಿ ಯಾವುದೇ ಕೃಷಿ ಉತ್ಪನ್ನವನ್ನು ಮಾರಾಟ ಮಾಡಲು ಬೆಳೆ ಸಮೀಕ್ಷೆ ವರದಿಯಿಂದ ಸುಲಭ ಸಾಧ್ಯತೆಯಿದೆ.

4)ಬೆಳೆ ವಿಮೆಯ ಪರಿಹಾರ ಪಡೆಯಲು ಬೆಳೆ ಸಮೀಕ್ಷೆಯ ವರದಿಗಳು ತಾಳೆಯಾದರೇ ಮಾತ್ರ ಪರಿಹಾರ ಸಿಗಲು ಪರಿಗಣಿಸಲಾಗುತ್ತದೆ.

5)ಪ್ರತಿ ವರ್ಷ ನಿಮ್ಮ ಬೆಳೆಗಳಿಗೆ ವಿಮೆ ಮಾಡಲು ಬೆಳೆ ಸಮೀಕ್ಷೆ ವರದಿಗಳು ತಾಳೇ ಆಗಬೇಕು.

6)ಕೃಷಿ ಮತ್ತು ತೋಟಗಾರಿಕೆಯ ಸೌಲಭ್ಯಗಳನ್ನು ಪಡೆಯಲು ಬೆಳೆ ಸಮೀಕ್ಷೆಯ ವರದಿ ಬೇಕಾಗುವ ಸಾಧ್ಯತೆಗಳು ಬರಬಹುದು.

ಇದನ್ನೂ ಓದಿ:ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಇನ್ನೂ ಅವಕಾಶವಿದೆ ಇಲ್ಲಿದೆ ಅದರ ಲಿಂಕ್‌ ಮತ್ತು ಮಾಹಿತಿ ನಿಮಗಾಗಿ.

ಸೂಚನೆ: ಪ್ರತಿಯೊಬ್ಬ ರೈತರು ಬೆಳೆ ಸಮೀಕ್ಷೆ ಮಾಡಿಕೊಳ್ಳಿ ಅಥವಾ ಖಾಸಗಿ ನಿವಾಸಿಗಳಿಂದ ಮಾಡಿಸಿ.

ಬೆಳೆ ಸಮೀಕ್ಷೆಯ ಹೆಚ್ಚಿನ ಮಾಹಿತಿಗೆ ಕೃಷಿ,ತೋಟಗಾರಿಕೆ, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles