ಆತ್ಮೀಯ ರೈತ ಭಾಂದವರೇ ನಮ್ಮ ಭಾರತ ದೇಶದಲ್ಲಿ ಕೃಷಿ ಬೆಳೆಗಳಲ್ಲಿ ವಾಣಿಜ್ಯ ಬೆಳೆಯಾಗಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಅಡಿಕೆ ಬೆಳೆಗೆ ಬರುವ ರೋಗವಾದ ಕೊಳೆರೋಗವನ್ನು ತಡೆಗಟ್ಟಲು ರೈತರು ಪ್ರತಿ ವರ್ಷ ಎರಡ ರಿಂದ ಮೂರು ಬಾರಿ ಬೋರ್ಡೋ ದ್ರಾವಣವನ್ನು ಸಿಂಪರಣೆ ಮಾಡಲಾಗುತ್ತದೆ.
ಆದರೂ ಸಹ ಈ ರೋಗದ ನಿರ್ವಹಣೆ ಮಾಡುವಲ್ಲಿ ರೈತರು ಸೋತು ಹೋಗುತ್ತಾರೆ. ಕಾರಣ ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ಯಾವ ಸಮಯದಲ್ಲಿ ಹೊಡೆಯಬೇಕು? ಹೇಗೆ ತಯಾರಿಸಿದರೇ ಶುದ್ಧ ವಾಗಿರುತ್ತದೆ. ಎಂಬ ಇತ್ಯಾದಿ ವೈಜ್ಞಾನಿಕ ಮಾಹಿತಿಯ ಕೊರತೆಗಳು ರೈತರಲ್ಲಿ ಇರುವುದಕ್ಕೆ ಇಂದು ರೈತರಿಗೆ ಅಡಿಕೆ ಬೆಳೆಯಲ್ಲಿ ಮುಖ್ಯವಾದ ಸಮಸ್ಯೆಯಾಗಿದೆ.
ಅಡಿಕೆ ನಮ್ಮ ದೇಶದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಅರೆ ಮಲೆನಾಡು ಪ್ರದೇಶಗಳ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆ ಬೆಳೆಯ ನಿಖರ ಆದಾಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರುತ್ತಿದ್ದಾರೆ.
ಅಡಿಕೆ ಬೆಳೆಯನ್ನು ಪ್ರಸ್ತುತ 4.76 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆದು, 7.78 ಲಕ್ಷ ಟನ್ ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯವು ಅಡಿಕೆ ಬೆಳೆಯ ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದಿವೆ.
ಆದರೆ ಇತೀಚಿನ ದಿನಗಳಲ್ಲಿ ಅಡಿಕೆ ಬೆಳೆಗೆ ವಿವಧ ಬಗೆಯ ರೋಗ ರುಜಿನಗಳಿಂದಾಗಿ ಇಳುವರಿ ಕಡಿಮೆಯಾಗುತ್ತಿದೆ. ಅದರಲ್ಲಿಈಕೊಳೆರೋಗವು ಅಡಿಕೆ ಬೆಳೆಗೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಅದರ ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ಯಾವ ಸಮಯದಲ್ಲಿ ಹೊಡೆಯಬೇಕು? ಎಂಬ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಿದೆ.
ಅಡಿಕೆ ಬೆಳೆಗೆ ಬೋರ್ಡೋ ದ್ರಾವಣವನ್ನು ಯಾವ ಸಮಯದಲ್ಲಿ ಹೊಡೆಯಬೇಕು? ಹೇಗೆ ತಯಾರಿಸಿದರೇ ಶುದ್ಧ ವಾಗಿರುತ್ತದೆ.
ಅಡಿಕೆ ಕೊಳೆ ರೋಗವನ್ನು ತಡೆಗಟ್ಟಲು ಬೋರ್ಡೋ ದ್ರಾವಣ ಸಿಂಪರಣೆ ಮಾಡುವುದು ತುಂಬಾ ಮುಖ್ಯವಾಗಿದೆ. ಈ ಬೋರ್ಡೋದ್ರಾವಣವನ್ನು ಮುಂಗಾರು ಮಳೆಯ ಪ್ರಾರಂಭದ ಹಂತದಲ್ಲಿ ಅಂದರೆ ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ತಿಂಗಳ ಮೊದಲ ವಾರಗಳಲ್ಲಿ ಸಿಂಪರಣೆ ಮಾಡಬೇಕು. 30-40ದಿನಗಳಲ್ಲಿ 2ನೇ ಬಾರಿ ಬೋರ್ಡೋ ದ್ರಾವಣ ಸಿಂಪರಣೆ ಮಾಡಬೇಕು. ಮಳೆ ಬರುವ ಸಮಯದಲ್ಲಿ ಸಿಂಪರಣೆ ಮಾಡಬಾರದು. ಸಿಂಪರಣೆ ಮಾಡಿದ ಮೇಲೆ ಬಿಟ್ಟ್ ಮದ್ದು ಒಣಗುವ ವರೆಗೂ ಅಂದರೆ 6 ಗಂಟೆ ಕಾಲ ಮಳೆ ಬರಬಾರದು.
