Friday, September 20, 2024

Anna bhagya Yojana- ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಗಮನಕ್ಕೆ ಹಣ ಪಾವತಿ ಮತ್ತು ಅಕ್ಕಿ ವಿತರಣೆ ಕುರಿತು ಮಹತ್ವದ ಮಾಹಿತಿ .

Anna bhagya Yojana Update: ವಿಧಾನಸೌಧದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ ಹೆಚ್ ಮುನಿಯಪ್ಪನವರು ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳ ಹಣ ಪಾವತಿ ಮತ್ತು ಮುಂದಿನ ದಿನಗಳಲ್ಲಿ ಅಕ್ಕಿ ವಿತರಣೆ ಕುರಿತು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಕಾಂಗ್ರೆಸ್ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಗೆ ಅಕ್ಕಿ ಸಿಗದೇ ಇರುವ ಕಾರಣದಿಂದ ಈ ಹಿಂದಿನ ತಿಂಗಳಿಂದ 5 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಬದಲು ಪ್ರತಿ ಸದಸ್ಯರಿಗೆ 170 ರೂ ರಂತೆ ಅರ್ಥಿಕ ಸಹಾಯಧನವನ್ನು ರೇಷನ್ ಕಾರ್ಡ ಮುಖ್ಯಸ್ಥರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿತ್ತು, ಇದೇ ಮಾದರಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಕಾರ್ಯವನ್ನು 25 ಆಗಸ್ಟ್ 2023 ರಿಂದ ಪ್ರಾರಂಭಿಸಲಾಗಿದೆ. ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ತಿಳಿಸಿದ್ದಾರೆ.

ರಾಜ್ಯ ಸರಕಾರವು ಅಕ್ಕಿ ಅಲಭ್ಯತೆ ಕಾರಣ ದಿಂದಾಗಿ ಪಡಿತರ ಕಾರ್ಡ ಹೊಂದಿರುವವರಿಗೆ ಹಣ ನೀಡುವ ತೀರ್ಮಾನದಂತೆ ಎಲ್ಲ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಒಟ್ಟು 1.28 ಕೋಟಿ ಕಾರ್ಡ್ ದಾರರಲ್ಲಿ 28 ಲಕ್ಷ ಕಾರ್ಡ್‌ಗಳ ಬ್ಯಾಂಕ್ ಖಾತೆ ವಿವರಗಳು ಕೊನೆಯ ತಿಂಗಳು ಇಲಾಖೆಯಲ್ಲಿ ಲಭ್ಯವಿರಲ್ಲಿಲ್ಲ. ಸಧ್ಯ ಇವುಗಳಲ್ಲಿ 7 ಲಕ್ಷ ಕಾರ್ಡ್‌ಗಳ ಬ್ಯಾಂಕ್ ಖಾತೆ ವಿವರವನ್ನು ಸಂಗ್ರಹಿಸಲಾಗಿದ್ದು, 1.07 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: ” CM – ಮುಖ್ಯಮಂತ್ರಿ ಪರಿಹಾರ ನಿಧಿ’ಯಿಂದ ‘ಆರ್ಥಿಕ ನೆರವು’ ಪಡೆಯಬೇಕೆ?

ಇದನ್ನೂ ಓದಿ: ಗೃಹಲಕ್ಮೀ ಮತ್ತು ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಆಹಾರ ಇಲಾಖೆ ಅತೀ ಅವಶ್ಯಕ ಮಾಹಿತಿ ಪ್ರಕಟಣೆ:
ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯ ಗೊಂದಲ ಇದೆಯೇ? ಅರ್ಹರು ಯಾರು? ಯಾವಾಗ ಅರ್ಜಿ ಸಲ್ಲಿಕೆ? ಸರ್ಕಾರದ ನಿಯಮಗಳೇನು ? ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ..
ಇದನ್ನೂ ಓದಿ: ಇಲಾಖೆಯಿಂದ ಅನರ್ಹ ಮತ್ತು ಅರ್ಹ ಪಡಿತರ ಚೀಟಿ ಪಟ್ಟಿ!!

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಖರೀದಿ ಪ್ರಯತ್ನ ಯಶಸ್ವಿ:

ರಾಜ್ಯದ ಪಡಿತರ ಚೀಟಿ ಹೊಂದಿರುವರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ಒಬ್ಬರಿಗೆ ತಲಾ 10 ಕಿ. ಲೋ. ಆಹಾರಧಾನ್ಯ ವಿತರಿಸಲು ಬೇಕಾಗುವ ಅಕ್ಕಿಯನ್ನು ಖರೀದಿಸುವ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ. ನೇರಯ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಅಕ್ಕಿ ನೀಡಲು ಒಪ್ಪಿಗೆ ಸೂಚಿಸಿದ್ದು,ಇನ್ನೂ ಖರೀದಿ ಮತ್ತು ದರ ಕುರಿತಂತೆ ಮಾತುಕತೆ ಸರ್ಕಾರ ನಡೆಸುತ್ತಿದೆ” ಎಂದು ಸಚಿವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ತಿಳಿಸಿದ್ದಾರೆ.

ಸಿರಿಧಾನ್ಯಗಳ ವಿರತಣೆಗೆ ಒತ್ತು:


ಪಡಿತರ ವಿತರಣೆಯಲ್ಲಿ ಅಕ್ಕಿ ಜೊತೆಗೆ, ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಅಕ್ಕಿ ಮತ್ತು ಉತ್ತರ ಭಾಗದ ಜಿಲ್ಲೆಗಳಲ್ಲಿ ಜೋಳ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದ್ದು, ಈ ಧಾನ್ಯಗಳ ಸದ್ಬಳಕೆ ಆಗುತ್ತಿದೆಯೇ? ಹೆಚ್ಚಿನ ಬೇಡಿಕೆ ಇದೆಯೇ ಎಂಬ ಕುರಿತು ಪರಿಶೀಲಿಸಿ ವರದಿ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮಾಹಿತಿ ಬಂದ ಬಳಿಕ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಜೋಳ ಖರೀದಿಗೆ ಕ್ರಮ ವಹಿಸಲಾಗುವುದು,” ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ ವಿತರಣೆ:

ರಾಜ್ಯದಲ್ಲಿ ಸದ್ಯ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಸದ್ಯಕ್ಕೆ ಅನುಮತಿ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದು, ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, “ಪ್ರಸ್ತುತ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ 1.50 ಲಕ್ಷ ಅರ್ಜಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 14 ಲಕ್ಷ ಎಪಿಎಲ್ ಕಾರ್ಡ್‌ಗಳಿದ್ದು, ಬಹುತೇಕ ಬಳಕೆಯಾಗುತ್ತಿಲ್ಲ. ಹೀಗಾಗಿ, ಹೊಸ ಕಾರ್ಡ್‌ಗಳನ್ನು ನೀಡುವ ಉದ್ದೇಶ ಸದ್ಯಕ್ಕಿಲ್ಲ” ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳು

Related Articles