Sunday, November 10, 2024

Cancelled Ration Cards List-ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ರದ್ದು ಮಾಡಲಾದ ರೇಷನ್ ಕಾರ್ಡ್ ನೋಡುವ ವಿಧಾನ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ವರ್ಷ ಮಾರ್ಗಸೂಚಿ ಪ್ರಕಾರ ರೇಷನ್ ಕಾರ್ಡ್(ಪಡಿತರ ಚೀಟಿ) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದರಂತೆ ಅರ್ಜಿ ಸಲ್ಲಿಸಿಯೂ ಸಹ ಕೆಲವರ ರೇಷನ್ ಕಾರ್ಡ್ ಗಳು ನಾನಾ ಕಾರಣಗಳಿಂದ ರದ್ದಾಗುವ ಸಾಧ್ಯತೆಗಳಿರುತ್ತವೆ. ಆ ರದ್ದಾದ ಕಾರ್ಡ್ ಯಾವು ಎಂದು ತಿಯುವುದು ಹೇಗೆ ಎಂದು ಇಲ್ಲಿದೆ ಮಾಹಿತಿ.

ಭಾರತ ದೇಶದಲ್ಲಿ ನಾಗರಿಕರ ಹಸಿವು ನೀಗಿಸಲು ಅತೀ ಅವಶ್ಯಕವಾದ ಆಹಾರ ವಸ್ತುಗಳನ್ನು ಬಡ ರೈತರಿಗೆ ಉಚಿತ/ಕಡಿಮೆ ದರದಲ್ಲಿ ವಿತರಣೆ ಮಾಡಲು ಪ್ರತಿ ರಾಜ್ಯಗಳಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದೆ. ಈ ಇಲಾಖೆಯ ಮೂಲಕ ಪ್ರತಿ ಕುಟುಂಬಕ್ಕೆ ಒಂದು ಗುರುತಿನ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಮಾಡಿಸಬೇಕಾಗುತ್ತದೆ.

ಈ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಮಾಡಿಸಿದ ರೈತರಿಗೆ ತಿಂಗಳಿಗೆ ಉಚಿತ/ಕಡಿಮೆ ದರದಲ್ಲಿ ಅವಶ್ಯಕ ಆಹಾರ ವಸ್ತುಗಳಾದ ಅಕ್ಕಿ, ಬೆಳೆ, ಗೋಧಿ, ಸಕ್ಕರೆ ಇತ್ಯಾದಿ ಆಹಾರ ವಸ್ತುಗಳನ್ನು ಬಡ ರೈತರಿಗೆ ವಿತರಿಸಲಾಗುತ್ತದೆ. ಈ ವಸ್ತುಗಳನ್ನು ಪಡೆಯಲು ಆಹಾರ ಇಲಾಖೆಯಡಿ ಸಾರ್ವಜನಿಕರು ಮುಂಚಿತವಾಗಿ ಅರ್ಜಿ ಸಲ್ಲಿಸಿ ರೇಷನ್ ಕಾರ್ಡ್(ಆಹಾರ ಪಡಿತರ ಚೀಟಿ) ಪಡೆದುಕೊಂಡಿರಬೇಕು.

ಇದನ್ನೂ ಓದಿ: ರೈತರೇ 2023 ರಲ್ಲಿ ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಪಹಣಿ/RTC ಗೆ ದಾಖಲಾದ ಬೆಳೆಯಾವುದು ಎಂದು ತಿಳಿಯಲು ಇಲ್ಲಿದೆ ಮಾಹಿತಿ!

Cancelled Ration Cards List-ಜೂನ್ ತಿಂಗಳು ಅನರ್ಹ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಉಂಟೆ? ಎಂದು ಚೆಕ್ ಹೀಗೆ ಮಾಡಿಕೊಳ್ಳಬೇಕು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಪ್ರತಿ ತಿಂಗಳು ಮಾರ್ಗ ಸೂಚಿ ಪ್ರಕಾರ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದರಲ್ಲಿ ಅರ್ಹರಿಲ್ಲದ ಜನರ ಪಡಿತರ ಚೀಟಿಯನ್ನು ರದ್ದುಪಡಿಸಿ ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವೆಬ್ಸೈಟ್ ನ್ನು ಪ್ರವೇಶ ಮಾಡಿ ನಿಮ್ಮ ಗ್ರಾಮ/ಹಳ್ಳಿಯ ಅನರ್ಹ ಪಟ್ಟಿಯನ್ನು ಹೇಗೆ ನೋಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ವಿಧಾನ-1:ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Cancelled Ration Cards List ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ವಿಧಾನ-2: ನಂತರ ಅದರಲ್ಲಿ “ಇ ರೇಷನ್ ಕಾರ್ಡ್”(E-ration card) ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: E-ration card ಕ್ಲಿಕ್ ಮಾಡಿದ ಮೇಲೆ ಅದರಲ್ಲಿ Show Cancelled/Suspended list ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಬ್ಯಾಂಕ್‌ ನಲ್ಲಿ ಉದ್ಯೋಗವಕಾಶಗಳು: ಸಿಗಲಿದೆ ರೂ.55,655 ರವರೆಗೆ ವೇತನ.

ವಿಧಾನ-4: ತದನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಿ “Go” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲೂಕಿನಲ್ಲಿ ಜೂನ್-2024 ತಿಂಗಳಲ್ಲಿ ರದ್ದುಗೊಳಿಸಿರುವ ರೇಷನ್ ಕಾರ್ಡ್ ದಾರರ ಪಟ್ಟಿ ತೋರಿಸುತ್ತದೆ.

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ/ಇಲ್ಲವಾ ಎಂದು ನೋಡಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳು

Related Articles