RTC/ಪಹಣಿ/ಉತಾರ್ ಗೆ ರೈತರು ಆಧಾರ್ ಕಾರ್ಡ್ ನ್ನು ಜೋಡಣೆ ಮಾಡಿದರೆ ಎಲ್ಲಿ ಸಾಲ ಪಡೆಯಬಹುದು ಎಂದು ತಿಳಿದು ಕೊಳ್ಳುವ ಮೊದಲು ನಿಮ್ಮ ಆಧಾರ್ RTC/ಪಹಣಿ/ಉತಾರ್ ಗೆ ಜೋಡಣೆ ಆಗಿದೆಯಾ ಇಲ್ಲವಾ ಎಂದು ತಿಳಿದು ಕೊಳ್ಳಬೇಕಾಗುತ್ತದೆ.
RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಕೆಲಸ ಆಗಿಲ್ಲ ಎಂದರೆ ನಿಮಗೆ ಸಾಲ ಸಿಗುವುದಿಲ್ಲ. ಸಾಲ ಪಡೆಯಬೇಕು ಎಂದಾದಲ್ಲಿ ನೀವು ನಿಮ್ಮ RTC/ಪಹಣಿ/ಉತಾರ್ ಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಭೇಟಿ ಮಾಡಿದರೆ ಸರ್ವೇ ನಂಬರ್ ಗಳಿಗೆ ಆಧಾರ್ ಜೋಡಣೆ ಮಾಡಿಕೊಡುತ್ತಾರೆ.
ತದನಂತರ ತಮ್ಮ ಗ್ರಾಮಗಳಲ್ಲಿ ಇರುವ ಅಥವಾ ನಿಮ್ಮ ಗ್ರಾಮಗಳಿಗೆ ಹತ್ತಿರ ಇರುವ ಮತ್ತು ನಿಮ್ಮ ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಭೇಟಿ ಮಾಡಿ ಕೃಷಿ ಸಾಲಗಳನ್ನು ಪಡೆದುಕೊಳ್ಳಬಹುದು. ಇನ್ನೂ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಭೇಟಿ ಮಾಡಿ ವಿಚಾರಿಸಿ.
ಇದನ್ನೂ ಓದಿ: Bara Parihara-ಯಾರಿಗೆಲ್ಲ ಸಿಗಲಿದೆ 2ನೇ ಕಂತಿನ ಬರ ಪರಿಹಾರದ ಹಣ!
ಅನೇಕ ರೈತರಲ್ಲಿ ಈ ಪ್ರಶ್ನೆ ಸಹಜವಾಗಿ ಬಂದಿರುತ್ತದೆ. ನಾವು ಏಕೆ ನಮ್ಮ RTC/ಪಹಣಿ/ಉತಾರ್ ಗೆ ಆಧಾರ್ ಜೋಡಣೆ ಮಾಡಿಸಬೇಕು ಎಂದು ಅದರ ಮಾಹಿತಿ ಇದರ ಕೆಳಗೆ ನೀಡಲಾಗಿದೆ:
A)ಜಮೀನಿನ ಮಾಲೀಕರ ನೈಜನೆಯನ್ನು ನಿಖರವಾಗಿ ತಿಳಿದುಕೊಳ್ಳಲು.
B)ಕಂದಾಯ ಇಲಾಖೆಗೆ ರೈತರ ಜಮೀನಿನ ದಾಖಲೆಗಳನ್ನು digital ಮಾದರಿಯಲ್ಲಿ ಸಂಗ್ರಹಣೆ ಮಾಡಿಡಲು ಸಹಕಾರಿಯಾಗಿದೆ. C)ಕೃಷಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೆಳೆ ಪರಿಹಾರ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
D)ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಾಯಧನದಡಿಯಲ್ಲಿ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
E)ಕೃಷಿಕರಿಗೆ ಕೃಷಿ ಸಹಕಾರಿ ಸಂಘಗಳಿಂದ ಕೃಷಿ ಸಾಲ ಪಡೆಯಲು ಸಹಾಯವಾಗುತ್ತದೆ.
F)ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಸಹಾಯವಾಗುತ್ತದೆ.
Agriculture loan types-ಕೃಷಿ ಸಾಲದ ವಿಧಗಳು:
1)ಅಲ್ಪಾವಧಿ ಕೃಷಿ ಸಾಲ ೦% ಬಡ್ಡಿ (ಒಂದು ವರ್ಷದ ಮಟ್ಟಿಗೆ)
2)ಮಧ್ಯಮವಾಧಿ ಕೃಷಿ ಸಾಲ (ಮೂರು ವರ್ಷದ ಮಟ್ಟಿಗೆ)
3)ದೀರ್ಘಾವಧಿ ಕೃಷಿ ಸಾಲ (ಐದು ವರ್ಷದ ಮೇಲ್ಪಟ್ಟು )
ಕೃಷಿ ಸಾಲ ಪಡೆಯಲು ಬೇಕಾಗುವ ದಾಖಲೆಗಳು:
1)RTC/ಪಹಣಿ/ಉತಾರ್
2)ಆಧಾರ್ ಕಾರ್ಡ್ ಜೆರಾಕ್ಸ
3)ಪಾನ್ ಕಾರ್ಡ್ ಜೆರಾಕ್ಸ
4)ರೇಷನ್ ಕಾರ್ಡ್ ಜೆರಾಕ್ಸ