Thursday, November 21, 2024

ಈ ಜಿಲ್ಲೆಯಲ್ಲಿ ಕರ್ನಾಟಕ ಓನ್ ತೆರಯಲು ಅವಕಾಶ ? ಯಾವ ಜಿಲ್ಲೆ? ಅರ್ಹತೆ ಏನು ? ಎಷ್ಟು ಕೇಂದ್ರ ತೆರೆಯಲು ಅವಕಾಶ?

ಯುವ ಮಿತ್ರರೇ ಬೆಳಗಿನ ಶುಭೋದಯ ನೀವು ಏನಾದರೂ ಸ್ವತಂ ಉದ್ಯೋಗ, ಮಾಡಲು ಇಚ್ಛಸಿದ್ದರೆ ಇಲ್ಲಿದೆ ನಿಮ್ಮಗೆ ಒಂದು ಉತ್ತಮ ಅವಕಾಶ ಈ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ಜಿಲ್ಲಾ ಆಡಳಿತ ಕಲಬುರಗಿಯಿಂದ ಗ್ರಾಮೀಣ ಭಾಗದ ಜನ ಸಾಮಾನ್ಯರು ಸರ್ಕಾರದ ಯೋಜನೆಗಳ ಪಡೆಯಲು ತಾಲ್ಲೂಕು ಹಾಗೂ ಜಿಲ್ಲೆಯ ಸರ್ಕಾರಿ ಕಚೇರಿಗಳನ್ನು ಅಲೆದಾಡುವುದು ತಪ್ಪಿಸಲು ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಗಳಿಗೆ ಮತ್ತು ಎಲ್ಲಾ ವರ್ಗದ ಸಮುದಾಗಳಿಗೂ ಒಂದೇ ಸೂರಿನಡಿ ವಿವಿಧ ಅಗತ್ಯ ಸೇವೆಗಳನ್ನು ನೀಡಲು ಗ್ರಾಮ ಮಟ್ಟದಲ್ಲಿ ಮತ್ತು ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಪದವೀಧರ ಯುವಕರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಕೂಡಾ ಈ ಒಂದು ಯೋಜನೆಯನ್ನು ಜಾರಿಗೆ ತಂದಿರುತ್ತದೆ.

ಇದನ್ನೂ ಓದಿ: ತೋಟಗಾರಿಕೆ ವಿಶ್ವವಿದ್ಯಾಲಯದಿಂದ ರೈತರ ಮಕ್ಕಳಿಗೆ ಮಾಸಿಕ ಶಿಷ್ಯವೇತನದ ಜೊತೆಗೆ ಉಚಿತ ತೋಟಗಾರಿಕೆ ತರಬೇತಿ

ಈ ಕೇಂದ್ರ ತೆರೆಯಲು ಬೇಕಾದ ಅರ್ಹತೆಗಳು:

1.ಪದವಿಯಾಗಿರಬೇಕು ಜೊತೆಗೆ ಕಂಪ್ಯೂಟರ್‍ ಕೋರ್ಸ ಪಡೆದ ಸರ್ಟಿಪಿಕೆಟ್ ಹೊಂದಿರಬೇಕು.
2.ಪೋಲಿಸ್ ತಪಾಸಣಾ ಪ್ರಮಾಣ ಪತ್ರ ಸಲ್ಲಿಸಬೇಕು
3.ಗ್ರಾಮದ ಗ್ರಾಮ ಪಂಚಾಯತ ಕೇಂದ್ರ ಹಾಗೂ ಹೋಬಳಿ ಮಟ್ಟದಲ್ಲಿ ಜನರಿಗೆ ಸುಲಭವಾಗಿ ದೊರೆಯುವ ಸ್ಥಳದಲ್ಲಿ ಇರಬೇಕು.

ಕಲಬುರಗಿ ಜಿಲ್ಲೆಯ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಫ್ರಾಂಚೈಸಿಗಳ ಮೂಲಕ ಒಟ್ಟು 37 ಕರ್ನಾಟಕ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅಲ್ಲಿಯ ಯುವಕರು ಇದರ ಪ್ರಯೋಜನ ಪಡೆಯಬೇಕಾಗಿ ತಿಳಿಸಲಾಗಿರುತ್ತೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆವಾರು ಖಾಲಿಯಿರುವ ಕೇಂದ್ರಗಳ ವಿವರ ಇಂತಿದೆ.


1.ಕಲಬುರಗಿ- 16

2.ಕಾಳಗಿ- 03

3.ಆಳಂದ- 03

4.ಚಿಂಚೋಳಿ -01


5.ಚಿತ್ತಾಪುರ- 02

6.ಜೇವರ್ಗಿ-02

7.ಸೇಡಂ- 03

8.ವಾಡಿ – 03

9.ಕಮಲಾಪುರ- 01
10.ಯಡ್ರಾಮಿ – 01

11.ಶಹಾಬಾದ – 02

12.ಅಫಜಲಪುರ -02

ಮೇಲೆ ಕಾಣಿಸಿದ ಒಟ್ಟು 37 ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು
ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.

ಇದನ್ನೂ ಓದಿ: ಹೊಸ ಪಡಿತರ ಮಳಿಗೆ (ನ್ಯಾಯಬೆಲೆ ಅಂಗಡಿ) ತೆರೆಯಲು ಅರ್ಜಿ ಆಹ್ವಾನ…

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹರು Franchisee https://www.karnatakaone.gov.in/Public/ ವೆಬ್ ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಡೈರೆಕ್ಟರ್ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:https://www.karnatakaone.gov.in/Public/

ಅರ್ಜಿ ಸಲ್ಲಿಸಲು ತಿಳಿಸಿದೆ.

ಇದನ್ನೂ ಓದಿ: 150,000 ರೂ. ವಸತಿ ಯೋಜನೆಯಡಿ ಪ್ರತಿ ಮನೆಗೆ ಆರ್ಥಿಕ ಸಹಾಯ ಮತ್ತು ಇತರೆ ಪ್ರಮುಖ ಅಂಶಗಳು

ಕೊನೆಯ ದಿನಾಂಕ?

2023ರ ಮಾರ್ಚ್ 20ರ ರಾತ್ರಿ 8 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಆಡಳಿತವನ್ನು ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿಗಳು

Related Articles