Thursday, September 19, 2024

Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ನಮ್ಮ ರಾಜ್ಯದಲ್ಲಿ2023ನೇ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲ ಪರಿಸ್ಥಿತಿ ಉಂಟಾಗಿದ್ದು. ಹಾಗಾಗಿ ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್(NDRF) ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರಕ್ಕೆ 3498 ಕೋಟಿ ಹಣ(Parihara amount) ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ 240 ತಾಲೂಕುಗಳಲ್ಲಿ ಈ ಬಾರಿ 223 ತಾಲೂಕುಗಳು ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿವೆ. ಈ ಬರಗಾಲ ಎದುರಿಸುತ್ತಿರುವ ತಾಲೂಕುಗಳ ರೈತರಿಗೆ ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಹಣವನ್ನು ರಾಜ್ಯ ಸರಕಾರದಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ.

ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ ಹಣ ರೂ2000ವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದ್ದು, ಎರಡನೇ ಕಂತಿನ ಹಣವನ್ನು ಈ ಕೆಳಗೆ ತಿಳಿಸಿರುವ ಪಟ್ಟಿಯಲ್ಲಿ ಇರುವ ರೈತರಿಗೆ ಸಂಬಂಧಪಟ್ಟ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Recruitment of Library Supervisor: ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ

Bara Parihara eligibility farmers list-ಈ ಪಟ್ಟಿಯಲ್ಲಿ ಇರುವವರಿಗೆ ಸಿಗಲಿದೆ ಪರಿಹಾರದ ಹಣ:

ಕೇಂದ್ರದಿಂದ ಪ್ರಸ್ತುತ ಬಿಡುಗಡೆಯಾಗಿರುವ ಬರ ಪರಿಹಾರದ ಹಣ ಯಾವೆಲ್ಲ ರೈತರಿಗೆ ಸಿಗಲಿದೆ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲೇ ರೈತರು ತಿಳಿಯಬಹುದು.

Step-1: ಈ ಲಿಂಕ್ parihara farmer list ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ತದನಂತರದಲ್ಲಿ “Select year/ವರ್ಷ ಆಯ್ಕೆ ಮಾಡಿ”, Select season/ಋತು ಆಯ್ಕೆ ಮಾಡಿಕೊಂಡು, Calamity Type/ವಿಪತ್ತಿನ ವಿಧ ಮತ್ತು ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Hobli/ಹೋಬಳಿ, ಮತ್ತು ನಿಮ್ಮ Village/ಗ್ರಾಮ/ಹಳ್ಳಿಯನ್ನು ಸೆಲೆಕ್ಟ್ ಮಾಡಿ “Get Report” ಆಯ್ಕೆ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Electronics repair training- ಉಚಿತ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Step-2: “Get Report” ಸೂಚನೆ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ಇಲ್ಲಿ “ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details” ಎಂದು ತೋರಿಸುತ್ತದೆ ಇದರ ಕೆಳಗೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪ್ರಥಮ ಕಂತಿನ ರೂ 2,000 ಬರ ಪರಿಹಾರ ಜಮಾ ಅಗಿದೆ ಎನ್ನುವ ರೈತರ ಪಟ್ಟಿಯು ಕಾಣುತ್ತದೆ. ಈ ಪಟ್ಟಿಯಲ್ಲಿ ಹೆಸರಿರುವ ರೈತರಿಗೆ 2ನೇ ಕಂತಿನ ಬರ ಪರಿಹಾರದ ಆರ್ಥಿಕ ನೆರವು ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದಲ್ಲಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ ಈ ಕುರಿತು ವಿಚಾರಣೆ ಮಾಡಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬೇಕು.

Parihara payment-NDRF ಮಾರ್ಗಸೂಚಿಯನ್ವಯ ಪ್ರತಿ ಹೆಕ್ಟೇರ್‌ಗೆ(2.5 acre) ನಿಗಧಿಪಡಿಸಿದ ಪರಿಹಾರದ ಮೊತ್ತ:

ಶೇ 33ಕ್ಕಿಂತ ಹೆಚ್ಚು ಹಾನಿಯಾದ ವಿಸ್ತೀರ್ಣಕ್ಕೆ ಪ್ರತಿ ಹೆಕ್ಟೇರ್‌ಗೆ ನಿಗಧಿಪಡಿಸಿರುವ ಬರ ಪರಿಹಾರ ಹಣ ವಿವರ ಹೀಗಿದೆ:

ಇದನ್ನೂ ಓದಿ:Free Competitive Exam Coaching: ಉಚಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ:ಮಾನದಂಡಗಳೇನು? ಆಯ್ಕೆ ವಿಧಾನ? ತರಬೇತಿ ಅವಧಿ? ಇತರೆ ಮಾಹಿತಿ

(A) ಮಳೆಯಾಶ್ರಿತ ಬೆಳೆಗಳಿಗೆ- 8,500 ರೂ

(B) ನೀರಾವರಿ ಬೆಳೆಗಳಿಗೆ- 17,000 ರೂ

(C) ಬಹುವಾರ್ಷಿಕ ಬೆಳೆಗಳಿಗೆ- 22,500 ರೂ

ಇತ್ತೀಚಿನ ಸುದ್ದಿಗಳು

Related Articles