ನಮಸ್ಕಾರ ರೈತರೇ, ರಾಜ್ಯ ಸರಕಾರದಿಂದ ರೈತರಿಗೆ ಸಿಹಿ ಸುದ್ಧಿ 2100 ಕೋಟಿ ಬೆಳೆ ವಿಮೆ ಹಣವನ್ನು ಡಿಬಿಟಿ ಮುಖಾಂತರ ನೇರ ಹಣವನ್ನು ರೈತರ ಖಾತೆಗೆ ಜಮೆ ಮಾಡಲಿದೆ. ಈಗಾಗಲೇ ಬಿಡುಗಡೆ ಮಾಡಿದ್ದು ಯಾರಿಗೆಲ್ಲ ಬಂದಿದೆ ಎಂದು ಹೇಗೆ ತಿಳಿದುಕೊಳ್ಳಬೇಕು ಈ ಲೇಖನದಲ್ಲಿ ತಿಳಿಸಲಾಗುವುದು.
ಹೌದು ರೈತರೇ 2023-24ನೇ ಸಾಲಿನಲ್ಲಿ ಯಾರೆಲ್ಲ ರೈತರು ತಮ್ಮ ತಮ್ಮ ಜಮೀನಿನ ಬೆಳೆಗಳಿಗೆ ಬೆಳೆ ವಿಮೆ ಮಾಡಿಕೊಂಡಿದ್ದರೋ ಅವರಿಗೆ ರಾಜ್ಯ ಸರಕಾರವು ಬೆಳೆ ಹಾನಿ ರೂಪವಾಗಿ ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಫಸಲಭೀಮಾ ಮತ್ತು ಹವಮಾನ ಆಧಾರಿತ ಬೆಳೆ ವಿಮೆಗಳಿಗೆ ವಿಮೆ ಮಾಡಿಸಿದ ರೈತರಿಗೆ ರಾಜ್ಯ ಸರಕಾರವು 2100 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವು ಹಂತ ಹಂತವಾಗಿ ಡಿಬಿಟಿ ಮೂಲಕ ನೇರ ರೈತರ ಖಾತೆಗೆ ಜಮೆ ಆಗಲಿದೆ ಎಂದು ರಾಜ್ಯದ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯ ಸರಕಾರದ ಸಂರಕ್ಷಣೆ(Samrakshane.karnataka.gov.in) ಪೋರ್ಟಲ್ ಭೇಟಿ ಮಾಡಿ ರೈತರು ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ/ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು 2023-24ರ ಯಾವೆಲ್ಲ ಬೆಳೆಗಳಿಗೆ ವಿಮೆ ಜಮೆ ಮಾಡಲಾಗಿದೆ ಎಂದು ನಿಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು.
Bele vime amount-ಬೆಳೆ ವಿಮೆ ಹಣ ಪಾವತಿ ಮತ್ತು ಅರ್ಜಿ ಸ್ಥಿತಿಯನ್ನು ನೋಡುವ ವಿಧಾನ.
Samrakshane.karnataka.gov.in ವೆಬ್ಸೈಟ್ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಯಾವೆಲ್ಲ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಎಂದು ತಿಳಿದುಕೊಳ್ಳಬಹುದು. ಬೆಳೆಗೆ ಎಷ್ಟು ವಿಮೆ ಪ್ರಿಮಿಯಂ ಪಾವತಿ ಮಾಡಲಾಗಿದೆ ಸಂಪೂರ್ಣ ವಿವರ ಪಡೆಯಬಹುದು.
Step-1:ರೈತರು ತಮ್ಮ ಮೊಬೈಲ್ ನಲ್ಲಿ ಮೊದಲಿಗೆ ಈ KHARIF CROP INSURANCE ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/year:2023-24 “ ಹಾಗೂ ಋತು: ಮುಂಗಾರು/kharif” ಎಂದು ಆಯ್ಕೆ ಮಾಡಿಕೊಂಡು “ಮುಂದೆ/go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-2: ಬಳಿಕ ಈ ಪೇಜಿನ ಕೆಳಗೆ “Farmers”ಕಾಲಂ ನಲ್ಲಿ ಕಾಣುವ “check status ಬಟನ್ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್ ಹಾಕಿ captcha ಕೋಡ್ ನ್ನು ನಮೂದಿಸಿ “ಸರ್ಚ್” ಕ್ಲಿಕ್ ಮಾಡಿದರೆ ಆ ವರ್ಷದ ಬೆಳೆ ವಿಮೆ ಅರ್ಜಿ ವಿವರ ತೋರಿಸುತ್ತದೆ.
Step-3: ಇಲ್ಲಿ ಕಾಣಿಸುವ ಅರ್ಜಿಯ ವಿವರದ ಕೊನೆಯ ಕಾಲಂ ನಲ್ಲಿ ಕಾಣಿಸುವ “select” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮೆ ಆಗಿದ್ದರೆ “UTR details” ನಲ್ಲಿ ಆ ವರ್ಷ ಎಷ್ಟು ಹಣ ಜಮೆ ಆಗಿದೆ ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.