Thursday, September 19, 2024

Crop insurance-2024:ಬೆಳೆ ವಿಮೆ ಮುಕ್ತಾಯ ಇನ್ನೂ ಮೂರು ದಿನ ಮಾತ್ರ ಅವಕಾಶವಿದೆ! ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ ನೋಡವುದು ಹೇಗೆ ಇಲ್ಲಿದೆ ಮಾಹಿತಿ.

2024 ರ ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ಬೆಳೆ ವಿಮೆ ಮಾಡಿಸಲು ಇನ್ನೂ ಮೂರು ದಿನ ಮಾತ್ರ ಅವಕಾಶವಿದೆ! ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ ನೋಡಲು ಹೀಗೆ ಮಾಡಿ.

ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಬೆಳೆ ವಿಮೆ (CROP INSURANCE) ಮಾಡಿಕೊಳ್ಳಲು ಅವಕಾಶವಿದ್ದು ಯಾವ ಬೆಳೆಗೆ ಎಷ್ಟು ಮೊತ್ತದ ಪ್ರೀಮಿಯಂ ಪಾವತಿ ಮಾಡಬೇಕು? ಒಂದು ವೇಳೆ ನಿಮ್ಮ ಹಳ್ಳಿ ವ್ಯಾಪ್ತಿಯ ವಿಮಾ ಘಟಕದಲ್ಲಿ ಬೆಳೆ ನಷ್ಟ ಆದಾಗ ಎಷ್ಟು ಪರಿಹಾರ ಬರುತ್ತದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ರಾಜ್ಯ ಸರಕಾರದ ಸಂರಕ್ಷಣೆ(Samrakshane) ಪೋರ್ಟಲ್‌ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಈ ವರ್ಷದ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂದು ನಿಮ್ಮ ಮೊಬೈಲ್‌ ನಲ್ಲಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: ರೈತರೇ 2023 ರಲ್ಲಿ ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಪಹಣಿ/RTC ಗೆ ದಾಖಲಾದ ಬೆಳೆ ಯಾವುದು ಎಂದು ತಿಳಿಯಲು ಇಲ್ಲಿದೆ ಮಾಹಿತಿ!

ಬೆಳೆ ವಿಮೆ ಮಾಡಿಸಲು ಇನ್ನೂ ಮೂರು ದಿನ ಮಾತ್ರ ಅವಕಾಶವಿದೆ! ನಿಮ್ಮ ಬೆಳೆ ವಿಮೆ ಕಟ್ಟಲಾಗಿದೆಯೇ ನೋಡವುದು ಹೇಗೆ?

Step-1:ರೈತರು ತಮ್ಮ ಮೊಬೈಲ್‌ ನಲ್ಲಿ ಪ್ರಥಮದಲ್ಲಿ ಈ KHARIF CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2024-25 “ ಹಾಗೂ ಋತು: ಮುಂಗಾರು/kharif” ಎಂದು ಸೆಲೆಕ್ಟ್‌ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಬೇಕು.

Step-2: ಬಳಿಕ ಈ ಪೇಜಿನ ಕೆಳಗೆ “Farmers’ಕಾಲಂ ನಲ್ಲಿ ಕಾಣುವ “CHECK STATUS/ವಿಮೆ ಮಾಡಿದ” ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

Step-3:ಈ ಪೇಜ್‌ ನಲ್ಲಿ ನಿಮ್ಮ ವಿಮೆ ನಂಬರ್‌, ಆಧಾರ್‌ ಕಾರ್ಡ್‌ ಸಂಖ್ಯೆ ಅಥವಾ ಮೊಬೈಲ್‌ ನಂಬರ್‌ ಹಾಕಿ ನಂತರ ಕ್ಯಾಪ್ಚರ್‌ ಕೋಡ್‌ ಹಾಕಿ  ಸರ್ಚ್‌ ಮೇಲೆ ಕ್ಲಿಕ್‌ ಮಾಡಿದರೆ ನೀವು ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ.

Samrakshane.karnataka.gov.in ವೆಬ್ಸೈಟ್‌ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮುಂಗಾರು ಹಂಗಾಮಿಗೆ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಬೇಕು ಮತ್ತು ವಿಮಾ ಮೊತ್ತ ಎಷ್ಟು? ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಇತ್ಯಾದಿ ಸಂಪೂರ್ಣ ವಿವರ ಪಡೆಯಬಹುದು.

Step-1:ರೈತರು ತಮ್ಮ ಮೊಬೈಲ್‌ ನಲ್ಲಿ ಪ್ರಥಮದಲ್ಲಿ ಈ KHARIF CROP INSURANCE ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2024-25 “ ಹಾಗೂ ಋತು: ಮುಂಗಾರು/kharif” ಎಂದು ಸೆಲೆಕ್ಟ್‌ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ಮುಂದುವರೆಯಬೇಕು.

ಸೂಚನೆ:ಮುಖಪುಟದಲ್ಲಿ ಮೇಲೆ ಕಾಣುವ ಕನ್ನಡ/English ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

Step-2: ಬಳಿಕ ಈ ಪೇಜಿನ ಕೆಳಗೆ “Farmers’ಕಾಲಂ ನಲ್ಲಿ ಕಾಣುವ “crop you can insure/ವಿಮೆ ಮಾಡಬಹುದಾದ ಬೆಳೆಗಳ” ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

Step-3:ಈ ಪೇಜ್‌ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು “Display” ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ನೀವು ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು? ಎನ್ನುವ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇಲ್ಲಿಯವರೆಗೂ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಮಾಹಿತಿ.

ಬೆಳೆ ವಿಮೆ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ಹಾಗೂ ತೋಟಗಾರಿಕೆ ಇಲಾಖೆ ಭೇಟಿ ಮಾಡಿ ಅಥವಾ ನಿಮ್ಮ ಹತ್ತಿರದ ಕೃಷಿ ಪತ್ತಿನ ಸಹಕಾರಿ ಸಂಘ, ಕೃಷಿ ಸೊಸೈಟಿ ಸಂಘಗಳಿಗೆ ಭೇಟಿ ಮಾಡಿ ಮಾಹಿತಿ ಪಡೆದು ಕೊಳ್ಳಬಹುದು.

ಬೆಳೆ ವಿಮೆ ಮಾಡಿಸಲು ನಿಮ್ಮ ಹತ್ತಿರದ ಕೃಷಿ ಸಹಕಾರಿ ಬ್ಯಾಂಕ್‌ ಅಥವಾ ಡಿ.ಸಿ.ಸಿ ಬ್ಯಾಂಕ್‌, ಕರ್ನಾಟಕ ನಾಗರಿಕ ಸೇವಾ ಕೇಂದ್ರ ಗಳಿಗೆ ಭೇಟಿ ಮಾಡಿ.

ಇತ್ತೀಚಿನ ಸುದ್ದಿಗಳು

Related Articles