Bara Parihara list-2024: ಈ ರೈತರಿಗೆ ಮಾತ್ರ ಬರ ಪರಿಹಾರ!!!
ಮೊದಲ ಹಂತದಲ್ಲಿ ಯಾವ ತಾಲೂಕಿನಲ್ಲಿ ಎಷ್ಟು ರೈತರು ಆಯ್ಕೆ? ಬಿಡುಗಡೆ ಹಣ ಎಷ್ಟು?
ಆತ್ಮೀಯ ರೈತ ಬಾಂದವರೇ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನ ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರಾಜ್ಯದ ರೈತರಿಗೆ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಈ ಪರಿಹಾರ ಹಣ ಜಮಾ ಯಾರಿಗೆ ಆಗಿದೆ ತಿಳಿಯಲು ಈ ಅಂಕಣದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿರುತ್ತದೆ. ಈ ಮಾಹಿತಿಯನ್ನು ಓದಿ ಇನ್ನೂ ಹೆಚ್ಚಿನ ರೈತರಿಗೆ ಶೇರ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಿ.
ಸರ್ಕಾರ ಇದೇ ತಿಂಗಳ ದಿನಾಂಕ: 05 ಜನವರಿ 2024 ರಂದು ಮೊದಲ ಹಂತದ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದ್ದು ಕೃಷಿ ಇಲಾಖೆಯ ಪೂಟ್ಸ್ Fruits ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿ ಆಧಾರದ ಮೇಲೆ ರೈತರ ಖಾತೆಗೆ ಪ್ರಥಮ ಕಂತಿನ ರೂ 2,000 ಜಮಾ ಆಗಲಿದೆ.
ಇದನ್ನೂ ಓದಿ: ಜಿಲ್ಲೆಯ ರೈತರಿಗೆ ಪ್ರಥಮ ಮತ್ತು ದ್ವೀತಿಯ ಹಾಗೂ ತೃತೀಯ ಹಂತಗಳಲ್ಲಿ ಎಷ್ಟು ರೈತರಿಗೆ ಬರ ಪರಿಹಾರ
ಈ ಕೆಳಗೆ ಕಾಣಿಸಿರುವ ವಿಧಾನ ಪ್ರಕಾರ ಪರೀಕ್ಷಿಸಿ:
ಈ ಪರಿಹಾರ ಹಣದ ಜಮಾ ವಿವರವನ್ನು ಈ ವಿಧಾನದ ಮೂಲಕ ನೋಡಬಹುದು.
ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು ಮತ್ತು ಬ್ಯಾಂಕ್ ವಿವರ ಕೃಷಿ ಇಲಾಖೆಯ ಪ್ರೊಟ್ಸ್ ವೆಬೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಅಗಿರುತ್ತದೆ ಎಂದು ಚೆಕ್ ಮಾಡಿಕೊಳ್ಳಬವುದಾಗಿದೆ.
Bara parihara status- ಆಧಾರ್ ನಂಬರ್ ಹಾಕಿ FID ನಂಬರ್ ಹಾಕಿ ಪರೀಕ್ಷಿಸಿಕೊಳ್ಳಬಹುದು:
ಬರ ಪರಿಹಾರ ಮತ್ತು ಸರಕಾರದ ಇತರೆ ಇಲಾಖೆಗಳ ಸಹಾಯಧನ ಪಡೆಯಲು ಕಡ್ಡಾಯವಾಗಿ ಸರಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯ ಮಾಡಲಾಗಿದ್ದು ಈ ನಂಬರ್ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಅಗಲಿದೆ ಎಂದು ತಿಳಿಸಲಾಗಿದೆ.
ಇದರ ಪ್ರಕಾರ ರೈತರ ತಮ್ಮ ಅಧಾರ್ ನಂಬರ್ . ಅನ್ನು ಹಾಕಿ FID ನಂಬರ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು ಈ ಕೆಳಗೆ ನೀಡಿ ಮಾಹಿತಿಯನ್ನು ಬಳಕೆ ಮಾಡಿಕೊಂಡು ನಿಮ್ಮ
ಅಧಾರ್ ನಂಬರ್ ಅನ್ನು ಹಾಕಿ FID ನಂಬರ್ ರಚನೆ ಅಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬವುದು.
