Sunday, October 6, 2024

Annabhagya DBT:ರಾಜ್ಯದ 41.23 ಲಕ್ಷ ಫಲಾನುಭವಿಗಳಿಗೆ 240.ಕೋಟಿ ಅನ್ನಭಾಗ್ಯ ಹಣ ಜಮಾ.ಯಾರಿಗೆ ಬಂದಿದೆ, ಯಾರಿಗೆ ಬಂದಿಲ್ಲ ಪರಿಶೀಲಿಸಿ!!

Annabhagya DBT Status check: ಆತ್ಮೀಯ ನಾಗರಿಕರೇ, ನಿಮ್ಮ ಮನೆಯ ಮುಖ್ಯಸ್ಥರಿಗೆ ಖಾತೆಗೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲಿಗೆ ಪ್ರತಿ ಕೆಜಿಗೆ 34 ರೂ.ನಂತೆ ಒಟ್ಟು ರೂ.170 ಅನ್ನು ಪಡಿತರ ಚೀಟಿಯ ಫಲಾನುಭವಿಗಳ ಖಾತೆಗೆ ಸೆಪ್ಟೆಂಬರ್ ತಿಂಗಳ ಹಣವನ್ನು ವರ್ಗಾಯಿಸಲಾಗಿದೆ.

ರಾಜ್ಯದ ಪಡಿತರ ಚೀಟಿ ಹೊಂದಿದ ಮುಖ್ಯಸ್ಥರಿಗೆ ಆ ಪಡಿತರ ಚೀಟಿಯಲ್ಲಿ ಎಷ್ಟು ಜನ ಸದಸ್ಯರು ಇರುತ್ತಾರೋ ಅದರ ಆಧಾರದ ಮೇಲೆ ಒಟ್ಟು ಎಷ್ಟು ಹಣ DBT ಮಾಡಬೇಕು ಎಂದು ಆಹಾರ ಇಲಾಖೆಯಿಂದ ನಿರ್ಧರಿಸಿ ಈಗಾಗಲೇ ಹಣ ಜಮಾ ಮಾಡಲಾಗಿರುತ್ತೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸೆಪ್ಟೆಂಬರ್ ತಿಂಗಳ ಹೆಚ್ಚುವರಿ ಅಕ್ಕಿಯ ಬದಲಿಗೆ ಈವರೆಗೆ 14 ಜಿಲ್ಲೆಗಳ 41.23 ಲಕ್ಷ ಫಲಾನುಭವಿಗಳಿಗೆ 240 ಕೋಟಿ ರೂ.ಗಳನ್ನು
ನೇರವಾಗಿ ರೇಷನ್ ಕಾರ್ಡ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ ನೇರ ಹಣ ವರ್ಗಾವಣೆಯನ್ನು ಬೆಳಗಾವಿ, ಬೆಂಗಳೂರು ಗ್ರಾಮಾಂತರ ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ದಕ್ಷಿಣ ಕನ್ನಡ, ಮಂಡ್ಯ, ಧಾರವಾಡ, ಕಲಬುರ್ಗಿ, ರಾಯಚೂ ರಾಮನಗರ, ಉತ್ತರ ಕನ್ನಡ, ಶಿವಮೊಗ್ಗ,ರಾಮನಗರ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಫಲಾನುಭವಿಗಳಿಗೆ ಮಾಡಲಾಗಿದೆ.

Annabhagya September month amount: ಮೊಬೈಲ್ ನಲ್ಲೇ ನಿಮಗೆ ಎಷ್ಟು ಹಣ ಜಮಾ ಅಗಿದೆ ಎಂದು ಚೆಕ್ ಮಾಡುವ ವಿಧಾನ:

ಪಡಿತರ ಚೀಟಿ ಹೊಂದಿರುವವರು ನಿಮ್ಮ ಮೊಬೈಲ್ ಮೂಲಕ ಆಹಾರ ಇಲಾಖೆಯ ಅಧಿಕೃತ ವೆಬ್ಬೆಟ್ ಭೇಟಿ ಮಾಡಿ ನಿಮಗೆ ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ತಿಳಿದುಕೊಳ್ಳಬವುದು ಮತು ಇತರೆ ಜಿಲ್ಲೆಯವರು ನಿಮ್ಮ ಹಣ ವರ್ಗಾವಣೆ ಯಾವ ಹಂತದಲ್ಲಿದೆ ಎಂದು ಸಹ ಪರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ರೇಷನ್‌ ಕಾರ್ಡ್‌ನಲ್ಲಿ ನಿಮ್ಮ ಮೊಬೈಲ್ ನಂಬರ್‌ ಅನ್ನು ಬದಲಾಯಿಸುವುದು ಹೇಗೆ?
ಇದನ್ನೂ ಓದಿ: ಪಡಿತರ ಚೀಟಿ ಕಳೆದಿದೆಯೇ ಚಿಂತೆ ಬಿಡಿ ಡೌನ್ ಲೋಡ್ ಮಾಡುವ ಡೈರೆಕ್ಟ ಲಿಂಕ್ :

