Thursday, November 21, 2024

Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:ಬೆಳೆ ವಿಮೆ ಚೆಕ್ ಮಾಡುವ ಲಿಂಕ್ ಇದೆ ಪರೀಕ್ಷಿಸಿಕೊಳ್ಳಿ;

2023-24 ನೇ ಸಾಲಿನಲ್ಲಿ ಪಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿ ತಮ್ಮ ಬೆಳೆಗಳಿಗೆ (Crop insurance) ಮಾಡಿಕೊಂಡಿರುವ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರ ವರ್ಗಾವಣೆ ಕುರಿತು ಕೃಷಿ ಸಚಿವರು ನೀಡಿರುವ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪಸಲ್ ಬೀಮಾ ಯೋಜನೆಯಡಿಯಲ್ಲಿ ತಾವು ಬೆಳೆದಿರುವ ಬೆಳೆ ವಿಮೆಗಾಗಿ ಈ ವರ್ಷ ಸುಮಾರು 25 ಲಕ್ಷ ಜನ ರೈತರು ಹೆಸರನ್ನು ನೋಂದಾಯಿಸಿಕೊಂಡಿದ್ದು ಮಾರ್ಚ್ -2024 ತಿಂಗಳ ಅಂತ್ಯದ ವೇಳೆಗೆ 13 ಲಕ್ಷ ರೈತರಿಗೆ 1,400 (Crop insurance amount) ಬೆಳೆ ವಿಮೆ ವರ್ಗಾಹಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಮಾಹಿತಿ ತಿಳಿಸಿರುತ್ತಾರೆ.

ಪ್ರಸ್ತುತ 8 ಲಕ್ಷ ರೈತರಿಗೆ 600 ಕೋಟಿ ಬೆಳೆವಿಮೆ ಹಣ ಪಾವತಿಯಾಗಿದೆ ಉಳಿದ 800 ಕೋಟಿ ಬೆಳೆವಿಮೆ ಹಣವನ್ನು ಇದೇ ಮಾರ್ಚ ತಿಂಗಳ ಕೊನೆಯಲ್ಲಿ ಪಾವತಿಸಲಾಗುವುದು ಎಂದು ಮಾನ್ಯ ಕೃಷಿ ಸಚಿವರು ಮಾಹಿತಿಯನ್ನು ನೀಡಿರುತ್ತಾರೆ.

ಇದನ್ನೂ ಓದಿ: PM Kisan Scheme 2024: PM kisan ಹೊಸದಾಗಿ ಅರ್ಜಿ ಸಲ್ಲಿಸಲು ಮಾನದಂಡಗಳೇನು??? ಕೇಂದ್ರ ಸರ್ಕಾರದ ವಾರ್ಷಿಕ 6000/-ರೂ ಪಡೆಯಲು ಅರ್ಹತೆಗಳೇನು?

Crop insurance status-2024: ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಅರ್ಜಿ ಸ್ಥಿತಿ, ಹಣ ಜಮಾ ವಿವರ ಇತ್ಯಾದಿ ಮಾಹಿತಿಯನ್ನು ನೋಡಬಹುದು:

ರಾಜ್ಯ ಸರಕಾರದ (https://samrakshane.karnataka .gov.in) ಜಾಲತಾಣಕ್ಕೆ ಭೇಟಿ ಮಾಡಿ ಬೆಳೆ ವಿಮೆ ಅರ್ಜಿ ಕುರಿತು ಈ ಕೆಳಗಿನ ವಿಧಾನವನ್ನು ಅನುಸರಿಸಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಹಂತ -1: ಈ ಮೇಲೇ ಕಾಣಿಸಿರುವ ಲಿಂಕ್ ಪೇಜ್ ತೆರೆದ ಮೇಲೆ ನಂತರ Bele vime statuscheck ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಂರಕ್ಷಣೆ ಜಾಲತಾಣವನ್ನು ಭೇಟಿ ಮಾಡಬೇಕು. ಬಳಿಕ ಇಲ್ಲಿ “ವರ್ಷದ ಆಯ್ಕೆ / Select Insurance Year” 2023-24 ಎಂದು ವರ್ಷವನ್ನು ಆಯ್ಕೆ ಮಾಡಿಕೊಂದು ನಂತರ ಋತು / Select Insurance Season ಕಾಲಂ ನಲ್ಲಿ Kharif ಎಂದು ಆಯ್ಕೆ ಮಾಡಿ ಮುಂದೆ/GO ಮೇಲೆ ಓತ್ತಿ.