ಬೋರ್ಡೋದ್ರಾವಣ ತಯಾರಿ ವಿಧಾನ:
ಮೊದಲಿಗೆ 1ಕೆ.ಜಿ ಮೈಲುತುತ್ತ ಮತ್ತು 1ಕೆ.ಜಿ ಸುಣ್ಣವನ್ನು ತೆಗೆದುಕೊಳ್ಳಬೇಕು, ನಂತರ ಎರಡು ಬಕೇಟ್ ಗಳನ್ನು ತೆಗೆದುಕೊಂಡು 10ಲೀಟರ್ ನೀರನ್ನು ಎರಡು ಬಕೇಟನಲ್ಲಿ ತುಂಬಬೇಕು. ನಂತರ ಒಂದು ಬಕೇಟಗೆ ಮೈಲುತುತ್ತ ಮತ್ತು ಇನ್ನೊಂದು ಬಕೇಟಗೆ ಸುಣ್ಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿ ಆದಮೇಲೆ ಒಂದು ದೊಡ್ಡ ಬ್ಯಾರಲ್ ನಲ್ಲಿ 80ಲೀಟರ್ ನೀರು ತೆಗೆದುಕೊಳ್ಳಬೇಕು. ಅದಕ್ಕೆ ಈಗಾಗಲೇ ತಯಾರಿಸಿದ ಸುಣ್ಣ ಮತ್ತು ಮೈಲತುತ್ತದ ಮಿಶ್ರಣವನ್ನು ಏಕಕಾಲದಲ್ಲಿ ಸುರಿಯಬೇಕು ಹಾಗೂ ಅದರ ಜೊತೆಯಲ್ಲೇ ಮಿಶ್ರಣ ಮಾಡಬೇಕು.
1% ಬೋರ್ಡೋ ದ್ರಾವಣ ಪರೀಕ್ಷಿಸುವುದು ಹೇಗೆ?
ಬೋರ್ಡೋ ದ್ರಾವಣ ಪರೀಕ್ಷಿಸಲು ಹೋದಾಗ ಹೊಸದಾದ ಬ್ಲೇಡ್ ಅಥವಾ ಹರಿತವಾದ ಚಾಕು/ ಕತ್ತಿಯನ್ನು ದ್ರಾವಣದಲ್ಲಿ ಅದ್ದಬೇಕು. ತದ ನಂತರ ಇದನ್ನು 5 ನಿಮಿಷ ಸೂರ್ಯನ ಬಿಸಿಲಿಗೆ ಒಡ್ಡಬೇಕು. ತಾಮ್ರದ ಕಲೆಗಳು ಕಂಡು ಬಂದರೆ ಸುಣ್ಣದ ತಿಳಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಬೆರೆಸುತ್ತಾ ಕಂದು ಬಣ್ಣದ ಕಲೆಗಳು ಕಂಡು ಬರದ ಹಾಗೆ ಹೊಂದಿಸಬೇಕು.
ಇನ್ನೊಂದು ರೂಪದಲ್ಲಿ ಅರಿಶಿಣಹುಡಿ ಹಾಕಿ ನೋಡಬಹುದು ಅರಿಶಿಣಹುಡಿಯ ಬಣ್ಣ ಬದಲಾಗಬಾರದು. ಬಣ್ಣ ಬದಲಾದರೆ ಸುಣ್ಣದ ತಿಳಿ ನೀರನ್ನು ಸ್ವಲ್ಪ ಸ್ವಲ್ಪವಾಗಿ ಬೆರೆಸುತ್ತಾ ಅರಿಶಿಣದ ಬಣ್ಣ ಬದಲಾಗದ ಹಾಗೆ ಹೊಂದಿಸಬೇಕು.
ಇದನ್ನೂ ಓದಿ: ಕಿರು ಆಹಾರ ಸಂಸ್ಕರಣೆ ಯೋಜನೆಯಡಿ ಕಿರು ಉದ್ಯಮ ಸ್ಥಾಪನೆಗೆ 15 ಲಕ್ಷದವರೆಗೂ ಸಹಾಯಧನ!
ಒಂದು ವೇಳೆ ಮಳೆ ಜೋರಾಗಿದ್ದು ದ್ರಾವಣ ಸಿಂಪರಣೆ ಮಾಡಲಾಗದ ಸಮಯದಲ್ಲಿ ಏನು ಮಾಡಬೇಕು?
ಬೋರ್ಡೋ ದ್ರಾವಣ ಸಿಂಪಡಿಸುವುದು ತಡವಾದಲ್ಲಿ 100ಗ್ರಾಂ. ಸಕ್ಕರೆ ಅಥವಾ ಬೆಲ್ಲ ಪ್ರತಿ 100ಲೀಟರ್ ದ್ರಾವಣಕ್ಕೆ ಬೆರೆಸುವುದರಿಂದ ದ್ರಾವಣ ಕೆಡದಂತೆ 1 ದಿನದಷ್ಟು ಬಳಕೆ ಸಮಯ ಮುಂದೂಡಬಹುದು. ಇದರ ಜೊತೆಗೆ ಯಾವುದೇ ದ್ರಾವಣಗಳನ್ನು ಮಿಶ್ರಣ ಮಾಡಬಾರದು.