ಹಂತ -1: Annabhagya DBT Status check ಮಾಡುವ ಲಿಂಕ್ ಆಹಾರ ಇಲಾಖೆಯ ವೆಬ್ಬೆಟ್ ಭೇಟಿ ಮಾಡಬೇಕು. ಇಲ್ಲಿ 3 ಲಿಂಕ್ ಗೋಚರಿಸುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಹಂತ -2: ನಂತರ ಈ ಪುಟದಲ್ಲಿ ಕಾಣುವ “ನೇರ ನಗದು ವರ್ಗಾವಣೆಯ ಸ್ಥಿತಿ(DBT)” ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಹಂತ -3: ಮುಂದೆ select month” ಕಾಲಂ ನಲ್ಲಿ “September” ಎಂದು ಆಯ್ಕೆ ಮಾಡಿಕೊಂಡು ಕೆಳಗಿನ ನಿಗದಿತ ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಅಲ್ಲೇ ಕೆಳಗೆ ತೋರಿಸುವ ಕ್ಯಾಪ್ಟಾ ಅನ್ನು ನಮೂದಿಸಿ “GO” ಬಟನ್ ಮೇಲೆ ಒತ್ತಿ .

ಹಂತ -4: ನಂತರ ಈ ಯೋಜನೆಯಡಿ ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಹಣ ಜಮಾ ವಿವರ ಗೋಚರಿಸುತ್ತದೆ ಈ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ? ನಿಮಗೆ ಎಷ್ಟು ಹಣ ಜಮಾ ಅಗುತ್ತದೆ ಎಂದು ತೋರಿಸುತ್ತದೆ. ಮತ್ತು ಈಗಾಗಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಅಗಿದ್ದರೆ “Payment Details” ಎಂದು ಕೆಳಗಡೆ ಗೋಚರಿಸುತ್ತದೆ, ಇಲ್ಲಿ ಯಾವ ದಿನ ಹಣ ವರ್ಗಾವಣೆ ಅಗಿದೆ, ಖಾತೆದಾರರ ಹೆಸರು ಮತ್ತು ಬ್ಯಾಂಕ್ ವಿವರ ತೋರಿಸುತ್ತದೆ.

https://ahara.kar.nic.in/ಇಲ್ಲಿ ಒತ್ತುವ ಮೂಲಕ ಚೆಕ್ ಮಾಡಿ.

ವಿಷೇಶ ಸೂಚನೆ: ಈ ವೆಬ್ಟ್ ಬೆಳಗ್ಗೆ 8-00 ಗಂಟೆಯ ನಂತರ ಮತ್ತು ರಾತ್ರಿ 8-00 ಗಂಟೆಯ ನಡುವೆ ಮಾತ್ರ ಒಪನ್ ಅಗುತ್ತದೆ ಇದರ ಮಧ್ಯದಲ್ಲೇ ನೀವು ನಿಮ್ಮ ಹಣ ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬೇಕು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಹೊಸ ಸಿದ್ದತೆಗೆ ಪ್ರಯತ್ನ:
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ 75 ವರ್ಷ ವಯಸ್ಸಿನ ಹಿರಿಯರಿಗೆ ಅವರ ಮನೆ ಬಾಗಿಲಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ತಲುಪಿಸಲು ಆಹಾರ ಇಲಾಖೆ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಈ ಯೋಜನೆಯಡಿ ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಒಂದು ಉದ್ದೇಶದಿಂದ ಆಹಾರ ಇಲಾಖೆ ಈ ದಿಟ್ಟ ನಿರ್ಧಾರವನ್ನು ಪ್ರಯತ್ನ ಮಾಡುತ್ತಿದೆ. ಹಿರಿಯ ನಾಗರಿಕರೂ ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಬದಲು ಮನೆ ಬಾಗಿಲಲ್ಲೇ ಪಡಿತರ ನೀಡಲು ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಆಹಾರ ಇಲಾಖೆ ಜಾರಿಗೊಳಿಸಲು ಮುಂದಾಗಿದೆ.

ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಸೇರಿ ಪಡಿತರ ಪಡೆದುಕೊಳ್ಳಬೇಕಿದೆ. ಹಿರಿಯರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಲು ತೊಂದರೆ ಅನುಭವಿಸುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಲಾಗಿದೆ.

ಪಡಿತರ ಚೀಟಿಯಲ್ಲಿ ನಮೂದಿಸಿದಂತೆ 75 ವರ್ಷ ಒಳಗಿನ ಸದಸ್ಯರು ಇಲ್ಲದ, 75 ವರ್ಷ ದಾಟಿದ ವೃದ್ಧರು, ದಂಪತಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಸಲಾಗುವುದು. ಪಡಿತರ ಚೀಟಿಯಲ್ಲಿ 75 ವರ್ಷದೊಳಗಿನ ಸದಸ್ಯರ ಹೆಸರು ನಮೂದಾಗಿದ್ದರೂ ಅವರು ಕೆಲಸ ಕಾರ್ಯಗಳ ನಿಮಿತ್ತ ವಲಸೆ ಹೋಗಿದ್ದಲ್ಲಿ ಅಂತಹ ಕುಟುಂಬಗಳ ವೃದ್ಧರು ಮನವಿ ಮಾಡಿದಲ್ಲಿ ಅವರ ಮನೆ ಬಾಗಿಲಿಗೂ ಪಡಿತರ ತಲುಪಿಸಲಾಗುವುದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ತಿಳಿಸಿರುತ್ತದೆ.

ಇತ್ತೀಚಿನ ಸುದ್ದಿಗಳು

Related Articles