ನಮಸ್ಕಾರ ರೈತರೇ, ಕೃಷಿಯ ಉಪಕಸುಬುಗಳಾದ ಹೈನುಗಾರಿಕೆ, ಕುಕ್ಕಟ ಸಾಕಾಣಿಕೆ, ಮೀನು ಸಾಕಾಣಿಕೆಗಳ ವಿನೂತನ ತಂತ್ರಜ್ಞಾನಗಳ ಪರಿಚಯ ಮಾಡಲು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರನಲ್ಲಿ ಜಾನುವಾರು, ಕುಕ್ಕಟ ಮತ್ತು ಮತ್ಸ್ಯಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿಯ ಪಶು ಮತ್ತು ಮತ್ಸ್ಯಮೇಳದ ಘೋಷ ವಾಕ್ಯವು ಗ್ರಾಮೀಣ ಸಮೃದ್ಧಿ ಮತ್ತು ಜೀವನೋಪಾಯ ಭದ್ರತೆಗಾಗಿ ಪಶುಪಾಲನೆ ಮತ್ತು ಮೀನುಗಾರಿಕೆ ಎಂದು ಇರಲಿದೆ.
ಪಶು ಮತ್ತು ಮತ್ಸ್ಯಮೇಳವನ್ನು ಇದೇ ಜನವರಿ 17 ರಿಂದ 19 ರವರೆಗೆ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ನಂದಿನಗರ, ಬೀದರ (ಕಮಠಾಣಾ ಹತ್ತಿರ) ಆಯೋಜನೆ ಮಾಡಲಾಗಿದೆ.
ಪಶು ಮತ್ತು ಮತ್ಸ್ಯಮೇಳದಲ್ಲಿ ವಿವಿಧ ಕೃಷಿ ಮತ್ತು ಪಶು ಸಾಕಾಣಿಕೆ ಹಾಗೂ ಮೀನುಗಾರಿಕೆಗೆ ಸಂಬಂಧ ಪಟ್ಟ ವಸ್ತು ಪ್ರದರ್ಶನದ ಮಳಿಗೆಗಳು ಇರಲಿವೆ. ಹಾಗೂ ಹೈನುಗಾರಿಕೆಗೆ ಸಂಬಂಧ ಪಟ್ಟ ತಂತ್ರಜ್ಞಾನ ಮಳಿಗೆಗಳು ಕೂಡ ಇರಲಿವೆ. ಪಶು ಮೇಳದಲ್ಲಿ ಹೈನುಗಾರಿಕೆ ಪ್ರಗತಿಪರ ರೈತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಹ ಮಾಡಲಿದ್ದಾರೆ.
ANIMAL MELA-ಪಶು ಮೇಳದ ವಿಶೇಷತೆಗಳು ಹೀಗಿದೆ.
1)ಜಾನುವಾರು ಮತ್ತು ಮೀನುಗಾರಿಕೆ ತಳಿಗಳ ಪ್ರದರ್ಶನ
2)ವೈಜ್ಞಾನಿಕ ಜಾನುವಾರು ಮತ್ತು ಮೀನು ಸಾಕಾಣಿಕೆ ಪದ್ಧತಿಗಳು
3)ಸಣ್ಣ ಮತ್ತು ಮುದ್ದು ಪ್ರಾಣಿಗಳ ಪ್ರದರ್ಶನ
4)ಜಾನುವಾರು ಮತ್ತು ಮೀನು ಸ್ಪರ್ಧೆಗಳು ಹಾಗೂ ಪ್ರಶಸ್ತಿಗಳು
5)ವೈಜ್ಞಾನಿಕ ಮೀನು ಕೃಷಿ
6)ಜಲಚರಗಳ ಪ್ರದರ್ಶನಗಳು
7)ಅಲಂಕಾರಿಕ ಮೀನು ಪ್ರದರ್ಶನ
8)ಮೀನು ಸಾಕಾಣಿಕೆ ಮತ್ತು ಆಹಾರದ ತಂತ್ರಜ್ಞಾನಗಳು
9)ಸಮಗ್ರ ಕೃಷಿ ಪದ್ಧತಿಗಳು
10)ಸಾವಯವ ಕೃಷಿ ಮತ್ತು ಜೈವಿಕ ಗೊಬ್ಬರಗಳು
11)ಸುಧಾರಿತ ಮೇವಿನ ಬೀಜಗಳು/ ಕಾಂಡದ ತುಂಡುಗಳು
12)ಜಾನುವಾರು ಆಹಾರ ಮತ್ತು ಖನಿಜ ಮಿಶ್ರಣ
13)ರೈತ-ವಿಜ್ಞಾನಿಗಳ ವಿಚಾರ ವಿನಿಮಯ
14)ಪ್ರಗತಿಪರ ರೈತರಿಗೆ ಸನ್ಮಾನ
15)ಮೇವು ಪ್ರದರ್ಶನ/ ಪ್ರಾತ್ಯಕ್ಷಿಕೆಗಳು
16)ರೋಗನಿರ್ಣಯ, ಔಷಧಿಗಳು ಮತ್ತು ಲಸಿಕೆಗಳು
17)ಸರಕಾರದ ಯೋಜನೆಗಳು ಮತ್ತು ಜಾಗೃತಿ
18)ಹವಮಾನ ಸ್ಥಿತಿಸ್ಥಾಪಕ ಮೇವು
19)ಬರ ಸಹಿಷ್ಣುತೆ/ ನಿರೋಧಕ ಮೇವು
20)ಮೇವಿನ ಸಂಸ್ಕರಣೆ/ ಸಂರಕ್ಷಣೆ ತಂತ್ರಜ್ಞಾನಗಳು
ಮಳಿಗೆಗಳನ್ನು ಕಾಯ್ದುರಿಸಲು/ಜಾಹೀರಾತುಗಾಗಿ ಹಾಗೂ ಇತರೆ ಮಾಹಿತಿಗಾಗಿ ಸಂಪರ್ಕಿಸಿ: 9449661149/9663912777/9606038309