Monday, September 16, 2024

Borewell recharge-ಬೋರವೆಲ್ ರೀಚಾರ್ಜ್ ಮಾಡುವ ವಿಧಾನ! ಬೋರವೆಲ್ ರೀಚಾರ್ಜಗೆ ಎಲ್ಲಿ ಸಹಾಯಧನ ಸಿಗುತ್ತೆ ಗೊತ್ತೆ?

ಭಾರತ ದೇಶದಲ್ಲಿ ಬರುವ ಮಳೆಯು ರೈತರೊಂದಿಗೆ ಆಡುವ ಜೂಜಾಟ ಎಂದು ಕರೆಯಲಾಗುತ್ತದೆ. ಆದ್ದರಿಂದ ಮಳೆಯ ನೀರನ್ನು ರೈತರು ಭೂಮಿಗೆ ಇಂಗಿಸುವುದರಿಂದ ಅಂತರ್ಜಲವನ್ನು ಹೆಚ್ಚಿಸಲು ಸಹಾಯವಾಗುತ್ತದೆ.

ನಮ್ಮ ದೇಶದಲ್ಲಿ ಅಂತರ್ಜಲದ ನೀರಿನ ಬಳಕೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ಆದರೆ ಅದರ ನೀರನ್ನು ಹೇಗೆ ಮರು ಪೂರ್ಣ ಮಾಡಬೇಕು ಎಂದು ಯಾರು ಯೋಚಿಸುವುದಿಲ್ಲ. ನಿಮಗೆ ಕೊಳವೆ ಬಾವಿ ಮರುಪೂರ್ಣ ಮಾಡುವ ವಿಚಾರದ ಬಗ್ಗೆ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗುತ್ತದೆ.

ಮಳೆ ನೀರನ್ನು ವ್ಯರ್ಥ ಮಾಡದೆ ಅದನ್ನು ಬೋರವೆಲ್ ರೀಚಾರ್ಜ್ ಮಾಡಿದಲ್ಲಿ ರೈತರಿಗೆ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಕೊಳವೆ ಬಾವಿ ಮರುಪೂರ್ಣಕ್ಕೆ ಎಲ್ಲಿ ಸಹಾಯಧನ ಸಿಗುತ್ತೆ ಮತ್ತು ಅದಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

ಇದನ್ನೂ ಓದಿ:ರೈತರು ರಸಗೊಬ್ಬರವನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳು! ಯಾವು ನಿಮಗೆ ಗೊತ್ತೆ?

Borewell recharge-ಬೋರವೆಲ್ ರೀಚಾರ್ಜ್ ಮಾಡುವ ವಿಧಾನ?

ವಿಧಾನ-1:ಕೊಳವೆ ಬಾವಿ ಸುತ್ತಲು 6ಅಡಿ ಉದ್ದ, 6ಅಡಿ ಅಗಲ, 6ಅಡಿ ಆಳದ ಗುಂಡಿಯನ್ನು ತೆಗೆಯಬೇಕು. ನಂತರ ಬೋರವೆಲ್ ನ ಕೇಸಿಂಗ್ ಪೈಪ್ ನ ಸುತ್ತಲು ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿ ಅದಕ್ಕೆ ಚಿಕ್ಕ ಕಿಂಡಿ ಇರುವ ತಂತಿ ಜರಡಿ ಸುತ್ತಬೇಕು.

ವಿಧಾನ-2:ನಂತರ ಮೊದಲಿಗೆ ಸ್ಥಳೀಯವಾಗಿ ಸಿಗುವ ಮಧ್ಯಮಗಾತ್ರದ ಚಿಕ್ಕ ಚಿಕ್ಕ ಕಲ್ಲುಗಳನ್ನು ಅಂದಾಜು 3 ಅಡಿ ಆಳ ತುಂಬಬೇಕು.(8 ರಿಂದ 15 ಇಂಚಿನ ಗಾತ್ರದ ಕಲ್ಲು). ಒಂದು ವೇಳೆ ಸ್ಥಳೀಯ ಕಲ್ಲುಗಳು ಇಲ್ಲವಾದಲ್ಲಿ ಮಾರುಕಟ್ಟೆಯಿಂದ ಖರೀದಿ ಮಾಡಿ ಕಲ್ಲು ತುಂಬಿಸಬೇಕು.

