Saturday, October 5, 2024

ನಾಟಿ ಭತ್ತದ ಬೆಳೆಯಲ್ಲಿ ರಾಸಾಯನಿಕ ಗೊಬ್ಬರ ನಿರ್ವಹಣಾ ಕ್ರಮ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಭತ್ತ ಮುಖ್ಯ ಮಳೆ ಆಶ್ರಿತ ಬೆಳೆಯಾಗಿರುತ್ತದೆ.ಈ ಬೆಳೆಗೆ ಶಿಪರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ನೀಡುವುದು ಅವಶ್ಯವಾಗಿದೆ. ರೈತರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರಸಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ ಹೊಂದಾಣಿಕೆ ಮಾಡಿ ಬೆಳೆಗಳಿಗೆ ನೀಡುವುದು ಅವಶ್ಯವಾಗಿರುತ್ತದೆ.

ಆದ್ದರಿಂದ ಶಿಪಾರಸ್ಸು ಮಾಡಿದ ವಿವಿಧ ಪೋಷಕಾಂಶಗಳನ್ನು ಬೆಳೆಗಳಿಗೆ ಒದಗಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ನೇರ ಹಾಗೂ ಸಂಯಯುಕ್ತ (ಕಾಂಪ್ಲೆಕ್ಸ್) ರಸಗೊಬ್ಬರಗಳನ್ನು ವಿವಿಧ ರೀತಿಯಲ್ಲಿ ಹೊಂದಾಣಿಕೆ ಮಾಡಿ ಬೆಳೆಗಳಿಗೆ ವಿವಿಧ ಹಂತಗಳಲ್ಲಿ ಒದಗಿಸುವ ಕ್ರಮವನ್ನು ಈ ಕೆಳಗಿನ ಕೋಷ್ಠಕದಲ್ಲಿ ನೀಡಲಾಗಿದೆ. ರೈತರು ಇದರಲ್ಲಿ ಯವುದಾದರೂ ಒಂದು ಹೊಂದಾಣಿಕೆಯನ್ನು ಮಾಡಿ ಬೆಳೆಗಳಿಗೆ ನೀಡಬಹುದಾಗಿದೆ.

ವಿವರಸಾರಜನಕ(ಕೆಜಿ)ರಂಜಕ(ಕೆ.ಜಿ)ಪೊಟ್ಯಾಷ್(ಕೆಜಿ)
ಶಿಪಾರಸ್ಸುಮಾಡಿದಒಟ್ಟೂಗೊಬ್ಬರದಪ್ರಮಾಣ (ಪ್ರತಿಎಕರೆಗೆ)303035
ನಾಟಿಮಾಡುವಮುನ್ನಕೊಡಬೇಕಾದಮೂಲಗೊಬ್ಬರ153017.5
ಮರಿಬರುವಹಂತದಲ್ಲಿ(ನಾಟಿಮಾಡಿಯಾದ 25 ರಿಂದ 30 ದಿವಸಗಳು) ಕೊಡಬೇಕಾದಮೊದಲನೆಯಮೇಲುಗೊಬ್ಬರ7.58.75
ಗರ್ಭಾಂಕುರಹಂತದಲ್ಲಿ (ನಾಟಿಯಾದ 45 ರಿಂದ 50 ದಿವಸಗಳು) ಕೊಡಬೇಕಾದಎರಡನೆಯಮೇಲುಗೊಬ್ಬರ7.58.75

ವಿವಿಧ ಗೊಬ್ಬರಗಳ ಗುಂಪುಗೊಬ್ಬರಗಳುಮೂಲಗೊಬ್ಬರ (ಕೆಜಿ)ವಿವಿಧ ಗೊಬ್ಬರಗಳ ಗುಂಪುಗೊಬ್ಬರಗಳುಮೂಲಗೊಬ್ಬರ(ಕೆಜಿ)
ನೇರ ಗೊಬ್ಬರಗಳ ಹೊಂದಾಣಿಕೆಯೂರಿಯಾ3320:20:0:13  ಜೊತೆಹೊಂದಾಣಿಕೆ20:20:0:13 75
ರಾಕ್ಪಾಸ್ಪೇಟ್150ಯೂರಿಯಾ0
ಪೊಟ್ಯಾಷ್30ರಾಕ್ಪಾಸ್ಪೇಟ್75
ಪೊಟ್ಯಾಷ್29
ಡಿ.ಎ.ಪಿ. ಜೊತೆಹೊಂದಾಣಿಕೆಯೂರಿಯಾ710:26:26 ಜೊತೆಹೊಂದಾಣಿಕೆ10:26:2667
ಡಿ.ಎ.ಪಿ.65ಯೂರಿಯಾ18
ರಾಕ್ಪಾಸ್ಪೇಟ್ರಾಕ್ಪಾಸ್ಪೇಟ್62.5
ಪೊಟ್ಯಾಷ್30ಪೊಟ್ಯಾಷ್0
ಸುಫಲಾ (15:15:15) ಜೊತೆಹೊಂದಾಣಿಕೆಸುಫಲಾ (15:15:15)100ಸಂಪತ್ತಿ (12:32:16) ಜೊತೆಹೊಂದಾಣಿಕೆಸಂಪತ್ತಿ (12:32:16)94
ಯೂರಿಯಾ10ಯೂರಿಯಾ8
ರಾಕ್ಪಾಸ್ಪೇಟ್75ರಾಕ್ಪಾಸ್ಪೇಟ್0
ಪೊಟ್ಯಾಷ್4ಪೊಟ್ಯಾಷ್4

ಮೇಲುಗೊಬ್ಬರ ಕೊಡುವ ವಿವರ

 ಮೊದಲನೆ ಮೇಲುಗೊಬ್ಬರ(ಕೆಜಿ) ಮರಿ ಬರುವ ಹಂತದಲ್ಲಿ(ನಾಟಿಯಾದ 25 ರಿಂದ 30 ದಿವಸಗಳು)ಎರಡನೆಯ ಮೇಲುಗೊಬ್ಬರ (ಕೆ.ಜಿ) ಗರ್ಭಾಂಕುರ ಹಂತದಲ್ಲಿ (ನಾಟಿಯಾದ 45 ರಿಂದ 50 ದಿವಸಗಳು)
ಯೂರಿಯಾ16.516.5
ಪೊಟ್ಯಾಷ್15.015.0

ಇತ್ತೀಚಿನ ಸುದ್ದಿಗಳು

Related Articles