Wednesday, November 13, 2024

Computer tally free training-ಕಂಪ್ಯೂಟರ್ ಟ್ಯಾಲಿ ಉಚಿತ ತರಬೇತಿಗೆ ರುಡ್ ಸೆಟ್ ಸಂಸ್ಥೆವತಿಯಿಂದ ಅರ್ಜಿ ಆಹ್ವಾನ!

ಧರ್ಮಸ್ಥಳ(ಉಜಿರೆ) ರುಡ್ ಸೆಟ್ ಸಂಸ್ಥೆ ದಕ್ಷಿಣ ಕನ್ನಡ(ಮಂಗಳೂರು) ಜಿಲ್ಲೆ ವತಿಯಿಂದ ಉಚಿತ ಊಟ-ವಸತಿ ಸಹಿತ ಕಂಪ್ಯೂಟರ್ ಟ್ಯಾಲಿ ಮತ್ತು ವಿವಿಧ ಬಗೆಯ ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲಿ ಇವಾಗ ದಿನಾಂಕ 05/ನವೆಂಬರ್/2024 ರಿಂದ 04/ಡಿಸೆಂಬರ್/2024 (1ತಿಂಗಳು) ವರೆಗೆ ಕಂಪ್ಯೂಟರ್ ಟ್ಯಾಲಿ(ಅಕೌಂಟಿಂಗ್) ಕುರಿತು ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ.

ಈ ಒಂದು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ವಿವಿಧ ಬಗೆಯ ತರಬೇತಿ ನೀಡುವುದರ ಜೊತೆಗೆ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬೇಕಾಗುವ ಬಂಡವಾಳಕ್ಕೆ ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನವನ್ನು ಸಹ ನೀಡುತ್ತಾರೆ.

ನಮ್ಮ ಸಂಸ್ಥೆಯಲ್ಲಿ ದಿನಾಂಕ 05/ನವೆಂಬರ್/2024 ರಿಂದ 04/ಡಿಸೆಂಬರ್/2024 (1ತಿಂಗಳು) ವರೆಗೆ ಕಂಪ್ಯೂಟರ್ ಟ್ಯಾಲಿ(ಅಕೌಂಟಿಂಗ್) ಕುರಿತು ಉಚಿತ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಆದ ಕಾರಣ ಈ ತರಭೇತಿಯನ್ನು  ಕಲಿಯಲು ಆಸಕ್ತ ಇರುವವರು ಅರ್ಜಿ ಸಲ್ಲಿಸಲು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ:ರೈತರ ನೋಂದಣಿ (FID) ಎಲ್ಲಿ ಮಾಡಿಸಬೇಕು ಮತ್ತು ಅದರ ಪ್ರಯೋಜನಗಳು!

Free training details-ಈ ಕೆಳಗೆ ತಿಳಿಸಿದ ತರಭೇತಿಗಳು ಉಚಿತವಾಗಿ ನಡೆಯಲಿವೆ.

1.ಸಿಸಿ ಟಿವಿ ಕ್ಯಾಮೆರಾ ಇನ್ಸ್ಟಾಲೆಷನ್(13 ದಿನಗಳು)

2. ಬೇಕರಿ ಆಹಾರ ತಯಾರಿಕೆ (1 ತಿಂಗಳು)

3.ಅಣಬೆ ಬೇಸಾಯ (10 ದಿನಗಳು)

4.ಮೋಟಾರ್ ರಿವೈಂಡಿಗ್ ವರ್ಕ್ಸ್ (1 ತಿಂಗಳು)

5.ಬ್ಯೂಟಿಸಿಯನ್ ತರಬೇತಿ (1 ತಿಂಗಳು)

6. ಫಾಸ್ಟ ಫುಡ್ ತಯಾರಿಕೆ (10 ದಿನಗಳು)

ಇದಲ್ಲದೇ ಇನ್ನೂ ಹಲವಾರು ಸ್ವ-ಉದ್ಯೋಗವನ್ನು ಕೈಗೊಳ್ಳುವಂತಹ ತರಬೇತಿಗಳನ್ನು ನೀಡಲಾಗುತ್ತದೆ.

How to join training- ತರಬೇತಿಯನ್ನು ಯಾರೆಲ್ಲ ಪಡೆಯಬಹುದು?

1.ಅಭ್ಯರ್ಥಿಯು ಗ್ರಾಮೀಣ ಪ್ರದೇಶದವರಾಗಿರಬೇಕು.

2.ವಯೋಮಿತಿ 19 ರಿಂದ 45 ವಯಸ್ಸಿನ ಒಳಗಿರಬೇಕು.

3.ಅಭ್ಯರ್ಥಿಯು ಗ್ರಾಮೀಣ ಭಾಗದ ಬಿಪಿಲ್ ಅಥವಾ ಅಂತ್ಯೋದಯ ಅಥವಾ ನರೇಗಾ ಜಾಬ್ ಕಾರ್ಡ್ ಹೊಂದಿರಬೇಕು.

ಇದನ್ನೂ ಓದಿ:ಪಿಎಂ ಕಿಸಾನ್ 18ನೇ ಕಂತು ನಿಮಗೆ ಜಮೆ ಆಗಿದೆಯೇ ಹೀಗೆ ತಿಳಿದುಕೊಳ್ಳಿ!

ವಿಶೇಷ ಸೂಚನೆ: ತರಬೇತಿಯು ಸಂಪೂರ್ಣ ಊಟ ವಸತಿಯೊಂದಿಗೆ ವಸತಿ ಸಹಿತ ಉಚಿತವಾಗಿರುತ್ತದೆ. ಮತ್ತು ತರಬೇತಿಯ ಕೊನೆಯ ದಿನ ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ವಿವರ ಮತ್ತು ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ:

ರುಡ್ ಸೆಟ್ ಸಂಸ್ಥೆ

ಉಜಿರೆ,ದಕ್ಷಿಣ ಕನ್ನಡ (ಮಂಗಳೂರು)

Near ಧರ್ಮಸ್ಥಳ-574240

08256236404/9591044014/9448348569/9980885900

9902594791.Whatspp ಮೂಲಕ ಅರ್ಜಿ ಸಲ್ಲಿಸಲು:6364561982

Online ಮೂಲಕ ಅರ್ಜಿ ಸಲ್ಲಿಸಲು:rudsetitraining.org

ಇತ್ತೀಚಿನ ಸುದ್ದಿಗಳು

Related Articles