ಆತ್ಮೀಯ ರೈತ ಬಾಂದವರೇ ಮನೆಯಲ್ಲಿ ಹಸು ಮತ್ತು ದನ ಕರುಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಿರಾ? ಹಸಿ ಮೇವು ಮತ್ತು ಒಣ ಮೇವು ಕತ್ತರಿಸುವ ಯಂತ್ರದ ಅವಶ್ಯಕತೆ ಇದೆಯೇ ? ಹಾಗಿದ್ದರೆ ಖರೀದಿಸಲು ಪಶುಪಾಲನಾ ಇಲಾಖೆಯಿಂದ ಅರ್ಥಿಕವಾಗಿ ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ರೈತ ಬಾಂದವರು ಈ ಒಂದು ಯೋಜನೆ ಉಪಯೋಗವನ್ನು ಪಡೆಯಬಹುದಾಗಿರುತ್ತದೆ.
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು (chaff cutter subsidy) ಖರೀದಿಸಲು ಅರ್ಥಿಕವಾಗಿ ಸಹಾಯ ಧನ ಒದಗಿಸುವ ನಿಟ್ಟಿನಲ್ಲಿ ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಪಶುಪಾಲನಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯಂತ್ರದ ಕುರಿತು ಪ್ರಕಟಣೆ ವಿವರ ಹೀಗಿದೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖಾ ವತಿಯಿಂದ 2023-24 ನೇ ಸಾಲಿನ ರಾಷ್ಠಿಯ ಕೃಷಿ ವಿಕಾಸ ಯೋಜನೆಯಡಿ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಗೆ ಸಂಬಂಧಿಸಿದ ಇತರೆ ಯೋಜನೆಗಳು:
ಇದನ್ನೂ ಓದಿ: ಹದ್ದಬಸ್ತು, ತತ್ಕಾಲ್ ಪೋಡಿ ಈ ಎಲ್ಲಾ ಭೂದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆ ಇನ್ನೂ ಸುಲಭ:
ಇದನ್ನೂ ಓದಿ: ಕಲ್ಪವೃಕ್ಷ (ತೆಂಗಿನಮರಕ್ಕೂ) ವಿಮೆ! ಎಲ್ಲಿ ಅರ್ಜಿಸಲ್ಲಿಸಬೇಕು ?
ಇದನ್ನೂ ಓದಿ: Crop insurance: ಬೆಳೆವಿಮೆ ಹಣ ದೊರೆಯಲು ಎಲ್ಲಾ ರೈತರು ಈ ಕೆಲಸ ಮಾಡುವುದು ಕಡ್ಡಾಯ:
ಇದನ್ನೂ ಓದಿ: ಬರ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:
chaff cutter subsidy : ಮೇವು ಕತ್ತರಿಸುವ ಯಂತ್ರ ಸಹಾಯಧನದ ಮೊತ್ತ:
ಈ ಯೋಜನೆಯಡಿಯಲ್ಲಿ ಆಯ್ಕೆಯಾಗುವ ಪ್ರತಿ ಫಲಾನುಭವಿಗೆ 2HP ಮೇವು ಕತ್ತರಿಸುವ ಯಂತ್ರವನ್ನು ವಿತರಣೆ ಮಾಡಲಾಗುವುದು. ಘಟಕದ ವೆಚ್ಚ ರೂ 33, 000 /-ಇದ್ದು ಶೇ.50 ರ ಸಹಾಯಧನ ರೂ 16,500/- ಮತ್ತು ಶೇ.50 ಫಲಾನುಭವಿ ವಂತಿಗೆ ರೂ 16, 500 ಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ಪ್ರತಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನಿಗದಿತ ಗುರಿಗಳನ್ನು ನಿಗದಿಪಡಿಸಲಾಗಿದೆ.
ಬೇಕಾದ ದಾಖಲೆಗಳು:
ಅರ್ಜಿ ನಮೂನೆಗಳನ್ನು ನಿಮ್ಮ ಹತ್ತಿರದ ಪಶುವೈದ್ಯ ಆಸ್ಪತ್ರೆಯಿಂದ ಪಡೆದು ಭರ್ತಿ ಮಾಡಿ ಆಧಾರ ಕಾರ್ಡ, ಸ್ಥಳಿಯ ಪಶುವೈದ್ಯರಿಂದ ಪಡೆದ ಜಾನುವಾರು ದೃಡಿಕರಣ ಪತ್ರ, ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ (ಪ.ಜಾ ಮತ್ತು ಪ.ಪಂ ಫಲಾನುಭವಿಗಳಿಗೆ ಮಾತ್ರ) ಪತ್ರಗಳ ನಕಲು ಪ್ರತಿಗಳೊಂದಿಗೆ ತಾಲೂಕಿನ ಪಶು ಆಸ್ಪತ್ರೆಯಲ್ಲಿ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ವಿಳಾಸ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇರುವುದರಿಂದ ಈ ಯಂತ್ರದ ಅಗತ್ಯವಿರುವವರು ಅಗತ್ಯ ದಾಖಲೆಗಳ ಸಮೇತ ನಿಮ್ಮ ತಾಲ್ಲೂಕಿನ ಪಶುವೈದ್ಯ ಆಸ್ಪತ್ರೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಲು ಕೋರಿದೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖಾ ಜಾಲತಾಣದ ಈ ಕೆಳಗೆ ನೀಡಲಾಗಿದೆ. https://ahvs.karnataka.gov.in/