Thursday, September 19, 2024

BELE DARSHAK APP-ರೈತರೇ 2023 ರಲ್ಲಿ ಬೆಳೆ ಸಮೀಕ್ಷೆಯಲ್ಲಿ ನಿಮ್ಮ ಪಹಣಿ/RTC ಗೆ ದಾಖಲಾದ ಬೆಳೆಯಾವುದು ಎಂದು ತಿಳಿಯಲು ಇಲ್ಲಿದೆ ಮಾಹಿತಿ!

ರೈತರು ತಮ್ಮ ಜಮೀನಿನ ಬೆಳೆಗಳನ್ನು ಸಮೀಕ್ಷೆ ಮಾಡಲು 2-3 ವರ್ಷಗಳಿಂದ ರೈತರ ಬೆಳೆ ಸಮೀಕ್ಷೆ ಆ್ಯಪನ್ನು ರಾಜ್ಯ ಸರಕಾರವು ಬಿಡುಗಡೆ ಮಾಡಿದೆ. ಆದರೂ ಸಹ ತುಂಬಾ ಜನ ರೈತರು ತಮ್ಮ ಜಮೀನಿನ ಬೆಳೆಗಳ ಸಮೀಕ್ಷೆಯನ್ನು ತಾವೇ ಮಾಡಿಕೊಳ್ಳದೆ ಹಾಗೇ ಬಿಟ್ಟಿರುತ್ತಾರೆ. ಅಂತಹ ರೈತರ ಜಮೀನನ ಬೆಳೆ ಸಮೀಕ್ಷೆಯನ್ನು ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಕಾರದಿಂದ ಖಾಸಗಿ ನಿವಾಸಿಗಳನ್ನು ನೇಮಿಸಿ ಸಮೀಕ್ಷೆ ಮಾಡಲಾಗುತ್ತದೆ.

ಆದ್ದರಿಂದ ರೈತರು ತಮ್ಮ ಮೊಬೈಲ್ ನಲ್ಲೇ ಪಹಣಿಯಲ್ಲಿ ದಾಖಲಿಸಿದ ಬೆಳೆ ಮಾಹಿತಿ (Crop details in rtc) ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಲಾಗಿದೆ. ಈ ವೆಬ್ಸೈಟ್ ನ್ನು Open ಮಾಡಿಕೊಂಡು ತಮ್ಮ ಜಮೀನಿನ ಪಹಣಿ/ RTCಗಳಲ್ಲಿನ ಬೆಳೆ ವಿವರಗಳನ್ನು ಏನು ದಾಖಲಿಸಲಾಗಿದೆ ಎಂದು ನೋಡಬಹುದು.

ಇಂದು ಈ ಲೇಖನದಲ್ಲಿ ರೈತರು ತಮ್ಮ ಮೊಬೈಲ್ ನಲ್ಲಿ ಬೆಳೆ ವಿವರಗಳನ್ನು ಹೇಗೆ ನೋಡುವುದು? ಮತ್ತು ಪಹಣಿ/ RTC ಯಲ್ಲಿ ಬೆಳೆ ವಿವರ ಸರಿಯಾಗಿ ದಾಖಲೆ ಮಾಡುವುದು ಎಷ್ಟು ಮುಖ್ಯ? ಅದರ ಪ್ರಾಮುಖ್ಯತೆ ಇತ್ಯಾದಿ ವಿಷಯಗಳ ಕುರಿತು ಈ ಲೇಖನದಲ್ಲಿ ತಿಳಿಸಿಕೊಡಲಾಗುವುದು.

ರೈತರ ಬೆಳೆ ಸಮೀಕ್ಷೆ 2024 ರ ಮುಂಗಾರು ಹಂಗಾಮು ಆ್ಯಪ್ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ನೀವೆ ಮಾಡಿಕೊಳ್ಳಿ.

Crops details in RTC- ಪಹಣಿ/Rtc ಯಲ್ಲಿ ಬೆಳೆ ವಿವರ ದಾಖಲೆ ಏಕೆ ಮಾಡಬೇಕು?

ಅನೇಕ ರೈತರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ. ನಮಗೆ ಬೆಳೆ ವಿಮೆ, ಬೆಳೆ ಪರಿಹಾರ, ಬೆಳೆ ಸಾಲ, ಬೆಂಬಲ ಬೆಲೆ ಯೋಜನೆಗಳ ಲಾಭ ಮತ್ತು ಆರ್ಥಿಕ ನೆರವು ಸಿಗದೆ ಇರಲೂ ಅನೇಕ ಕಾರಣಗಳಿವೆ. ಅದರಲ್ಲಿ ಈ ಬೆಳೆ ಸಮೀಕ್ಷೆ ಮಾಡದೇ ಇರುವುದು ಒಂದು ಕಾರಣವಾಗಿದೆ. ಉದಾಹರಣೆಗೆ ನೀವೂ ಅಡಿಕೆ, ಕಾಳುಮೆಣಸು ಬೆಳೆಗೆ ವಿಮೆ ಮಾಡಿಸಿದ್ದರೆ ಬೆಳೆ ಸಮೀಕ್ಷೆಯಲ್ಲಿ ತೆಂಗು ಅಥವಾ ಪಾಳು ಎಂದು ಬಂದರೆ ನೀವು ಕಟ್ಟಿದ ಬೆಳೆ ವಿಮೆ ನಿಮಗೆ ಪಾವತಿಯಾಗುವುದಿಲ್ಲ.

