Friday, September 20, 2024

ಭೂ ಫಲವತ್ತತೆಯನ್ನು ಕಾಪಾಡುವಲ್ಲಿ ಹಸಿರೆಲೆ ಗೊಬ್ಬರದ ಮಹತ್ವ

ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಹಸಿರೆಲೆ ಗೊಬ್ಬರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭೂಮಿಗೆ ಸಾವಯವ ಪದಾರ್ಥ ಸಾರಜನಕವನ್ನು ಒದಗಿಸುವ ಬಹಳ ಸುಲಭವಾದ ಹಾಗೂ ಮಿತವ್ಯಯದ ಗೊಬ್ಬರಗಳು.  ಇವು ಮಣ್ಣಿನ ರಚನೆಯನ್ನು ವೃದ್ಧಿ ಪಡಿಸುತ್ತವೆ. ಮಣ್ಣಿನಲ್ಲಿ ತೇವಾಂಶವನ್ನು ಹಿಡಿದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಭೂ ಫಲವತ್ತತೆಯನ್ನು ಕಾಪಾಡುವುದು ಎಂದರೇನು?

ಬೆಳೆಗಳಿಗೆ ಅವಶ್ಯವಿರುವ ಎಲ್ಲ ಪೋಷಕಾಂಶಗಳನ್ನು ಸರಬರಾಜು ಮಾಡುವುದು ಭೂಮಿಯ ಸತ್ವ  ಯಾವ ರೀತಿಯಲ್ಲಿ ಇರುತ್ತದೆಯೋ  ಅದೇ ಪ್ರಮಾಣದಲ್ಲಿ ಭೂಮಿಯ ಶಕ್ತಿಯನ್ನು ಉಳಿಸಿಕೊಳ್ಳುವುದು.

ಹಸಿರೆಲೆ ಗೊಬ್ಬರಗಳ ಪಾತ್ರವೇನು?

ಸಮಗ್ರ ಪೋಷಕಾಂಶಗಳ ನಿರ್ವಹಣೆ ಯಲ್ಲಿ ಹಸಿರೆಲೆಗೊಬ್ಬರ ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವು ಭೂಮಿಗೆ ಸಾವಯವ ಪದಾರ್ಥ ಮತ್ತು ಸಾರಜನಕವನ್ನು ಒದಗಿಸುವ ಬಹಳ ಸುಲಭವಾದ ಹಾಗೂ ಮಿತವ್ಯಯದ ಗೊಬ್ಬರಗಳು. ಇವು ಮಣ್ಣಿನ ರಚನೆಯನ್ನು ವೃದ್ಧಿ ಪಡಿಸುತ್ತವೆ. ಮಣ್ಣಿನಲ್ಲಿ ತೇವಾಂಶವನ್ನು ಹಿಡಿದುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಸ್ಯದ ಬೆಳವಣಿಗೆಗೆ ಬೇಕಾಗುವ ಸಸ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ರಾಸಾಯನಿಕ ಕ್ರಿಯೆಯನ್ನು ಹೆಚ್ಚು ಮಾಡುತ್ತವೆ. ಕ್ಷಾರ, ಕರ್ಲು,  ಸವಳ ಮುಂತಾದ ದೋಷಗಳನ್ನು ಸರಿಪಡಿಸುತ್ತವೆ.  ಮಣ್ಣಿನಲ್ಲಿರುವ ಜೀವಾಣುಗಳ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸುತ್ತವೆ. ಇದರಿಂದ ಈ ಜೀವಾಣುಗಳ ಚಟುವಟಿಕೆ ಹೆಚ್ಚು ಭೂಮಿ ಹದಗೊಳ್ಳುತ್ತದೆ.

ಯಾವ ಯಾವ ಹಸಿರೆಲೆ ಬೆಳೆಗಳನ್ನು ಗೊಬ್ಬರವಾಗಿ ಬಳಸಬಹುದು?

ಸೆಣಬು, ಡಯಂಚ, ಸಬ್ಬೇನಿಯಾ, ಹೆಸರು,  ಉದ್ದು, ಅಲಸಂದೆ, ಗ್ಲಿರಿಸಿಡಿಯಾ, ಹೊಂಗೆ, ಎಕ್ಕ, ತುಂಬೆ, ಲಂಟಾನ  ಮುಂತಾದವುಗಳು.

ಇತ್ತೀಚಿನ ಸುದ್ದಿಗಳು

Related Articles