ಹಂತ : 1 :ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ FID number check 12 ಅಂಕಿಯ ಆಧಾರ್ ನಂಬರ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ -2: “Search” ಮಾಡಿದ ನಂತರ ನಿಮಗೆ ಇಲ್ಲಿ 16 ಅಂಕಿಯ “FID1404**” ಗೋಚರಿಸುತ್ತದೆ ಈ ಸಂಖ್ಯೆ ಬಂದರೆ ನಿಮ್ಮ FID ನಂಬರ್ ರಚನೆ ಆಗಿದೆ ಎಂದು ಒಂದೊಮ್ಮೆ “Data not found” ಅಂತ ಗೋಚರಿಸಿದರೆ FID ನಂಬರ್ ರಚನೆ ಅಗಿಲ್ಲ ಎಂದು ಅರ್ಥ, ಅಗ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ FID ಸಂಖ್ಯೆಯನ್ನು ರಚನೆ ಮಾಡಿಕೊಳ್ಳಬೇಕು.
ಪರೀಕ್ಷಿಸುವ ವಿಧಾನ 2:
Parihara list-2023- 24 ಅರ್ಹ ರೈತರ ಪಟ್ಟಿ ಪಡೆಯಲ್ಲಿ ಹೆಸರನ್ನು ಚೆಕ್ ಮಾಡುವ ಮೂಲಕ ತಿಳಿಯಬಹುದು:
ಈ ಪಟ್ಟಿಯು ಪಿ ಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ರೈತರ ಪಟ್ಟಿಯಾಗಿದ್ದು ಬಹುತೇಕ ಈ ಪಟ್ಟಿಯಲ್ಲಿರುವವರಿಗೆ FID ನಂಬರ್ ಇದ್ದು ಈ ಪಟ್ಟಿ ಅನುಗುಣವಾಗಿಯೇ ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ಜಮಾ ಆಗುವುದು ಖಚಿತವಾಗಿದೆ.
ಹಂತ -1: Parihara list ಮೇಲೆ ಕ್ಲಿಕ್ ಮಾಡಿ ಕೃಷಿ ಇಲಾಖೆಯೆ ಅಧಿಕೃತ ಪಿ ಎಂ ಕಿಸಾನ್ ಪ್ರೊಟ್ಸ್ ತಂತ್ರಾಂಶವನ್ನು ಭೇಟಿ ಮಾಡಬೇಕು.
ಹಂತ -2: ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ ಮತ್ತು ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು “ವಿಕ್ಷೀಸು” ಬಟನ್ ಮೇಲೆ ಕ್ಲಿಕ್ ಮಾಡಿದರೆ ಹಳ್ಳಿವಾರು ಅರ್ಹ ಫಲಾನುಭವಿ ಪಟ್ಟಿ ತೋರಿಸುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರ ಇದಿಯೇ ಎಂದು ಚೆಕ್ ಮಾಡಿಕೊಳ್ಳಿ ಇದ್ದಲಿ ನಿಮಗೆ ರಾಜ್ಯ ಸರಕಾರದಿಂದ ನೀಡುವ ಪರಿಹಾರದ ಹಣ ಯಾವುದೇ ತಾಂತ್ರಿಕ ತೊಂದರೆಗಳಿಲ್ಲದೆ ನಿಮ್ಮ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಅಗುತ್ತದೆ.
ಈ ಎರಡು ರೀತಿಯಲ್ಲಿ ಬರ ಪರಿಹಾರದ ಹಣ ಜಮಾ ವಿವರ ತಿಳಿಯಬಹುದಾಗಿರುತ್ತದೆ.
ರೈತರ ಗಮನಕ್ಕೆ: ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.