Anugraha Scheme 2024: ಜಾನುವಾರು ಮಾಲೀಕರು ಈ ಮಾಹಿತಿ ಅವಶ್ಯಕವಾಗಿ ತಿಳುದುಕೊಳ್ಳಿ
ಸರ್ಕಾರದಿಂದ ಸಹಾಯಧನ ಘೋಷಣೆ
ಆತ್ಮೀಯ ರಾಜ್ಯದ ರೈತ ಬಾಂದವರೇ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಜಾನುವಾರು ಸಾಕಾಣಿಕೆ ಮಾಡಿರುವ ರೈತರಿಗೆ ತಮ್ಮ ಜಾನುವಾರು ಆಕಸ್ಮಿಕವಾಗಿ ಮರಣ ಹೊಂದಿದ ಸಂಧರ್ಭ ದಲ್ಲಿ ಪಶು ಸಂಗೋಪನೆ ಇಲಾಖೆಯಿಂದ ಸಹಾಯಧನವನ್ನು ನೀಡುವುದಾಗಿ ಪ್ರಕಟಣೆ ಹೊರಡಿಸಿದೆ.
Anugrha scheme-2023 Parihara Mahiti:
ಈ ಅನುಗ್ರಹ ಯೋಜನೆಯಡಿ ರೈತರ ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಟ ರೂ.10,000/- ದಂತೆ ಆಕಸ್ಮಿಕ ಮರಣ ಹೊಂದಿದ ಸಂದರ್ಭದಲ್ಲಿ ಪರಿಹಾರವನ್ನು ನೀಡಲು ಕರ್ನಾಟಕ ಸರ್ಕಾರ ಘೋಷಣೆ ಮಾಡಿರುತ್ತದೆ.
ಇದನ್ನೂ ಓದಿ: Drought relief Grant district wise: ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ? ಯಾರಿಗೆ ಜಮಾ ?
ಅರ್ಜಿ ಸಲ್ಲಿಕೆ ವಿಧಾನ ಮತ್ತು ಯೋಜನೆಯ ಮಾರ್ಗಸೂಚಿಯನ್ನು ತಿಳಿಸಲಾಗಿದ್ದು ಈ ಕುರಿತು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.
Anugrha scheme-2023: ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಕಟಣೆ ವಿವರ ಈ ಕೆಳಗಿನಂತಿದೆ:
ಈ ಮೂಲಕ ಜಾನುವಾರು ಮಾಲೀಕರಿಗೆ ತಿಳಿಸುವುದೇನೆಂದರೆ 2023- 24ನೇ ಸಾಲಿನಲ್ಲಿ ಅನುಗ್ರಹ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಟ ರೂ.10,000/-ದಂತೆ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ.
ಜಾನುವಾರು ಮಾಲೀಕರು ಸದರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೃತಪಟ್ಟ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಸೌಲಭ್ಯವನ್ನು ಪಡೆಯಬಹುದೆಂದು ಈ ಮೂಲಕ ತಿಳಿಸಿದೆ.
ಪಶುಸಖಿಯರು ಮೃತ ಪಟ್ಟ ಜಾನುವಾರುವಿನ ಮಾಲೀಕರಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲು ಕೋರಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.
ಹಾಗಿದ್ದರೇ ಅರ್ಜಿ ಸಲ್ಲಿಸುವುದು ಎಲ್ಲಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: PM- Kisan 16th installment: ಪಿ ಎಂ ಕಿಸಾನ್ 16 ನೇ ಕಂತಿನ ಹಣಕ್ಕೆ ಈ ಪ್ರಕ್ರಿಯೆ ಕಡ್ಡಾಯ!!!
Application and Documents: ಅರ್ಜಿ ಎಲ್ಲಿ ಸಲ್ಲಿಸಬೇಕು ಮತ್ತು ಅಗತ್ಯ ದಾಖಲಾತಿಗಳೇನು?
ರೈತರು ಜಾನುವಾರುಗಳು ಮರಣ ಹೊಂದಿದ್ದ ತಕ್ಷಣ ಸ್ಥಳೀಯ ಪಶು ಆಸ್ಪತ್ರೆಯನ್ನು ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಣ ಪತ್ರ ಪಡೆಯಬೇಕು ನಂತರ ಅರ್ಜಿದಾರರ ಅಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಸಮೇತ ನಿಮ್ಮ ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಚೇರಿ ಭೇಟಿ ಅರ್ಜಿ ಸಲ್ಲಿಸಬಹುದಾಗಿದೆ.
Department Schemes and Other Information: ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ.
ರೈತರು ಈ ಸಹಾಯವಾಣಿಯ ಮೂಲಕ ಯಾವೆಲ್ಲ ಮಾಹಿತಿ ಪಡೆಯಬವುದು:
ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಯಾವ ದಿನ ನಡೆಯುತ್ತದೆ ಇತ್ಯಾದು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬವುದು.
ಜಾನುವಾರು ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರ.
ದೇಶಿ ಹಾಗೂ ವಿದೇಶಿ ಜಾನವಾರು ತಳಿಗಳ ಬಗ್ಗೆ ಮಾಹಿತಿ.
ಜಾನುವಾರುಗಳಲ್ಲಿ ನಿಯಮಿತವಾಗಿ ನೀಡಬೇಕಾಗಿರುವ ಲಸಿಕೆಗಳ ಕುರಿತು ವಿವರಣೆ.
ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ.
ಮಿಶ್ರತಳಿ ಹಸು, ಕುರಿ ಮತ್ತು ಮೇಕೆ, ಹಂದಿಗಳ ಅಂದಾಜು ಬೆಲೆ ಹಾಗೂ ಅವುಗಳ ಲಭ್ಯತೆ ಕುರಿತಂತೆ ಸೂಕ್ತ ಸ್ಥಳಗಳ ವಿವರ.
ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ.
ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗೆ ವರ್ಗಾಯಿಸಿ, ಅಗತ್ಯ ಸೇವೆ ದೊರೆಯುವಂತೆ ಸಹಕರಿಸುವುದು.
Pashupalane Helpline number-2 ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬವುದು: 8277100200
ಈ ಸಹಾಯವಾಣಿಯು 24/7 ಗಂಟೆಯೂ ಸೇವೆಯಲ್ಲಿ ಇರುತ್ತದೆ. . ರೈತರು ಯಾವ ಸಮಯದಲ್ಲೂ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬವುದು.
ಇದರನ್ವಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆವತಿಯಿಂದ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.