ಕೇಂದ್ರ ಸರಕಾರ ಜಾರಿಗೊಳಿಸಿರುವ ‘ಕೇರಾ’ ಸುರಕ್ಷಾ ವಿಮಾ ಯೋಜನೆಯು ತೆಂಗಿನ ಮರಗಳನ್ನು ಏರುವ ಕೆಲಸ ನಂಬಿರುವವರಿಗೆ ವರದಾನವಾಗಿದೆ. ತೆಂಗು ಅಭಿವೃದ್ಧಿ ಮಂಡಳಿ(CDB) coconut development board ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮೂಲಕ ಈ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.
ಅಪಾಯಕಾರಿ ಕೆಲಸದಲ್ಲಿ ತೊಡಗಿರುವವರಿಗೆ ಆರ್ಥಿಕವಾಗಿಸುರಕ್ಷತೆಯನ್ನು ಒದಗಿಸಲು ಅನೇಕ ವಿಮಾ ಯೋಜನೆಗಳ(kera Coconut insurance) ನಮ್ಮ ದೇಶದಲ್ಲಿ ಜಾರಿಯಲ್ಲಿದೆ. ಇದು ತೆಂಗಿನ ಮರ ಹತ್ತುವವರಿಗೆ, ನೀರಾ ಇಳಿಸುವವರಿಗೆ ಮತ್ತು ಇತರ ಪೂರಕ ವೃತ್ತಿಯಲ್ಲಿರುವವರಿಗೆ “ಕೇರಾ ಸುರಕ್ಷಾ” ಯೋಜನೆಯಡಿ ರೂ.7ಲಕ್ಷದವರೆಗೂ ವಿಮೆ ಪಡೆಯಲು ಅವಕಾಶವಿರುತ್ತದೆ.
‘ಕೇರಾ’ ಸುರಕ್ಷಾ ವರದಾನವು ತೆಂಗಿನ ಮರವನ್ನೇರಿ ಎಳನೀರು, ಕಾಯಿ ಕೀಳುವವರಿಗೆ, ನೀರಾ ಇಳಿಸುವವರಿಗೆ, ತೆಂಗಿನಕಾಯಿ ಕೊಯ್ಲಿ ಮಾಡುವವರಿಗೆ, ತೋಟಗಾರಿಕಾ ಫಾರ್ಮ್ ಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ.
Kera suraksha insurance-ಕೇರಾ ಸುರಕ್ಷಾ ವಿಮಾ ಮೊತ್ತದ ವಿವರ:
1)ಅರ್ಜಿದಾರರ ಸಾವು/ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ ರೂ.7ಲಕ್ಷ
2)ಭಾಗಶ ಅಂಗವೈಕಲ್ಯಕ್ಕೆ ಒಳಗಾದರೆ ರೂ.3.5ಲಕ್ಷ
3)ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 2ತಿಂಗಳ ವರೆಗೆ ಔಷಧ ಮತ್ತು ಇನ್ನಿತರ ಆಸ್ಪತ್ರೆ ವೆಚ್ಚದ ಮರುಪಾವತಿ ರೂ.2ಲಕ್ಷ
4)ತಾತ್ಕಾಲಿಕ ಅಂಗವೈಕಲ್ಯದ ಸಮಯದಲ್ಲಿ ಗರಿಷ್ಠ 6 ವಾರದವರೆಗೆ ಪರಿಹಾರ ನೀಡಲು ರೂ.21,000
5)ಅಪಘಾತ ಮತ್ತು ಸಾವಿನ ಸಂಧರ್ಭದಲ್ಲಿ ಅಂಬುಲೆನ್ಸ ಶುಲ್ಕ ರೂ.3,500
6)ಅಂತ್ಯಕ್ರಿಯೆ ವೆಚ್ಚ ಭರಿಸಲು ಸಹಾಯಧನ ರೂ.5,500
How to apply-ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು?
ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಈ ಕೆಳಗೆ ನೀಡಿರುವ ವೆಬ್ಸೈಟ್ ಲಿಂಕ್ ನ್ನು ಬಳಕೆ ಮಾಡಿಕೊಂಡು ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ವಿವರಗಳನ್ನು ಭರ್ತಿ ಮಾಡಿಕೊಂಡು “ ನಿರ್ದೇಶಕರು, ತೆಂಗು ಅಭಿವೃದ್ಧಿ ಮಂಡಳಿ, ಹುಳಿಮಾವು, ಬನ್ನೇರುಘಟ್ಟ ರಸ್ತೆ ಬೆಂಗಳೂರು-560076 ದೂರವಾಣಿ ಸಂಖ್ಯೆ:080-26593750, 080-26593743” ಈ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
Application documents-ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
1)ಅರ್ಜಿದಾರರ ಆಧಾರ ಪ್ರತಿ
2)ಬ್ಯಾಂಕ್ ಪಾಸ್ ಬುಕ್ ಪ್ರತಿ
3)ಅರ್ಜಿದಾರರ ವಯಸ್ಸಿನ ಪ್ರಮಾಣ ಪತ್ರ/ಪುರಾವೆ
4)ಫೋಟೋ
5)ಮೊಬೈಲ್ ನಂಬರ್
For more informtions-ಇನ್ನೂ ಹೆಚ್ಚಿನ ಮಾಹಿತಿಗಾಗಿ:
ತೆಂಗು ಅಭಿವೃದ್ಧಿ ಮಂಡಳಿ ವೆಬ್ಸೈಟ್-click here
ಕೇರಾ ಸುರಕ್ಷಾ ಅರ್ಜಿ ನಮೂನೆ:click here