ಸಸ್ಯಗಳಿಗೆ ಪೋಷಕಾಂಶಗಳಷ್ಟು ಒದಗಿಸುವ ಮತ್ತು ಸಸ್ಯಗಳಿಂದ ಹೀರಿಕೊಳ್ಳುವ ರೂಪಕ್ಕೆ ಪೋಷಕಾಂಶಗಳನ್ನು ಪರಿವರ್ತಿಸಲು ಸಹಾಯ ಮಾಡುವ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಜೈವಿಕ ಮೂಲದ ವಸ್ತುಗಳನ್ನು ಜೈವಿಕ ಗೊಬ್ಬರ ಇವುಗಳನ್ನು ಬೀಜ, ಬೇರು ಮತ್ತು ಮಣ್ಣಿಗೆ ಉಪಚರಿಸಿದಾಗ ಸೂಕ್ಷ್ಮಾಣು ಜೀವಿಗಳು ಅನೇಕ ರೀತಿಯ ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳಿಂದ ಸಸ್ಯಗಳಿಗೆ ಮಣ್ಣಿನಲ್ಲಿ ಅಲಭ್ಯ ಪೋಷಕಾಂಶಗಳನ್ನು ಲಭ್ಯ ಮಾಡುವಲ್ಲಿ ಸಹಾಯ ಮಾಡುತ್ತದೆ. ಹಾಗೂ ಬೆಳೆ ಪ್ರಚೋದಕಗಳನ್ನು ಉತ್ಪಾದಿಸಿ ಮಣ್ಣಿನ ಸಮಗ್ರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಬೆಳೆಗಳಿಗೆ ಬರುವ ಕೆಲವೊಂದು ರೋಗಗಳನ್ನೂ ಸಹ ಹತೋಟಿ ಮಾಡುತ್ತದೆ.
ಸಾರಜನಕ ಸ್ಥಿರೀಕರಿಸುವ ಜೈವಿಕಗೊಬ್ಬರಗಳು :-
ರೈಜೋಬಿಯಂ : ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಾಣು ಜೀವಿಯಾಗಿದ್ದು, ದ್ವಿದಳ ಧಾನ್ಯಗಳ ಬೇರಿನಲ್ಲಿ ಗಂಟುಗಳನ್ನು ಮಾಡಿ ನೆಲೆಸಿ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥೀರಿಕರಿಸಿ ಬೆಳೆಗಳಿಗೆ ಉಪಯೋಗಿಸಬಹುದಾಗಿದ್ದು, ಪ್ರತೀ ದ್ವಿದಳ ಧಾನ್ಯಗಳ ಸಹಯೋಗದಿಂದ ಒಂದು ಬೆಳೆಯು ಕಾಲಾವದಿಯಲ್ಲಿ ಶೇ.30 ರಿಂದ 40 ರಷ್ಟುಸಾರಜನಕ ಲಭ್ಯವಾಗುತ್ತದೆ. ಅಂದರೆ ಪ್ರತಿ ಎಕರೆಗೆ 15-18 ಕೆ.ಜಿ. ಸಾರಜನಕ ದೊರೆಯುತ್ತದೆ. ಇದಲ್ಲದೆ ಉಪಚರಿಸಿದ ಬೆಳೆಯು ಕೊಯ್ಲಿನ ನಂತರ ಬೇರಿನ ಗಂಟುಗಳು ಕರಗಿ 5-8 ಕೆ.ಜಿ ಹೆಚ್ಚಿನ ಸಾರಜನಕ ನಂತರದ ಬೆಳೆಗಳಿಗೆ ದೊರೆಯುತ್ತದೆ.
ಅಝೋಟೋ ಬ್ರಾಕ್ಟರ್ : ಈ ಸೂಕ್ಷ್ಮಾಣು ಜೀವಿಯು ಮಣ್ಣಿನಲ್ಲಿ ಸ್ವತಂತ್ರವಾಗಿ ಜೀವಿಸಿ ಗಾಳಿಯಲ್ಲಿ ಸಾರಜನಕವನ್ನು ಸ್ಥೀರಿಕರಿಸುತ್ತದೆ. ಜೊತೆಗೆ ಬೆಳೆಗಳ ಬೆಳವಣಿಗೆಯನ್ನು ಉತ್ತೇಜಿಸುವ ವಸ್ತುಗಳಾದ ಜಿಬ್ರಲೀನ್, ಸೈಟೋಕೈ ಅನುಕೂಲಕಾರಿ ವಿಟಮಿನಗಳನ್ನು ಉತ್ಪಾದಿಸುವುದರಿಂದ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಹೊಂದುವುದಲ್ಲದೆ, ಇಳುವರಿಯು ಸಹ ಹೆಚ್ಚಾಗುತ್ತದೆ. ಹಾಗೂ ಧಾನ್ಯಗಳು ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ. ಇದನ್ನು ಎಲ್ಲಾ ಏಕದಳ ತರಕಾರಿ ಬೆಳೆಗಳು ಉಪಯೋಗಿಸಬಹುದು. ಇದರ ಉಪಯೋಗದಿಂದ ಪ್ರತಿ ಹೆಕ್ಟೇರಿಗೆ 18-20ಕೆ.ಜಿ/ ಸಾರಜನಕ ಒದಗಿಸಬಹುದಾಗಿದೆ.
