ಆತ್ಮೀಯ ರೈತ ಬಾಂದವರೇ ಕಳೆದ ವರ್ಷ ಅಂದರೇ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ (PMFBY) ಬೆಳೆ ವಿಮೆ ನೊಂದಣಿ ಮಾಡಿಸಿರುವ ರೈತರಿಗೆ ಬೆಳೆ ಪರಿಹಾರ ಬಿಡುಗಡೆಯಾಗಿರುತ್ತದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು (fasal Bima Yojana) ರೈತರ ಅನಿಶ್ಚಿತ ಕೃಷಿಯಲ್ಲಿ ಆದಾಯ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಗೂ ಸರ್ಕಾರಗಳು ನಿಗಧಿ ಪಡಿಸಿದ ಇನಶ್ಯೂರೆನ್ಸ್ ಕಂಪನಿ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿರುತ್ತದೆ.
ಆತ್ಮೀಯ ರೈತ ಸಮೂಹಕ್ಕೆ ಈ ಮೂಲಕ ನಾವು ಈ ಬೆಳೆ ವಿಮೆ bele vime ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ (fasal Bima Yojana)ಅಡಿಯಲ್ಲಿ ಒಳಪಡುವ ಬೆಳೆ ವಿಮೆ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ.
ಅದಕ್ಕೂ ಮೊದಲು ವಿಮೆ ಕಟ್ಟುವ ರೈತರಿಗೆ ಬೆಳೆ ವಿಮೆ ಅಂದರೆ ಏನು ಅದು ಹೇಗೆ ಪರಿಹಾರ ದೊರೆಯುತ್ತದೆ. ಅಂತ ಮಾಹಿತಿ ತಿಳಿಯಿರಿ.
ರೈತ ಬಾಂದವರೇ ನಾವು ಪ್ರತಿ ವರ್ಷ ಬೆಳೆ ವಿಮ ಕಟ್ಟುತ್ತೆವೆ ಆದರೆ ನಮಗೆ ಬೆಳೆ ವಿಮೆ ಪರಿಹಾರ ಬರುವುದೇ ಇಲ್ಲವೆಂದು ರೈತರ ಬೇಸರ ವ್ಯಕ್ತಪಡಿಸುತ್ತಿರುವುದು ವಾಸ್ತವ. ಆದರೆ ಬೆಳೆ ವಿಮೆ ಅಧಿಸೂಚಿತ ಘಟಕ ಅಂದರೆ ಒಂದು ಗ್ರಾಮ ಪಂಚಾಯಿತಿಗೆ ಒಂದು ಅಧಿಸೂಚಿತ ಘಟಕ ಎಂದು ಕರೆಯುತ್ತಾರೆ.ಆ ಒಂದು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಅತೀ ಕಡಿಮೆ ಮತ್ತು ಅತೀ ಹೆಚ್ಚು ಆದಾಗ ಮತ್ತು ಶೇ 75 ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಒಟ್ಟು ಬೆಳೆ ವಿಮೆ ಮೊತ್ತದ ಗರಿಷ್ಠ 25% ರಷ್ಟು ಪರಿಹಾರ ವಿಮಾ ಸಂಸ್ಥೆಯ ವಿಮೆ ಮಾಡಸಿದ ರೈತರಿಗೆ ನೀಡಬೇಕಾಗಿರುತ್ತದೆ.
ಇದನ್ನೂ ಓದಿ: Krishimela – 2025: ಧಾರವಾಡ ಕೃಷಿ ಮೇಳದ ವಿಶೇಷತೆಗಳೇನು?
ಹಾಗೂ ರೈತರೂ ತಮ್ಮ ಜಮೀನುಗಳಲ್ಲಿ ಬೆಳೆ ಕಟಾವು ಮಾಡಿದ ನಂತರ ಗದ್ದೆಯಲ್ಲಿ ಒಣಗಲು ಬಿಟ್ಟಾಗ ಎರಡು ವಾರದ ಒಳಗಾಗಿ ಅಕಾಲಿಕ ಮಳೆ, ಚಂಡಮಾರುತದಿಂದ ಅಥವಾ ಪ್ರಕೃತಿ ವಿಕೋಪದಂತಹ ಪರಿಸ್ಥಿತಿಗಳಿಗೆ ಸಿಲುಕಿ ನಷ್ಟವಾದ ಸಂದರ್ಭದಲ್ಲಿ 48 ಗಂಟೆಯೊಳಗೆ ವಿಮೆ ಸಂಸ್ಥೆ ಮಾಹಿತಿ ನೀಡಿದ್ದಲ್ಲಿ ಅಥವಾ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ನಂತರ ರೈತರ ಸಂಪೂರ್ಣ ನಷ್ಟ ಲೆಕ್ಕಾಚಾರ ಮಾಡಿ ಸರ್ಕಾರ ಮಾರ್ಗಸೂಚಿ ಅನುಗುಣವಾಗಿ ವಿಮಾ ಸಂಸ್ಥೆಯಿಂದ ರೈತರಿಗೆ ಬೆಳೆ ವಿಮೆ ಪಾವತಿಸಲು ಅವಕಾಶವಿರುತ್ತದೆ.
