Thursday, September 19, 2024

Cereal (Millets) Culinary Competition: ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕಸ್ಪರ್ಧೆ :ವಿಜೇತರಿಗೆ ಆಕರ್ಷಕ ನಗದು ಬಹುಮಾನ

ಅಂತರ ರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ 2024 ರ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಸಿರಿಧಾನ್ಯ ಪಾಕಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ದಿನಾಂಕ: 13-12-2023 ರಂದು ಏರ್ಪಡಿಸಲಾಗಿದೆ. ಸದರಿ ಸ್ಪರ್ಧೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳನ್ನು ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿರುತ್ತದೆ.

ಭಾಗವಹಿಸುವ ಅರ್ಭರ್ಥಿಗಳ ಬೇಕಾದ ದಾಖಲೆಗಳು:
ಅಭ್ಯರ್ಥಿಗಳು ತಮ್ಮ ಭಾವ ಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ, ಬೇಕಾಗುವ ಸಾಮಾಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ ಅರ್ಜಿಯನ್ನು

ದಿನಾಂಕ: 11-12-2023 ರ ಮಧ್ಯಾನ 12-00 ಗಂಟೆಯೊಳಗೆ ಇ-ಮೇಲ್ ವಿಳಾಸ jdamysuru@gmail.com ಅಥವಾ ಖುದ್ದಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಸಾರ್ವಜನಿಕ ಕಛೇರಿಗಳ ಕಟ್ಟಡ, ನ್ಯೂ ಸಯ್ಯಾಜಿರಾವ್ ರಸ್ತೆ, ಮೈಸೂರು ಈ ವಿಳಾಸಕ್ಕೆ ಸಲ್ಲಿಸಲು ತಿಳಿಸಲಾಗಿದೆ.

ಇದನ್ನೂ ಓದಿ: Interim Crop Insurance: ಈ ಜಿಲ್ಲೆಯ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರು.

ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಗಿನ ಸೂಚನೆಗಳನ್ನು ಪಾಲಿಸುವುದು.

  1. ಪ್ರತಿ ಸ್ಪರ್ಧಿಗೆ ಒಂದೇ ತಿನಿಸು (ಸಸ್ಯಾಹಾರಿ ತಿನಿಸುಗಳು ಮಾತ್ರ) ಸಿಹಿ ಅಥವಾ ಖಾರ ಮಾಡಲು ಅವಕಾಶವಿರುತ್ತದೆ.
  2. ತಯಾರಿಸಿದ ತಿನಿಸುಗಳ ಪ್ರದರ್ಶನ (Display), ಬಳಸಿದ ಸಾಮಾಗ್ರಿಗಳು (Ingredients) ತೋರಿಕೆ (Appearance), ರುಚಿ (Taste) ಸುವಾಸನೆ (Aroma) ಪೌಷ್ಟಿಕತೆ (Nutrients) ಗಳ ಮೇಲೆ ಅಂತಿಮ ತೀರ್ಪು ಕೈಗೊಳ್ಳಲಾಗುವುದು.
  3. ತೀರ್ಪುದಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
  4. ಜಿಲ್ಲಾಮಟ್ಟಕ್ಕೆ ಪ್ರಥಮ ಬಹುಮಾನವಾಗಿ ಖಾರ ತಿನಿಸು ಮತ್ತು ಸಿಹಿ ತಿನಿಸಿಗೆ ತಲಾ ರೂ 5,000/- ಬಹುಮಾನವಿರುತ್ತದೆ.
  5. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು ದಿನಾಂಕ : 23-12-2023 ರಂದು ಬೆಂಗಳೂರಿನಲ್ಲಿ ಏರ್ಪಡಿಸುವ ರಾಜ್ಯಮಟ್ಟದ ಸ್ಪರ್ದೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.
  6. ಖಾದ್ಯವನ್ನು ತಯಾರಿಸಲು ಬೇಕಾಗುವ ಸಾಮಾಗ್ರಿಗಳನ್ನು ತಾವೇ ತೆಗೆದುಕೊಂಡು ಹೋಗಿ ನಿಗಧಿತ ಸ್ಥಳ, ಸಮಯದಲ್ಲಿ ಖಾದ್ಯವನ್ನು ಅಲ್ಲಿಯೇ ತಯಾರಿಸಲು ಸಿದ್ಧರಾಗಿರಬೇಕು.

ಇದನ್ನೂ ಓದಿ: Drought relief list: 2023-24 ನೇ ಸಾಲಿನ ಬರ ಪರಿಹಾರ ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ:
ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು (ಉ & ಮೌ), ಜಂಟಿ ಕೃಷಿ ನಿರ್ದೇಶಕರ ಕಛೇರಿ, ಮೈಸೂರು ಇವರ ಮೊಬೈಲ್ ಸಂಖ್ಯೆ 8277933105 ನ್ನು ಸಂಪರ್ಕಿಸಬಹುದಾಗಿದೆ.

ವಿಶೇಷ ಸೂಚನೆ: ಇದೇ ರೀತಿ ಸಿರಿಧಾನ್ಯ ಪಾಕಸ್ಪರ್ಧೆಯನ್ನು ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಏರ್ಪಡಿಸಲಾಗುತ್ತದೆ ಆಸಕ್ತರು ನಿಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ.

ಮಾಹಿತಿ ಪ್ರತಿಗಾಗಿ ಇಲ್ಲಿ ಓತ್ತಿ

ಇದನ್ನೂ ಓದಿ: International Milets and Oraganic Fair 2024″: ಅಂತರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ –
ಈ ಮೇಳದ ವಿಶೇಷತೆಗಳೇನು? ಯಾವ ದಿನಾಂಕದಂದು ಮೇಳ ಪ್ರಾರಂಭ ಸಂಪೂರ್ಣ ಮಾಹಿತಿ..

ಇತ್ತೀಚಿನ ಸುದ್ದಿಗಳು

Related Articles