ರೋಸ್ದತೈರುಲಂ: ಇದು ಬೇರಿನ ಸಹಯೋಗದಿಂದ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥೀರಿಕರಿಸುತ್ತದೆ. ಜೊತೆಗೆ ಬೆಳೆ ಪ್ರಚೋದಕಗಳಾದ ಇಂಡೋಲ್ ಅಸಿಟೆಕ್ ಆಮ್ಲ, ಬ್ರಲೀನ್ ಸೈಟೋಕೈನಿನ್ ಗಳನ್ನು ಉತ್ಪಾದಿಸುತ್ತದೆ. ಅದನ್ನು ಎಲ್ಲಾ ಏಕದಳ ಧಾನ್ಯಗಳು ಎಣ್ಣೆಕಾಳು ಬೆಳೆಗಳು ತೃಣ ಜನ್ಯ ತರಕಾರಿ ಮತ್ತು ಅಲಂಕಾರಿಕ ಗಿಡಗಳಲ್ಲಿ ಬಳಸಬಹುದು. ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 18-20 ಕೆ.ಜಿ. ಸಾರಜನಕವನ್ನು ಸ್ಥೀರಿಕರಿಸಿ ಬೆಳೆಗಳಿಗೆ ನೀಡುತ್ತದೆ.
ರಂಜಕ ಕರಗಿಸುವ ಜೈವಿಕ ಗೊಬ್ಬರಗಳು : ಸೂಕ್ಷ್ಮಾಣು ಜೀವಿಗಳಾದ ಬ್ಯಾಸಿಲಸ್ಮೆ ಮೆಗಾಥಿರಿಯಂ, ಸೋಡೋಮನಾಸ್ಸ್ಟ್ರಯಟ, ಶೀಲಿಂದ್ರಗಳಾದ ಆಸ್ಪರ್ಜಿಲಸ್ಆವಮೋರಿ, ಆಸ್ಪರ್ಜಿಲಸನೈಜರ್, ಫೆನೀಸಿಲಿಯಂಡಿಜಿಟಾಟಂ ಮಣ್ಣಿನಲ್ಲಿರುವ ಹಲವಾರು ಸಾವಯವ ಆಮ್ಲಗಳನ್ನು ಉತ್ಪಾದಿಸಿ ಮಣ್ಣಿನ ರಸ ಸಾರವನ್ನು ಕಡಿಮೆಗೊಳಿಸಿ ಸ್ಥೀರಿಕರಿಸಲ್ಫಟ್ಟ ಮತ್ತು ಶಿಲಾ ರಂಜಕದಲ್ಲಿರುವ ಅಲಭ್ಯ ರಂಜಕವನ್ನು ಕರಗಿಸಿ ಬೆಳೆಗಳಿಗೆ ಒದಗಿಸುತ್ತದೆ.
ಜೈವಿಕ ಗೊಬ್ಬರಗಳನ್ನು ಉಪಯೋಗಿಸುವ ವಿಧಾನಗಳು:
ಬೀಜೋಪಾಚಾರ : ಎಲ್ಲಾ ವಿವಿಧ ವೆಳೆಗಳನ್ನು ಬಿತ್ತನೆ ಮಾಡುವ ಬದಲು ಬೇಕಾಗುವ ಬಿತ್ತನೆ ಬೀಜಕ್ಕೆ 200 ಗ್ರಾಂ ಜೀವಾಣು ಗೊಬ್ಬರವನ್ನು ಅಂಟು ದ್ರಾವಣದಿಂದ ಉಪಚರಿಸಬೇಕು. ಅಂಟು ದ್ರಾವಣ ತಯಾರಿಸಲು 250 ಮೀ.ಲೀ. ನೀರಿನಲ್ಲಿ 25 ಗ್ರಾಂ. ಬೆಲ್ಲ ಕರಗಿಸಿ 15 ನಿಮಿಷ ಕಾಲ ಕುದಿಸಿ ಆರಿಸಿ ಅವಶ್ಯವಿದ್ದಷ್ಟು ಅಂಟು ದ್ರಾವಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದುಕೊಂಡು 200 ಗ್ರಾಂ. ಜೀವಾಣು ಗೊಬ್ಬರವನ್ನು ಬೀಜದೊಂದಿಗೆ ಚೆನ್ನಾಗಿ ಬೆರೆಸಿ ನೆರೆಳಿನಲ್ಲಿ ಒಣಗಿಸಿ ಬಿತ್ತನೆಗೆ ಬಳಸಬೇಕು.
ಮಣ್ಣಿನಲ್ಲಿ ಬೆರೆಸುವ ವಿಧಾನ : ಪ್ರತಿ ಎಕರೆ ಪ್ರದೆಶಕ್ಕೆ 2-3 ಕೆ.ಜಿ. ಜೀವಾಣು ಗೊಬ್ಬರವನ್ನು 1 ಟನ್ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರಗಳೊಂದಿಗೆ ಬೆರೆಸಿ ಜಮೀನಿನ ಮಣ್ಣಿಗೆ ಸೇರಿಸಬೇಕು.
ಸಸಿಗಳನ್ನು ಅದ್ದುವ ವಿಧಾನ : 1ಕೆ.ಜಿ. ಜೀವಾಣು ಗೊಬ್ಬರವನ್ನು ನೀರನಲ್ಲಿ ಚೆನ್ನಾಗಿ ಬೆರೆಸಿ ನಾಟಿಮಾಡುವ ಮುಂಚೆ ತಯಾರಿಸಿದ ತಿಳಿಯಲ್ಲಿ ಸಸಿಗಳನ್ನು 30 ನಿಮಿಷಗಳವರೆಗೆ ಅದ್ದಿ ನಂತರ ನಾಟಿ ಮಾಡಬೇಕು.