ಇನ್ನೊಂದು ಪ್ರಕಾರದ ವಿಮೆ ದೊರೆಯುವುದು ಅದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ಮತ್ತು ಕೃಷಿಯೇತರ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಸಂಸ್ಥೆಯ ಪ್ರತಿನಿಧಿ ಸಹಯೋಗದಲ್ಲಿ ನಾಲ್ಕು ಕಡೆ Crop cutting Experiment ಬೆಳೆ ಅಂದಾಜು ಸಮೀಕ್ಷೆ ಮಾಡಲಾಗುತ್ತದೆ. ಈ ನಾಲ್ಕು ಸಮೀಕ್ಷೆಯಲ್ಲಿ ಅಧಿಸೂಚಿತ ಬೆಳೆ ವಿಮೆ 5*5 ಮೀಟರ್ ಅಳತೆಯಲ್ಲಿ ಬೆಳೆಯನ್ನು ಕಟಾವು ಮಾಡುವುದರ ಮೂಲಕ ಇಳುವರಿಯನ್ನು ಲೆಕ್ಕಚಾರ ಮಾಡಿ. ಅಂತಿಮವಾಗಿ ಸರಾಸರಿ ಇಳುವರಿ ಕಡಿಮೆ ಬಂದಲ್ಲಿ ಆ ಒಂದು ಗ್ರಾಮ ಪಂಚಾಯಿತಿ ಒಳಪಡುವ ಅಥವಾ ಅಧಿಸೂಚಿತ ಘಟಕದಡಿ ಬರುವ ರೈತರಿಗೆ ಬೆಳೆ ವಿಮೆಯನ್ನು ಸಂಬಂದ ಪಟ್ಟ ವಿಮಾ ಕಂಪನಿಗಳು ಪಾವತಿಸಲು ಅವಕಾಶ ಇರುವುದು.
ಈ ಯೋಜನೆಯಡಿ ಸರ್ಕಾರದಿಂದ ಬೆಳೆ ವಿಮೆ ಯಾವ ಜಿಲ್ಲೆಗೆ ಎಷ್ಟು ಪರಿಹಾರ ಬಿಡುಗಡೆಯಾಗಿದೆ ಅಂತ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿರುತ್ತದೆ.
2024-25ನೇ ಸಾಲಿನ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಹಾನಿಗೆ ಬೆಳೆ ವಿಮೆ ಮಂಜೂರಾಗಿದ್ದು, ರಾಜ್ಯಕ್ಕೆ 1,449 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ರಾಜ್ಯದ ಕಲಬುರಗಿ ಹಾಗೂ ಗದಗ ಜಿಲ್ಲೆಗೆ ಅತಿ ಹೆಚ್ಚು ಪರಿಹಾರ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ.
ಕಳೆದ 2024-25ನೇ ಸಾಲಿನ ಮುಂಗಾರು ಹಂಗಾಮಿನ ತೊಗರಿ, ಭತ್ತ, ರಾಗಿ, ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಹೆಸರು, ನೆಲಗಡಲೆ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಡಿ ಬೆಳೆವಿಮೆ ಮಂಜೂರಾಗಿದೆ.
