Declaration of drought:
ಬರಗಾಲ ಘೋಷಣೆಗೆ ಸರ್ಕಾರ ಚಿಂತನೆ: ಕೃಷಿ ಸಚಿವ Shri .N.ಚೆಲುವರಾಯ ಸ್ವಾಮಿ:
ಬರಗಾಲ ಘೋಷಣೆ ಶೇ. ಏಷ್ಟು ಮಳೆ ಕೊರೆತೆ ಇರಬೇಕು?
ಏಷ್ಟು ಮಳೆ ಕೊರತೆ ಇದ್ದರೆ ಬರ ಘೋಷಣೆ ಮಾಡಲಾಗುತ್ತದೆ. ಸರ್ಕಾರದ ಲಿಕ್ಕಚಾರವೇನು?
ಹೌದು, ಆತ್ಮೀಯ ರೈತ ಬಾಂದವರೇ ಈ ವರ್ಷ ವಾಡಿಕೆಗಿಂತ ಮಳೆ ಕಡಿಮೆ ಬಂದಿರುವ ಕಾರಣಕ್ಕಾಗಿ ಸರ್ಕಾರ ಬರ ಘೋಷಣೆಗೆ ಮೂಂದಾಗಿದೆ. ಹಾಗಿದ್ದರೆ ಬರಗಾಲ ಘೋಷಣೆಗೆ ಹೇಗೆ ಪರಿಗಣಿಸಲಾಗುತ್ತದೆ?
ಹವಾಮಾನದ ಬರಗಾಲವನ್ನು ನಿರೀಕ್ಷಿತ ಅಥವಾ ಸಾಮಾನ್ಯ ಮಟ್ಟದಿಂದ ದೀರ್ಘಾವಧಿಯ ಅವಧಿಯಲ್ಲಿ ಮಳೆಯ ಕೊರತೆ ಎಂದು ವ್ಯಾಖ್ಯಾನಿಸಲಾಗಿದೆ (ಅಂದರೆ ಸಾಮಾನ್ಯ ಮಟ್ಟಗಳು ದೀರ್ಘಾವಧಿಯ ಸರಾಸರಿಯಿಂದ 10% ವರೆಗೆ ವಿಚಲನವನ್ನು ಹೊಂದುತ್ತವೆ). ಹವಾಮಾನದ ಬರವು ಸಾಮಾನ್ಯವಾಗಿ ಇತರ ರೀತಿಯ ಬರಗಾಲಕ್ಕೆ ಮುಂಚಿತವಾಗಿರುತ್ತದೆ ಮತ್ತು ಒಂದು ಪ್ರದೇಶದಲ್ಲಿ ಪಡೆದ ಮಳೆಯು ಮತ್ತು ದೀರ್ಘಾವಧಿಯ ಸರಾಸರಿ ಮೌಲ್ಯವು 25% ಕ್ಕಿಂತ ಕಡಿಮೆಯಿರುವಾಗ ಬರಗಾಲಕ್ಕೆ ಒಳಪಡುವುದಿಲ್ಲ ಎಂದು ಹೇಳಲಾಗುತ್ತದೆ.
ಇನಷ್ಟೂ ಕೃಷಿ ಸಂಬಂಧಿಸಿದ ಮಾಹಿತಿಗಳು:
ಇದನ್ನೂ ಓದಿ: Solar Energy Scheme:ಸೌರ ಶಕ್ತಿ ಆಧಾರಿತ 3 HPಯಿಂದ 7.5 HP ಕೃಷಿ ಪಂಪ್‌ಸೆಟ್ ಗಳಿಗೆ ಸರ್ಕಾರದಿಂದ ಶೇ. 80 Subsidy.
ಇದನ್ನೂ ಓದಿ: ಕೃಷಿಯಲ್ಲಿ ಹೊಸ ಉದ್ಯಮ ಪ್ರಾರಂಭಿಸಲು 50 ಲಕ್ಷ ಸಾಲ ಸೌಲಭ್ಯ
ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ 1,42,5000 ಪ್ರೋತ್ಸಾಹ ಧನ !!
ಶೇ.26-50ರಷ್ಟು ಮಳೆ ಕೊರತೆಯಾದರೆ ಮಧ್ಯಮ ಬರ ಮತ್ತು ಸಾಮಾನ್ಯಕ್ಕಿಂತ ಶೇ.50ರಷ್ಟು ಕೊರತೆ ಹೆಚ್ಚಾದರೆ ತೀವ್ರ ಬರ ಎಂದು ಹೇಳಲಾಗುತ್ತದೆ.
