Wednesday, February 5, 2025

Agriculture pvc pipe-ಕೃಷಿ ಇಲಾಖೆ ವತಿಯಿಂದ ಸಹಾಯಧನದಲ್ಲಿ PVC  ಪೈಪ್ ವಿತರಣೆಗೆ ಅರ್ಜಿ ಆಹ್ವಾನ!

ನಮಸ್ಕಾರ ರೈತರೇ, ಹಲವು ಜಿಲ್ಲೆಯಲ್ಲಿ ಕೃಷಿ ಇಲಾಖೆಯಲ್ಲಿ ನೀರಾವರಿ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50% ಸಹಾಯಧನದಲ್ಲಿ PVC ಪೈಪ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಸೂಕ್ಮ ನೀರಾವರಿ ಯೋಜನೆಯಡಿ ಶೇ.50% ಸಹಾಯಧನದಲ್ಲಿ PVC ಪೈಪ್ ಪಡೆಯಲು ಹಲವು ಜಿಲ್ಲೆಗಳಲ್ಲಿ ರೈತರಿಂದ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಲು ಏನು ಮಾಡಬೇಕು ಮತ್ತು ಯಾವೆಲ್ಲ ದಾಖಲೆಗಳನ್ನು ಕೊಡಬೇಕು ಎಂದು ಈ ಲೇಖನದಲ್ಲಿ ನೀಡಲಾಗಿದೆ.

ಹೌದು ರೈತರೇ, ಕೃಷಿ ಇಲಾಖೆವತಿಯಿಂದ ರಾಜ್ಯದ ಎಲ್ಲಾ ಕೃಷಿ ಇಲಾಖೆಗಳಲ್ಲಿ ರೈತರಿಗೆ ನೀರಾವರಿ ಯೋಜನೆಯಡಿ ಶೇ.50% ಸಹಾಯಧನದಲ್ಲಿ 2 ಇಂಚಿನ್ ಹಾಗೂ 2.5 , 3.0 ಇಂಚಿನ್ 20 ಪೀಟ್ ಉದ್ದದ PVC  ಪೈಪ್ ವಿತರಣೆ ಮಾಡಲಾಗುತ್ತಿದೆ. ಆಸಕ್ತ ರೈತರು ಈ ಸೌಲಭ್ಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು.

ಹಲವು ಜಿಲ್ಲೆಗಳಲ್ಲಿ ಮುಂಚಿತವಾಗಿ ವಿವಿಧ ಸೌಲಭ್ಯಗಳಿಗೆ ಅರ್ಜಿಗಳನ್ನು ಮುಂಚಿತವಾಗಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ. ಅವರಿಗೆ ಸೌಲಭ್ಯ ಬಂದರೆ ಮೊದಲ ಆದ್ಯತೆ ಇರುತ್ತದೆ, ಹಾಗಾಗಿ ಅದನ್ನು ಆಯಾ ಜಿಲ್ಲೆಯ ಇಲಾಖಾ ಅಧಿಕಾರಿಗಳನ್ನು ವಿಚಾರಿಸಿ ಮಾಹಿತಿ ತಿಳಿದುಕೊಳ್ಳಿ.

ಕರ್ನಾಟಕ ರಾಜ್ಯವು ಕೃಷಿ ಪ್ರಧಾನವಾದ ರಾಜ್ಯವಾದರಿಂದ ಬಹುತೇಕ ಜಿಲ್ಲೆಗಳು ಕಡಿಮೆ ಮಳೆ ಪಡೆಯುದರಿಂದ ಅಲ್ಲಿಯ ಕಡಿಮೆ ನೀರನ್ನು ಒಂದು ವ್ಯವಸ್ಥಿತವಾಗಿ ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಲು ರೈತರಿಗೆ ಸಹಾಯವಾಗಲು ಕೃಷಿ ಇಲಾಖೆಯು ಶೇ.90% ಸಹಾಯಧನದಲ್ಲಿ 30 ಪೈಪು ಮತ್ತು 5 ಸ್ಪಿಂಕ್ಲರ್ ಜೆಟ್ ವಿತರಣೆ ಮಾಡಲಾಗುತ್ತಿದೆ. ಅದರ ಜೊತೆಗೆ ಹಲವು ಜಿಲ್ಲೆಗಳಲ್ಲಿ PVC ಪೈಪ್ ಸಹ ವಿತರಣೆ ಮಾಡಲಾಗುತ್ತಿದೆ.

PVC  ಪೈಪ್ ಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಕೃಷಿ ಇಲಾಖೆಯ PVC ಪೈಪ್ ಪಡೆಯಲು ನಿಮ್ಮ ಜಿಲ್ಲೆಗಳಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹೋಬಳಿ ಮಟ್ಟದಲ್ಲಿರುವ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ) ಕಛೇರಿಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಇದಕ್ಕೆ ಯಾರು ಎಲ್ಲಾ ಅರ್ಜಿ ಸಲ್ಲಿಸಬಹುದು.

1)1ಎಕರೆ ಮೇಲ್ಪಟ್ಟು ಜಮೀನು ಇರಬೇಕು(ಇದು ಸ್ಥಳಿಯ ವಾತಾವರಣದ ಮೇಲೆ ವ್ಯತ್ಯಾಸ ಇರುತ್ತದೆ)

2)ಈ ಹಿಂದೆ ಈ ಸೌಲಭ್ಯ ಪಡೆದುಕೊಂಡಿರಬಾರದು.

3)ಒಮ್ಮೆ ಪಡೆದುಕೊಂಡರೆ 5 ವರ್ಷಗಳ ವರೆಗೆ ಮರಳಿ ಪಡೆಯಲು ಬರುವುದಿಲ್ಲ

4)ಸಾಮಾನ್ಯ ವರ್ಗದವರು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

1)ಕೃಷಿ ಇಲಾಖೆ ಅರ್ಜಿ ನಮೂನೆ

2)ಪಹಣಿ/ ಆರ್ ಟಿ ಸಿ

3)ಆಧಾರ್ ಪ್ರತಿ.

4)ಬ್ಯಾಂಕ್ ಪಾಸಬುಕ್ ಪ್ರತಿ

5)ರೇಷನ್ ಕಾರ್ಡ್ ಪ್ರತಿ

6)1 ಫೋಟೋ

7)sc/st ಆಗಿದ್ದಲ್ಲಿ ಜಾತಿ ಪ್ರಮಾಣ ಪತ್ರ

8)rtc/ ಪಹಣಿ ಜಂಟಿ ಇದ್ದಲ್ಲಿ ಉಳಿದವರ ಒಪ್ಪಿಗೆ ಪತ್ರ

9) ಇಲಾಖೆ ಅಧಿಕಾರಿಗಳು ತಿಳಿಸುವ ಇತರೆ ದಾಖಲೆಗಳು

ಸೂಚನೆ: ಈ ಸೌಲಭ್ಯವು ಎಲ್ಲಾ ಸಮಯದಲ್ಲಿ ವಿತರಣೆ ಇರುವುದಿಲ್ಲ ಅದರ ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಇಲಾಖೆಗೆ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಿ.

ಇತ್ತೀಚಿನ ಸುದ್ದಿಗಳು

Related Articles