ಈ ಪರಿಹಾರದಲ್ಲಿ ಹಣದಲ್ಲಿ ಶೇ. ಅರ್ಧಕ್ಕಿಂತ ಹೆಚ್ಚಿನ ಹಣ ಈಗಾಗಲೇ ರೈತರ ಖಾತೆಗಳಿಗೆ ಜಮೆ ಆಗಿದೆ. ಕಳೆದ ಹಲವಾರು ವರ್ಷಗಳಿಂದ 1,400ರಿಂದ 1,600 ಕೋಟಿ ರೂ. ಅಂದಾಜಿನಲ್ಲಿ ರಾಜ್ಯಕ್ಕೆ ಬೆಳೆವಿಮೆ ಬಿಡುಗಡೆಯಾಗುತ್ತಿದೆ. ಅದೇ ರೀತಿ 2024-25ನೇ ಸಾಲಿನ ಮಂಜೂರಾತಿ ಆಗಿರುವ ಒಟ್ಟಾರೆ ಬೆಳೆ ವಿಮೆ ಪರಿಹಾರದಲ್ಲಿ ಸಿಂಹಪಾಲು ಕಲಬುರಗಿ ಹಾಗೂ ಗದಗ ಜಿಲ್ಲೆ ಪಡೆದಿರುವುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ: Land Purchase: ಜಮೀನು ಖರೀದಿಸುವಾಗ ಈ ಕಡ್ಡಾಯವಾಗಿ ಎಲ್ಲಾ ದಾಖಲೆಗಳ ಬಗ್ಗೆ ಜಾಗೃತ:
ಕಲಬುರಗಿಗೆ 3 ಪಟ್ಟು ಹೆಚ್ಚಳ
ಕಲಬುರಗಿ ಜಿಲ್ಲೆಗೆ 656 ಕೋಟಿ ರೂ., ಗದಗ ಜಿಲ್ಲೆಗೆ 242 ಕೋ.ರೂ., ಹಾವೇರಿಗೆ 95 ಕೋ. ರೂ., ವಿಜಯಪುರಕ್ಕೆ 97 ಕೋ. ರೂ., ಧಾರವಾಡಕ್ಕೆ 23 ಕೋ. ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಗಮನಾರ್ಹ ಸಂಗತಿ ಎಂದರೆ 2023-24ನೇ ಸಾಲಿನಲ್ಲಿ ಕಲಬುರಗಿಗೆ 189 ಕೋ. ರೂ. ಹಾಗೂ ಹಾವೇರಿಗೆ 400 ಕೋ. ರೂ. ಬೆಳೆವಿಮೆ ಬಿಡುಗಡೆಯಾಗಿತ್ತು. ಗದಗ ಹಾಗೂ ಹಾವೇರಿ ಜಿಲ್ಲೆಗೆ ಸತತವಾಗಿ ಕಳೆದ ಒಂದೂವರೆ ದಶಕದಿಂದ 100 ಕೋಟಿ ರೂ.ಗೂ ಅಧಿಕ ಬೆಳೆವಿಮೆ ಬಿಡುಗಡೆಯಾಗುತ್ತಲೇ ಬರುತ್ತಿದೆ.
ಕಳೆದ ಮಾರ್ಚ್‌ನಲ್ಲೇ ಮುಂಗಾರು ಹಂಗಾಮಿನ ತೊಗರಿ, ಹೆಸರು, ಉದ್ದು, ಸೂರ್ಯಕಾಂತಿ ಸೇರಿ ಇತರ ಬೆಳೆಗಳಿಗೆ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಅಕಾಲಿಕ
ಹಾಗೂ ಕೊರತೆ ಮಳೆಯಿಂದ ಹಾನಿಗೀಡಾದ ರೈತರಿಗೆ ಈ ಬೆಳೆ ಪರಿಹಾರ ನಿಜಕ್ಕೂ ಆಸರೆಯಾಗುವಂತೆ ಮಾಡಿದೆ. ರಾಜ್ಯದಲ್ಲಿ 1,449 ಕೋಟಿ ರೂ. ಬೆಳೆವಿಮೆ ಪರಿಹಾರ 23 ಲಕ್ಷ ರೈತರಿಗೆ ದೊರಕಲಿದೆ.
ಯಾವ ಜಿಲ್ಲೆಗೆ ಎಷ್ಟು ಪರಿಹಾರ?