ಹಂತ: 2: ಮುಂದೆ ಈ ಪೇಜ್ ನಲ್ಲಿ “Check Status” ಬಟನ್ ಮೇಲೆ ಕ್ಲಿಕ್ Check Status By Type ವಿಭಾಗದಲ್ಲಿ “Mobile No” ಗುರುತು ಮಾಡಿಕೊಂಡು ಅರ್ಜಿದಾರರ ಮೊಬೈಲ್ ಸಂಖ್ಯೆಯನ್ನು ಹಾಕಬೇಕು ಅಥವಾ ಆಧಾರ್ ಕಾರ್ಡ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಆಧಾ‌ರ್ ಸಂಖ್ಯೆಯನ್ನು ಹಾಕಬಹುದಾಗಿರುತ್ತದೆ.

ಮೊಬೈಲ್ ನಂಬ‌ರ್ ಅನ್ನು ಹಾಕಿದ ನಂತರ ಕ್ಯಾಪ್ಟ್ ಕೋಡ್ ಅನ್ನು ನಮೂದಿಸಿ Search ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ವಿವರ ಕೆಳಗಡೆ ಗೋಚರಿಸುತ್ತದೆ.

ಹಂತ: 3: ನಂತರ “Select” ಗುಂಡಿಯನ್ನು ಓತ್ತಿ ರೈತರು ಸಲ್ಲಿಸಿರುವ ಬೆಳೆ ವಿಮೆ ಅರ್ಜಿ ಯಾವ ಹಂತದಲ್ಲಿದೆ ಎನ್ನುವ ಸಂಪೂರ್ಣ ವಿವರವಾದ ಮಾಹಿತಿ ನೋಡಬಹುದು.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವವರ ಪಟ್ಟಿ ಮತ್ತು ಕಾರಣ :

Proposal Status: ವಿಭಾಗದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂದು ಮಾಹಿತಿ ನೋಡಬಹುದಾಗಿದೆ..

UTR Details: ಈ ವಿಭಾಗದಲ್ಲಿ ನಿಮಗೆ ಬೆಳೆ ವಿಮೆ ಪರಿಹಾರ ಜಮಾ ಅಗಿದರೆ ಯಾವ ದಿನ ಜಮಾ ಅಗಿದೆ? ಎಷ್ಟು ವಿಮೆ ಜಮಾ ಆಗಿದೆ? UTR ನಂಬರ್ ವಿವರ ಗೋಚರಿಸುತ್ತದೆ.
ನಂತರ View Details ಆಯ್ಕೆಯನ್ನು ಓತ್ತಿದರೆ ಸರ್ವೆ ನಂಬರ್‍ ಸಹಿತ ವಿಮೆಯ ಎಲ್ಲಾ ಮಾಹಿತಿ ಒಳಗೊಂಡ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Indian Weather Forecast: ಭಾರತೀಯ ಹವಾಮಾನ ಇಲಾಖೆ ಶುಭಸುದ್ದಿ : ಮುಂಗಾರಿನಲ್ಲಿ ಭಾರಿ ಮಳೆ ಸಾಧ್ಯತೆ!! ಕಾರಣ ಇಲ್ಲದೆ,

ಇತ್ತೀಚಿನ ಸುದ್ದಿಗಳು

Related Articles