ವಿಧಾನ-3:ನಂತರ 40 mm ಗಾತ್ರದ ಕಲ್ಲು ಅಥವಾ ಕಡಿ, ಜಲ್ಲಿಗಳನ್ನು 1 ರಿಂದ 1.5 ಅಡಿ ತುಂಬಿಸಬೇಕು. ಅದಾದ ಮೇಲೆ 20 mm ಗಾತ್ರದ ಕಡಿಯ ಚಿಕ್ಕ ಗಾತ್ರದ ಚೂರಿನ ಜಲ್ಲಿ ಅಥವಾ ಬೇಬಿ ಜಲ್ಲಿ ಕಲ್ಲನ್ನು 1 ಅಡಿ ಹಾಕಬೇಕು. ಅದಾದ ಮೇಲೆ ಮೇಲೆ ಅದಕ್ಕೆ ನೀರು ಬಸಿಯಲು HTP ಮ್ಯಾಟ ಹಾಕಿ ಅದರ ಮೇಲೆ 6 mm ಜಲ್ಲಿ ಅಥವಾ ಮರಳು ಹಾಕಬೇಕು.

ಇದನ್ನೂ ಓದಿ:ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಖಾಸಗಿ ನಿವಾಸಿಗಳ ಮೂಲಕ ಮಾಡಲಾಗುತ್ತಿದ್ದು, ನಿಮ್ಮ ಜಮೀನಿನ ಸಮೀಕ್ಷೆ ಆಗಿದೆಯೇ? ಹೀಗೆ ತಿಳಿದುಕೊಳ್ಳಿ.

ವಿಧಾನ-4: ನಂತರ ಅದರ ಸುತ್ತಲು ತಡೆಗೋಡೆ ಕಟ್ಟಿ ಮಳೆ ನೀರು ಇಂಗಿಸಬೇಕು. ಅಲ್ಲಿಗೆ ಹರೆದು ಬರುವ ಮಳೆ ನೀರು ಹಾಗೆ ಬಸಿದು/ಇಳಿದು ರಂಧ್ರಗಳ ಮೂಲಕ ಬೋರವೆಲ್ ಒಳಗೆ ಹೋಗುತ್ತದೆ.

Borewell recharge subsidy-ಬೋರವೆಲ್ ರೀಚಾರ್ಜ್ ಸಹಾಯಧನ ಎಲ್ಲಿ ಸಿಗುತ್ತದೆ?

ಕೊಳವೆ ಬಾವಿ ಮರುಪೂರ್ಣ ಘಟಕ ರಚನೆ ಮಾಡಿಕೊಳ್ಳಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೇರಿಸಲಾಗಿದೆ. ಸಬ್ಸಿಡಿ ಪಡೆಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತ ಭೇಟಿ ಮಾಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಯಲ್ಲಿ  ಸಬ್ಸಿಡಿ ಬಗ್ಗೆ ವಿಚಾರಿಸಿ ಪಡೆದುಕೊಳ್ಳಬೇಕು. ಹಾಗೂ ಅದಕ್ಕೆ ಬೇಕಾಗುವ ದಾಖಲೆಗಳ ಬಗ್ಗೆ ಅವರಲ್ಲಿ ಕೇಳಿ ತಿಳಿದುಕೊಳ್ಳಬೇಕು.

ಸೂಚನೆ: ಒಳ್ಳೆ ಗುಣಮಟ್ಟದ ವಸ್ತುಗಳನ್ನು ಬಳಸಿದಲ್ಲಿ 20 ರಿಂದ 25 ವರ್ಷದ ವರೆಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಕಡಿಮೆ ಗುಣಮಟ್ಟದ ವಸ್ತುಗಳು ಬಳಸಿದರೆ 10 ರಿಂದ 15 ವರ್ಷ ಮಾತ್ರ ಬಳಕೆಗೆ ಬರುತ್ತದೆ.

ಇತ್ತೀಚಿನ ಸುದ್ದಿಗಳು

Related Articles