Wednesday, March 12, 2025

Agriculture machine subsidy-ವಿವಿಧ ಕೃಷಿ ಯಂತ್ರೋಪಕರಣಗಳ ಸಹಾಯಧನಕ್ಕೆ ಅರ್ಜಿ ಆಹ್ವಾನ! ಕೃಷಿ ಇಲಾಖೆ.

ನಮಸ್ಕಾರ ಸಮಸ್ತ ರೈತ ಭಾಂದವರೇ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಜಲಾನಯನ ಇಲಾಖೆ ಈ ಇಲಾಖೆಗಳಲ್ಲಿ ರೈತರಿಗೆ ಸಬ್ಸಿಡಿ/ಸಹಾಯಧನದ ದರದಲ್ಲಿ ವಿವಿಧ ಕೃಷಿ ಪರಿಕರಗಳು ಮತ್ತು ಯಂತ್ರೋಪಕರಣಗಳು ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ.

ಕೃಷಿ ಇಲಾಖೆಯ ಹಲವು ಜಿಲ್ಲೆಗಳಲ್ಲಿ 2024-25ನೇ ಸಾಲಿನ ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ವಿತರಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಿಮ್ಮ ಜಿಲ್ಲೆಗಳಲ್ಲಿ ಇರುವ ಹತ್ತಿರದ ರೈತ ಸಂಪರ್ಕ ಕೇಂದ್ರ (ಕೃಷಿ ಇಲಾಖೆ ಕಛೇರಿ) ಭೇಟಿ ಮಾಡಿ ಕೃಷಿ ಯಂತ್ರೋಪಕರಣಗಳಿಗೆ ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಬಹುದು?

ಕೃಷಿ ಇಲಾಖೆಯಲ್ಲಿ ಪವರ ಸ್ಪ್ರೇಯರ್, ಪವರ್ ವೀಡರ್, ಟಿಲ್ಲರ್, ಮಿನಿ ಟ್ರ್ಯಾಕ್ಟರ್, ಟ್ರ್ಯಾಕ್ಟರ್, ಮೋಟೋಕಾರ್ಟ್(ಕೈಗಾಡಿ), ಕೋನೋ ವೀಡರ್, ರೋಟೋವೆಟರ್, ಪೆಟ್ರೋಲ್ ಬ್ಯಾಕ್ ಪ್ಯಾಕ್ ಸ್ಪ್ರೇಯರ್, ಕೆಲವು ಜಿಲ್ಲೆಗಳಲ್ಲಿ ಕಬ್ಬು ಕಟಾವು ಮೆಷಿನ್, ರಾಗಿ ಮತ್ತು ಭತ್ತ ಕಟಾವು ಮೆಷಿನ್, ಹೆಸರು, ಉದ್ದು ಕಟಾವು ಮೆಷಿನ್ ಇನ್ನೂ ಹಲವು ಕೃಷಿ ಸಂಬಂದಿಸಿದ ಯಂತ್ರೋಪಕರಣಗಳಿಗೆ ಅರ್ಜಿ ಸಲ್ಲಿಸಬಹುದು.

ದನ್ನೂ ಓದಿ:ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಮಾನದಂಡಗಳು!

ಕೆಲವು ಜಿಲ್ಲೆಗಳಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಬಂದ ಕೂಡಲೇ ಸೌಲಭ್ಯ ನೀಡುವ ವ್ಯವಸ್ಥೆ ಇರುತ್ತದೆ. ಆದ್ದರಿಂದ ಕೃಷಿ ಇಲಾಖೆ ಭೇಟಿ ಮಾಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಸಹಾಯಧನ ವಿತರಣೆ ವಿಧಾನ:

ಸಾಮಾನ್ಯ ವರ್ಗದ ಜನರಿಗೆ ಶೇ.50% ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ದವರಿಗೆ ಶೇ.90% ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ:ಕೃಷಿ ಹೊಂಡ ನಿರ್ಮಾಣ ಶೇ.80% ಸಹಾಯಧನ ಕೃಷಿ ಭಾಗ್ಯ ಯೋಜನೆ!

Apply documents-ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು:

1)ನಿಗದಿತ ಅರ್ಜಿ ನಮೂನೆ/application

2)ಪಹಣಿ/RTC COPY

3)ಆಧಾರ್ ಪ್ರತಿ/aadhara copy

4)ಬ್ಯಾಂಕ್ ಪಾಸ್ ಬುಕ್ ಪ್ರತಿ/bank copy

5)2 ಫೋಟೋ/photo

6)stamp paper

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ವಿಚಾರಿಸಿ.

ಇತ್ತೀಚಿನ ಸುದ್ದಿಗಳು

Related Articles