ಇದೇ ಮಾದರಿಯಲ್ಲಿ ಕೃಷಿಸಾಲ, ಬೆಳೆ ಸಾಲ, ವಿವಿಧ ಇಲಾಖೆಗಳ ಬೆಳೆಆಧಾರಿತ ಸಹಾಯಧನ ಸೌಲಭ್ಯಗಳು ಯೋಜನೆಗಳ ಲಾಭ ಪಡೆಯಲು ಬೆಳೆ ಸಮೀಕ್ಷೆಯ ವಿವರಗಳನ್ನೆ ಪರಿಗಣಿಸಲಾಗುತ್ತದೆ. ಆದ್ದರಿಂದ ಬೆಳೆ ಸಮೀಕ್ಷೆಯ ವಿವರದಲ್ಲಿ ಬೆಳೆ ವಿವರಗಳನ್ನು ರೈತರು ಸರಿಯಾಗಿ ದಾಖಲೆ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.

How to Check Crop Survey Details-2023 ರ ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ವಿವರ ನೋಡುವ ವಿಧಾನ:

1)ಮೊದಲಿಗೆ GOOGLE PLYSTORE ಹೋಗಿ ಅಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ bele darshank app ನ್ನು ಡೌನ್ಲೋಡ್‌ ಮಾಡಿಕೊಳ್ಳಿ.

2)ನಂತರ ನಿಮಗೆ ಅದರಲ್ಲಿ ವರ್ಷ, ಋತು, ಜಿಲ್ಲೆ, ತಾಲೂಕು, ಹೋಬಳಿ,ಗ್ರಾಮ ಕೇಳುತ್ತದೆ ಅದನ್ನೂ ಹಾಕಿ ಮುಂದೆವರೆಯಿರಿ.(ರೈತರ ಗಮನಕ್ಕೆ ಋತು ಆಯ್ಕೆಯಲ್ಲಿ ವಾರ್ಷಿಕ ಬೆಳೆಗಳಿಗೆ ಮುಂಗಾರು ಮಾತ್ರ ಆಯ್ಕೆ ಮಾಡಬೇಕು, ಬೇರೆ ಬೆಳೆಗಳಿಗೆ ಬೆಳೆದ ಹಂಗಾಮು ಆಯ್ಕೆ ಮಾಡಿ)

3)ಇದಾದ ಮೇಲೆ ನಿಮ್ಮ ಸರ್ವೆ ನಂಬರ್‌ ಹಾಕಿ ವಿವರ ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ.

ಪಿಎಂ ಕಿಸಾನ್ ಹಣವು ಈ ಲಿಸ್ಟ್ ನಲ್ಲಿರುವ ರೈತರಿಗೆ ಮಾತ್ರ ಸಿಗಲಿದೆ! ನಿಮ್ಮ ಹೆಸರು ಉಂಟೆ? ಚೆಕ್ ಮಾಡಿಕೊಳ್ಳಿ.

4) ನಂತರ ನಿಮಗೆ ನಿಮ್ಮ ಸರ್ವೇ ನಂಬರಿನ್‌ ಹಿಸ್ಸಾ ನಂಬರ್ ಬರುತ್ತವೆ ಅದನ್ನು ಆಯ್ಕೆ ಮಾಡಿಕೊಳ್ಳಿ.

5)ಇದಾದ ಮೇಲೆ ಮಾಲೀಕರ ವಿವರ ಆಯ್ಕೆ ಮಾಡಿ ಮುಂದರೆವರೆಯಿರಿ.

6)ನಂತರ ಸಮೀಕ್ಷೆ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್‌ ಮಾಡಿ ಮುಂದೆವರೆಯಿರಿ.

7)ಕ್ಲಿಕ್‌ ಮಾಡಿದ ಮೇಲೆ ನಿಮಗೆ ಅಲ್ಲಿ ಸಮೀಕ್ಷೆಗಾರರ ಹೆಸರು, ಮೊಬೈಲ್‌ ಸಂಖ್ಯೆ, ಸಮೀಕ್ಷೆಯ ದಿನಾಂಕ ಕಾಣುತ್ತದೆ ಅದರ ಕೆಳಗಡೆ ಇರುವ ಮೊಬೈಲ್‌ ನಂಬರ್‌ ಮೇಲೆ ಕ್ಲಿಕ್‌ ಮಾಡಿ ಆಗ ನಿಮಗೆ ತಿಳಿ ಹಸಿರು ಬಣ್ಣದ ಬದಲಾವಣೆ ಕಾಣುತ್ತದೆ.

8)ನಂತರ ನಿಮಗೆ ಅದರ ಕೆಳಗಡೆ ಕಾಣುವ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್‌ ಮಾಡಿ.

9)ಆಗ ನಿಮಗೆ ರೈತನ ಹೆಸರು, ಸರ್ವೇ ನಂಬರ್‌, ಮೊಬೈಲ್‌ ನಂ, ಅದರ ಕೆಳಗಡೆ ಬೆಳೆ ಹೆಸರು , ವಿಸ್ತೀರ್ಣ, ವರ್ಗ, ನೀರಾವರಿ ವಿಧ, ಷರ್‌, ಛಾಯಾಚಿತ್ರ ವೀಕ್ಷಿಸಿ, ಋತು ಎಂಬ ಆಯ್ಕೆಗಳು ಕಾಣಿಸುತ್ತವೆ.

10)ತಮಗೆ ಕಾಣುವ ಬೆಳೆಯ ಹೆಸರು ಏನು ನಮೂದಾಗಿದೆ ಎಂದು ತಿಳಿಯುತ್ತದೆ. ಹಾಗೂ ನಿಮ್ಮ ಬೆಳೆಯ ಪೋಟೋ ಸಹ ತಾವು ಅಲ್ಲಿ ನೋಡಬಹುದು.

ದಾಖಲಾದ ಬೆಳೆ ವಿವರ ತಿಳಿಯಲು ಇಲ್ಲಿದೆ ಲಿಂಕ್ Click here….

ಇತ್ತೀಚಿನ ಸುದ್ದಿಗಳು

Related Articles