ಜಲವಿಜ್ಞಾನದ ಬರ ಮೇಲ್ಮೈ ಮತ್ತು ಉಪ-ಮೇಲ್ಮೈ ನೀರಿನ ಸರಬರಾಜಿನಲ್ಲಿನ ಕೊರತೆಗಳು ಸಾಮಾನ್ಯ ಮತ್ತು ನಿರ್ದಿಷ್ಟ ಅಗತ್ಯತೆಗಳ ನೀರಿನ ಕೊರತೆಗೆ ಕಾರಣವೆಂದು ವ್ಯಾಖ್ಯಾನಿಸಲಾಗಿದೆ. ಅಂತಹ ಪರಿಸ್ಥಿತಿಗಳು ಸಂಭವಿಸುತ್ತವೆ, ಸರಾಸರಿ (ಅಂದರೆ ಸರಾಸರಿಗಿಂತ ಹೆಚ್ಚಿನ) ಮಳೆಯ ಸಮಯದಲ್ಲಿಯೂ ಸಹ ನೀರಿನ ಹೆಚ್ಚಿದ ಬಳಕೆಯು ಕಡಿಮೆಯಾಗಿದೆ.
ಕೃಷಿ ಬರಸಾಮಾನ್ಯವಾಗಿ ಹವಾಮಾನ ಮತ್ತು ಜಲವಿಜ್ಞಾನದ ಬರಗಳಿಂದ ಉಂಟಾಗುವ ಮತ್ತು ಬೆಳೆಯುವ ಅವಧಿಯಲ್ಲಿ ಮಣ್ಣಿನ ತೇವಾಂಶ ಮತ್ತು ಮಳೆಯು ಅಸಮರ್ಪಕವಾಗಿ ತೀವ್ರ ಮತ್ತು ಶುಷ್ಕತೆ ಉಂಟಾಗುತ್ತದೆ. ಸಸ್ಯದ ನೀರಿನ ಬೇಡಿಕೆಯು ಚಾಲ್ತಿಯಲ್ಲಿರುವ ಹವಾಮಾನ ಪರಿಸ್ಥಿತಿಗಳು, ನಿರ್ದಿಷ್ಟ ಸಸ್ಯದ ಜೈವಿಕ ಗುಣಲಕ್ಷಣಗಳು, ಅದರ ಬೆಳವಣಿಗೆಯ ಹಂತ ಮತ್ತು ಮಣ್ಣಿನ ಭೌತಿಕ ಮತ್ತು ಜೈವಿಕ ಗುಣಲಕ್ಷಣಗಳನ್ನು ಹೊಂದಿದೆ. ಕೃಷಿ ಬರವು ಬೆಳೆಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ, ಪ್ರಬುದ್ಧತೆಯ ಬೆಳೆಗಳು ಬದಲಾಗುತ್ತದೆ.
2009 ರ ಕೈಪಿಡಿಯು ಬರಗಾಲದ ಆರಂಭಿಕ ನಿರ್ಣಯದಲ್ಲಿ ಬಳಸಬಹುದಾದ ವಿವಿಧ ಸೂಚ್ಯಂಕಗಳು:
ಶುಷ್ಕತೆ ಅಸಂಗತತೆ ಸೂಚ್ಯಂಕ (AAI) / ಮಳೆಯ ವಿಚಲನ ಸೂಚ್ಯಂಕ
ಪ್ರಮಾಣಿತ ಮಳೆ ಸೂಚ್ಯಂಕ (SPI)
ಪಾಮರ್ ತೀವ್ರತೆಯ ಸೂಚ್ಯಂಕ (PDSI)
ಬೆಳೆ ತೇವಾಂಶ ಸೂಚ್ಯಂಕ (CMI)
ಮೇಲ್ಮೈ ನೀರು ಸರಬರಾಜು ಸೂಚ್ಯಂಕ (SWSI)
ಸಾಧಾರಣಗೊಳಿಸಿದ ವ್ಯತ್ಯಾಸ ಸಸ್ಯವರ್ಗ ಸೂಚ್ಯಂಕ (NDVI)
ತೇವಾಂಶ ಲಭ್ಯತೆ ಸೂಚ್ಯಂಕ (MAI)
ಪರಿಣಾಮಕಾರಿ ಬರ ಸೂಚ್ಯಂಕ (EDI)
ಈ ಮೇಲೆ ಕಾಣಿಸಿದ ಸೂಚ್ಯಂಕದ ಆಧಾರ ಮೇಲೆ ಬರ ಪರಿಸ್ಥಿಯನ್ನು ಪರಿಗಣಿಸಲಾಗುತ್ತದೆ.
