ರಾಜ್ಯದ ವಿವಿಧ ನಿಗಮಗಳಿಂದ ಕೊಳವೆ ಬಾವಿ ಕೊರೆಸಲು ರೂ.4.25 ಲಕ್ಷ ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ(ganga kalyana yojana) ಆಹ್ವಾನಿಸಲಾಗಿದ್ದು, ಎಲ್ಲಿ ಅರ್ಜಿ ಸಲ್ಲಿಸಬೇಕು? ಹಾಗೂ ಅದರಲ್ಲಿ ಎಷ್ಟು ಸಹಾಯಧನ ಸಿಗುತ್ತೆ ಎಂಬ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಕಳೆದ ವರ್ಷದಂತೆ ಈ ವರ್ಷವು ರಾಜ್ಯದ ವಿವಿಧ ವರ್ಗಗಳ ಅಭಿವೃದ್ಧಿ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ (borewell subsidy scheme) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಈ ಗಂಗಾ ಕಲ್ಯಾಣ ಯೋಜನೆಯು ರೈತರಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ನೀರಾವರಿ ಸೌಲಭ್ಯವನ್ನು ಒದಗಿಸಲು ರೈತರು ಕೊಳವೆ ಬಾವಿ (borewell) ಕೊರೆಸಲು ಆರ್ಥಿಕವಾಗಿ ಸಹಾಯಧನ ನೀಡಿ ಬೆಂಬಲ ನೀಡಲಾಗುತ್ತದೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ.
ganga kalyana yojana subsidy-ಬೋರ್ವೆಲ್ ಕೊರೆಸಲು ಎಷ್ಟು ಸಹಾಯಧನ ಸಿಗುತ್ತದೆ.
ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆಯ್ಕೆಯಾದ ರೈತರಿಗೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕಕ್ಕೆ ರೂ.4,75,000/-ಗಳು ಇದರಲ್ಲಿ ರೂ.4,25,000/-ಸಹಾಯಧನ ನೀಡಲಾಗುತ್ತದೆ. ಉಳಿಕೆ ಮೊತ್ತ ರೂ.50,000/- ಸಾಲವಾಗಿ ಶೇ.4 ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಇದನ್ನೂ ಓದಿ: ಕೃಷಿ ಇಲಾಖೆಯ ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಕೃಷಿಕರಿಗೆ ಲಕ್ಷದವರೆಗೂ ಸಹಾಯಧನ.
ಉಳಿದ 25 ಜಿಲ್ಲೆಗಳಲ್ಲಿ ಒಟ್ಟು ಘಟಕ ವೆಚ್ಚ ರೂ.3,75,000/- ಇದರಲ್ಲಿ ರೂ.3,25,000/- ಸಹಾಯಧನ, ಉಳಿಕೆ ಮೊತ್ತ ರೂ.50,000/- ಸಾಲವಾಗಿ ಶೇ.4 ಬಡ್ಡಿ ದರದಲ್ಲಿ ನೀಡಲಾಗುತ್ತದೆ. ಜೊತೆಗೆ ಸಹಾಯಧನ ಮೊತ್ತದಲ್ಲಿ ರೂ.75,000/- ಗಳನ್ನು ವಿದ್ಯುದ್ದೀಕರಣಕ್ಕೆ ಪಾವತಿಸಲಾಗುತ್ತದೆ.
Ganga kalyana application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಸೇವಾ ಸಿಂಧು ಸೈಬರ್ ಗಳಲ್ಲಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
1)ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
2)ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
3)ಬ್ಯಾಂಕ್ ಖಾತೆಯ ಪ್ರತಿ.
4)ಜಮೀನಿನ ಪಹಣಿ.
5)ಪೋಟೋ.
6)ಸಣ್ಣ/ಅತೀ ಸಣ್ಣ ಪ್ರಮಾಣ ಪತ್ರ.
7)ಕುಟುಂಬ ಪಡಿತರ ಚೀಟಿ.
ಯಾವೆಲ್ಲ ನಿಗಮಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
1)ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
2)ಉಪ್ಪಾರ ಅಭಿವೃದ್ಧಿ ನಿಗಮ
3)ಮರಾಠ ಅಭಿವೃದ್ಧಿ ನಿಗಮ
4)ವಿಶ್ವಕರ್ಮ ಅಭಿವೃದ್ಧಿ ನಿಗಮ
5)ಮಡಿವಾಳ ಅಭಿವೃದ್ಧಿ ನಿಗಮ
6)ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
7)ಸವಿತಾ ಸಮಾಜ ಅಭಿವೃದ್ಧಿ ನಿಗಮ
8)ಒಕ್ಕಲಿಗ ಅಭಿವೃದ್ಧಿ ನಿಗಮ
Application apply last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಎಲ್ಲಾ ನಿಗಮಗಳಲ್ಲಿ ಬಹುತೇಕವಾಗಿ ಇದೇ ತಿಂಗಳು ಅಗಷ್ಟ 31,2024 ನಿಗದಿಪಡಿಸಲಾಗಿರುತ್ತದೆ. ಆದಷ್ಟು ಬೇಗನೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.