ಬೆಂಗಳೂರು ಗ್ರಾಮಾಂತರ 79 ಲಕ್ಷ ರೂ.,
ಬೆಂಗಳೂರು ನಗರ 4 ಲಕ್ಷ ರೂ.,
ದಕ್ಷಿಣ ಕನ್ನಡ 2.40 ಲಕ್ಷ ರೂ.,
ಧಾರವಾಡ 23 ಕೋ. ರೂ.,
ಹಾವೇರಿ 95 ಕೋ. ರೂ.,
ಉತ್ತರ ಕನ್ನಡ 1 ಕೋ. ರೂ.,
ಚಿಕ್ಕಬಳ್ಳಾಪುರ 38 ಕೋ. ರೂ.,
ಕಲಬುರಗಿ 656 ಕೋ.ರೂ.,
ಉಡುಪಿ 3 ಲಕ್ಷ ರೂ.,
ಚಿಕ್ಕಮಗಳೂರು 48 ಲಕ್ಷ ರೂ.,
ಚಿತ್ರದುರ್ಗ 33 ಕೋ. ರೂ.,
ದಾವಣಗೆರೆ 44 ಕೋ. ರೂ.
ಗದಗ 242 ಕೋ. ರೂ.,
ಹಾಸನ 26 ಕೋ. ರೂ.,
ಕೊಡಗು 23 ಲಕ್ಷ ರೂ.,
ಕೊಲಾರ 1 ಕೋ. ರೂ.,
ರಾಮನಗರ 2 ಕೋ. ರೂ.,
ಶಿವಮೊಗ್ಗ 13 ಕೋ. ರೂ.,
ತುಮಕೂರು 1 ಕೋ. ರೂ.,
ವಿಜಯನಗರ 70 ಕೋ. ರೂ.,
ವಿಜಯಪುರ 97 ಕೋ. ರೂ.,
ಬಳ್ಳಾರಿ 32 ಲಕ್ಷ ರೂ.,
ಕೊಪ್ಪಳ 34 ಕೋ. ರೂ., ಮೈಸೂರು 39 ಲಕ್ಷ ರೂ., ಯಾದಗಿರಿ 18 ಕೋ. ರೂ., ಬಾಗಲಕೋಟೆ 14 ಕೋ. ರೂ., ಬೆಳಗಾವಿ 24 ಕೋ. ರೂ., ಬೀದರ್ 13 ಕೋ. ರೂ., ಚಾಮರಾಜನಗರ 2 ಕೋ.ರೂ., ಮಂಡ್ಯ 3 ಕೋ. ರೂ., ರಾಯಚೂರು 3 ಕೋ. ರೂ., ಒಟ್ಟು 1,449 ಕೋ. ರೂ. ಈ ಎಲ್ಲಾ ಜಿಲ್ಲೆಗಳಿಗೆ ಈ ಪರಿಹಾರ ನೀಡಲಾಗಿರುತ್ತದೆ.
ಇದನ್ನೂ ಓದಿ: ಟ್ರಾಕ್ಟರ್ ಟ್ರೋಲಿ ಖರೀದಿಸಲು ಸಹಾಯಧನ
ಬೆಳೆ ವಿಮೆ ಹಣ ಪರೀಕ್ಷಿಸುವ ವಿಧಾನ:
ಕಳೆದ ವರ್ಷದ ಅರ್ಜಿ ಸ್ಥಿತಿ ಪರೀಕ್ಷೀಸಿಕೊಳ್ಳಿ:
ಬೆಳೆ ವಿಮೆ ಅರ್ಜಿ ಚೆಕ್ ಮಾಡುವ ಲಿಂಕ್ : Bele Vime Status Check link: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಂಕರಕ್ಷಣೆ ಪೋರ್ಟಲ್ ತೆರೆದ ಮೇಲೆ ಅರ್ಜಿದಾರರ ಆಧಾರ್ ನಂಬರ ಅಥವಾ ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಅರ್ಜಿಯ ಹಂತ ವೀಕ್ಷೀಸಬಹುದು.
ಕಳೆದ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಯಲ್ಲಿ ಕಲಬುರಗಿಗೆ ಹೆಚ್ಚಿನ 656 ಕೋ. ರೂ. ಪರಿಹಾರ ಬಂದಿದ್ದು, ಈಗಾಗಲೇ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಹಣ ರೈತರ ಖಾತೆಗೆ ಜಮೆಯಾಗಿದೆ. ಹೆಚ್ಚಿನ ಬೆಳೆ ವಿಮೆ ಮಂಜೂರಾತಿಯಾಗಿದ್ದರಿಂದ ಪ್ರಸಕ್ತವಾಗಿ ರೈತರಲ್ಲಿ ಬೆಳೆ ವಿಮೆ ಮಾಡಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹ ಬಂದಿದೆ. ಅಂತ
ಸಮದ್ ಪಟೇಲ್, ಜಂಟಿ ಕೃಷಿ ನಿರ್ದೇಶಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.