ಒಂದು ವಾರ ಮಳೆ ಬಾರದಿದ್ದರೆ ಬರ ಘೋಷಣೆಗೆ ಚಿಂತನೆ
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಒಂದು ವಾರ ಮಳೆ ಬಾರದೇ ಇದ್ದರೆ ಬರಗಾಲ ಘೋಷಣೆ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವರು ”ಕೇಂದ್ರದ ನಿಯಮಗಳ ಪ್ರಕಾರ ಸತತ ಮೂರು ವಾರ ಶೇ. 60ಕ್ಕಿಂತ ಕಡಿಮೆ ಮಳೆಯಾದ ಪ್ರದೇಶವನ್ನು ಮಾತ್ರ ಬರಗಾಲದ ಪ್ರದೇಶ ಎಂದು ಘೋಷಣೆ ಮಾಡಬಹುದು. ಈ ಒಂದು ನಿಯಮದಿಂದ ಹೆಚ್ಚಿನ ರೈತರಿಗೆ ಅನುಕೂಲವಾಗುವುದಿಲ್ಲ. ಹಾಗಾಗಿ ಸರಕಾರ ಶೇಕಡಾ ಮಳೆಯ ಪ್ರಮಾಣವನ್ನು 30ಕ್ಕೆ ಇಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಉತ್ತರ ಬಾರದೇ ಇದ್ದರೆ ಮುಂದೆ ಹಳೆ ನಿಯಮದಂತೆ ಪರಿಹಾರ ನೀಡುವುದು ಅನಿವಾರ್ಯವಾಗುತ್ತದೆ,” ಎಂದು ತಿಳಿಸಿದರು..
”ಕಳೆದ ಎರಡು- ಮೂರು ವರ್ಷಗಳಿಂದ ಬೆಳೆ ಸಮೀಕ್ಷೆ ಸರಿಯಾಗಿ ಆಗಿಲ್ಲ. ಆದ್ದರಿಂದ ಬೆಳೆ ಸಮೀಕ್ಷೆ ಹೇಗೆ ಮಾಡಬೇಕು ಎನ್ನುವ ಬಗ್ಗೆ ಇಲಾಖೆ ಸಿಬ್ಬಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಲಾಗುವುದು,” ಎಂದು ಸಚಿವರು ತಿಳಿಸಿದರು.
”ಕೃಷಿ ಉತ್ಪನ್ನಗಳಿಗೆ ಸರಿಯಾದ ಬ್ರಾಂಡ್ ಮೌಲ್ಯ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯಿಂದ ಅಮೃತ್ ಮಳಿಗೆಗಳನ್ನು ನಿರ್ಮಾಣ ಮಾಡುವ ಮೂಲಕ ನಂದಿನಿ ಉತ್ಪನಗಳ ಮಾದರಿಯಲ್ಲಿ ಕೃಷಿ ಉತ್ಪನ್ನಗಳಿಗೂ ಬ್ರಾಂಡ್ ಮೌಲ್ಯ ಕಲ್ಪಿಸಲಾಗುವುದು,” ಅಂತ ಮಾಹಿತಿಯನ್ನು ಕೃಷಿ ಸಚಿವರು ಮಾಹಿತಿಯನ್ನು ನೀಡಿರುತ್ತಾರೆ.
ಈ ನಡುವೆ, ರೈತರ ಎಲ್ಲಾ ‘ರೈತ ಕರೆ ಕೇಂದ್ರ’ಕ್ಕೆ ಸಮಸ್ಯೆಗಳಿಗೆ ಒಂದೇ ವೇದಿಕೆಯಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಆರಂಭಿಸಿರುವ ‘ರೈತ ಕರೆ ಕೇಂದ್ರ’ಕ್ಕೆ
ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ”ಈ ಮೊದಲು ಕೃಷಿ ಸಹಾಯವಾಣಿಗೆ 8 ಪ್ರತ್ಯೇಕ
:ನಂಬರ್‌ಗಳಿದ್ದವು. ಈಗ 1800-425-3553 ಸಂಖ್ಯೆಗೆ ಕರೆ ಮಾಡಿ ಕೃಷಿಗೆ ಸಂಬಂಧಿಸಿದ ಮಾಹಿತಿ, ಸಲಹೆ, ಮಾರ್ಗದರ್ಶನ ಪಡೆಯಬಹುದಾಗಿದೆ,” ಎಂದು ಕೃಷಿ ಸಚಿವರು ತಿಳಿಸಿದ್ದಾರೆ.
ಕೃಷಿ ಸಂಬಂಧಿಸಿದ ನಿರಂತರ ಮಾಹಿತಿಗಾಗಿ www.krishimahiti.com. website ವೀಕ್ಷಿಸಿ.