Saturday, October 5, 2024

Annabhagya april amount: ಅನ್ನಭಾಗ್ಯ ಯೋಜನೆ ಏಪ್ರಿಲ್ ತಿಂಗಳ ಅರ್ಥಿಕ ನೆರವು ಬಿಡುಗಡೆ!

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಡಿ ಒಂದಾದ ಅನ್ನಭಾಗ್ಯ(Annabhagya DBT amount) ಯೋಜನೆ ನಾಗರಿಕರಿಗೆ ಹಸಿವು ನೀಗಿಸುವ ಅತೀ ಮುಖ್ಯವಾದ ಯೋಜನೆಯಾಗಿದೆ. ಇದರಲ್ಲಿ ಪಡಿತರ ಚೀಟಿ ಗ್ರಾಹಕರಿಗೆ ಅಕ್ಕಿ ಬದಲಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಲಾಗುತ್ತದೆ. ಏಪ್ರಿಲ್-2024 ತಿಂಗಳ ಅರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ.

ಈ 2024ರ ಎಪ್ರೀಲ್ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನದ ಹಣವನ್ನು (Annabhagya amount) ಪಡಿತರ ಕುಟುಂಬ ಚೀಟಿ ಹೊಂದಿದ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದ್ದು ನಿಮ್ಮ ಖಾತೆಗೆ ಜಮೆ ಆಗಿದೆಯಾ ಎಂದು ತಿಳಿದುಕೊಳ್ಳಲು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!

ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಪಡಿತರ ಚೀಟಿ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ನಿಮ್ಮ ಮನೆಯಲ್ಲೇ ಕುಳಿತು ಕೆಲವೆ ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದಿಯಾ? ಇಲ್ಲವಾ? ಎಂದು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: Electronics repair training- ಉಚಿತ ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Step-1: ಫಲಾನುಭವಿ ಗ್ರಾಹಕರು ಪ್ರಥಮದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> Download DBT karnataka app ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇದಾದ ಬಳಿಕ ಗ್ರಾಹಕರ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.(ವಿಶೇಷ ಸೂಚನೆ: ಮೊದಲ ಬಾರಿಗೆ OTP ಬರದೇ ಇದ್ದ ಪಕ್ಷದಲ್ಲಿ resend otp ಬಟನ್ ಮೇಲೆ ಕ್ಲಿಕ್ ಮಾಡಿ ಪುನಃ ಪ್ರಯತ್ನಿಸಿ)

ಇದನ್ನೂ ಓದಿ: Recruitment of Library Supervisor: ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗೆ ಅರ್ಜಿ

Step-2: ನಂತರ ನಿಮಗೆ ಸದಾ ನೆನಪಿನಲ್ಲಿ ಉಳಿಯುವ ನಾಲ್ಕು ಅಂಕಿಯ ಪಾಸ್ವರ್ಡ(Password)ಅನ್ನು ರಚನೆ ಮಾಡಿಕೊಳ್ಳಬೇಕು. ತದನಂತರ ಫಲಾನುಭವಿಯ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ “ಸಲ್ಲಿಸಿ” ಎಂದು ತೋರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Step-3: ನಾಲ್ಕು ಸಂಖ್ಯೆಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡ ನಂತರ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ಈಗಾಗಲೇ ನೀವು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕಾಣುವ “ಪಾವತಿ ಸ್ಥಿತಿ/Payment Status” ಬಟನ್ ಮೇಲೆ ಕ್ಲಿಕ್ ಮಾಡಿ ನಂತರ “ಅನ್ನಭಾಗ್ಯ ಯೋಜನೆ” ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಏಪ್ರಿಲ್-2024 ತಿಂಗಳ ಅನ್ನಭಾಗ್ಯ ಯೋಜನೆ ಹಣ ಜಮಾ ವಿವರವನ್ನು ಪಡೆಯಬಹುದು. 

ಇದನ್ನೂ ಓದಿ:Free Competitive Exam Coaching: ಉಚಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ:ಮಾನದಂಡಗಳೇನು? ಆಯ್ಕೆ ವಿಧಾನ? ತರಬೇತಿ ಅವಧಿ? ಇತರೆ ಮಾಹಿತಿ

ಇತ್ತೀಚಿನ ಸುದ್ದಿಗಳು

Related Articles