ಮೊಟ್ಟೆ ಹಾಕುವ ಮೀನುಗಳು
ಮರಿಹಾಕುವ ಮೀನುಗಳು
ಜೀವಂತ ಮರಿಹಾಕುವ ಮೀನುಗಳು ವರ್ಷವಿಡಿ ಸಂತಾನೋತ್ಪತ್ತಿ ಮಾಡುತ್ತವೆ. ಅವುಗಳಿಗೆ ನಿಗದಿತ ಕಾಲ ಇಲ್ಲ. ಮುಖ್ಯವಾದ ಮೀನುಗಳು: ಗಫ್ಟಿ , ಬ್ಲಾಕ್ ಮೋಲಿ, ಸೈಲ್ಪಿನ್ ಮೋಲಿ, ಸ್ವಾರ್ಡಟೇಲ್ ಪ್ಲಾಟಿ.
ಮೊಟ್ಟೆ ಇಡುವ ಮೀನುಗಳು
ಮುಖ್ಯವಾದ ತಳಿಗಳು:
ಗೋಲ್ಡ್ ಫಿಶ್( ಬಂಗಾರದ ಮೀನು), ರೋಸಿ ಬಾರ್ಬ್ , ರಾಸ್‌ಬೋರ,ಡೆನಿಯೋ, ಎಂಜಲ್,ಫೈಟರ್,ಗೋರಾಮಿ ಮುಂದಾದವು ಸಾಮಾನ್ಯವಾಗಿ ಈ ತಳಿಗಳು 6 ತಿಂಗಳೊಳಗೆ ಪ್ರಭುದ್ಧಾವಸ್ಥೆಗೆ ಬರುತ್ತದೆ. ಸುಮಾರು 6 ಅಥವಾ 7 ವರ್ಷಗಳವರೆಗೆ ಮೊಟ್ಟೆಗಳನ್ನು ಇಡುವ ಶಕ್ತಿ ಇರುತ್ತದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಮತ್ತು ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಮೀನುಗಳಿಗೆ ಜಾಸ್ತಿ ಮೊಟ್ಟೆ ಇಡುವ ಶಕ್ತಿ ಇದೆ.
ಮೀನು ಸಾಕಣೆ ಸ್ಥಳ
ಮನೆಯ ಹತ್ತಿರವಿರುವ ಅಂಗಳದಲ್ಲಿ ಅಥವಾ ಹಿತ್ತಲುಗಳಲ್ಲಿ ಸಿಮೆಂಟಿನ ತೊಟ್ಟಿ (2-3)ಅಡಿ ಅಗಲ,2-3 ಅಡಿ ಎತ್ತರ) ಗಳನ್ನಿಟ್ಟುಕೊಂಡು ಸಾಕಣೆ ಮಾಡಬಹುದು.
ತಮ್ಮ ಜಮೀನಿನಲ್ಲಿರುವ ಕೊಳವೆಬಾವಿ ನೀರು ಸಂಗ್ರಹಣಾ ತೊಟ್ಟಿಗಳನ್ನು ಬಂಡವಾಳಕ್ಕನುಗುಣವಾಗಿ ದೊಡ್ಡ ಅಥವಾ ಚಿಕ್ಕ ಸಿಮೆಂಟ್ ಇಲ್ಲವೇ ಮಣ್ಣಿನ ತೊಟ್ಟಿಗಳನ್ನು ಕಟ್ಟಿಕೊಂಡು ಮೀನು ಸಾಕಣೆ ಮಾಡಬಹುದು.
ಹೆಚ್ಚು ಹಣವನ್ನು ಬಂಡವಾಳವಾಗಿ ಹಾಕುವ ರೈತರಾದರೆ ವಾಣಿಜ್ಯವಾಗಿ ಮಾಡಬಹುದು.
ಮೀನು ಸಾಕುವ ತೊಟ್ಟಿಗಳ ತಯಾರಿ
ಮೀನು ಸಾಕುವ ತೊಟ್ಟಿಗಳ ನೀರಿಗೆ ಬಿಸಿಲು ನೇರವಾಗಿ ಬೀಳದಂತೆ ತೆಂಗಿನಗರಿ ಇಲ್ಲವೇ ನೆರಳು ಬಲೆಯ ಚಪ್ಪರದಿಂದ ರಕ್ಷಣೆ ಮಾಡಬೇಕು.
ಮೀನುಮರಿಗಳನ್ನು ಹಕ್ಕಿ ಪಕ್ಷಿಗಳಿಂದ ಜೋಪಾನ ಮಾಡಲು ಬಲೆ ಉಪಯೋಗಿಸಬೇಕು.
ಸಿಮೆಂಟಿನ ತೊಟ್ಟಿಯನ್ನು ಬಳಸಿದಾಗ ತೊಟ್ಟಿಯ ಒಳಭಾಗವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಶೇ.25-40 ರಷ್ಟು ನೀರನ್ನು( ಕುಡಿಯಲು ಯೋಗ್ಯವಾದ) ತುಂಬಿ 2-3 ದಿವಸಗಳ ಕಾಲ ಇಡಬೇಕು.
ಆಹಾರ
ನೈಸರ್ಗಿಕ ಆಹಾರ: ಇನ್ಫಿಜೋರಿಯ, ರೋಟಿಫರ್, ಕ್ಲಾಡೋಸಿರನ್,ಎರೆಹುಳು, ಸೊಳ್ಳೆ ಮರಿ, ಗೆದ್ದಲು ಮೊಟ್ಟೆ ಇತ್ಯಾದಿ.