Agriculture land document Download- ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಿರಿ.
ಆತ್ಮೀಯ ರೈತ ಬಾಂದವರೇ ನಿಮ್ಮ ಗದ್ದೆಗೆ/ಜಮೀನಿಗೆ/ತೋಟಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ತುರ್ತು ಪಡೆಯಲು ನೀವು ಕಂದಾಯ ಇಲಾಖೆಗೆ ಹೋಗಲು ಆಗದೇ ಇದ್ದಾಗ ನಿಮ್ಮ ಮೊಬೈಲ್ ನಲ್ಲೆ ಪಡೆಯಬಹುದಾಗಿರುತ್ತದೆ.ಅದು ಹೇಗೆ ಅಂತ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಕೆಳಗೆ ಕಾಣಿಸಿದ ಆರು ದಾಖಲೆಗಳು ಜೊತೆಗೆ ಇನ್ನೂ ಹೆಚ್ಚಿನ ದಾಖಲೆಗಳು ಈ ಒಂದು ಲಿಂಕ್ ನಿಂದ ದೊರೆಯುತ್ತವೆ.
- Atlas (ಅಟ್ಲಾಸ್)
- Survey Pakka Book (ಸರ್ವೆ ಪಕ್ಕಾ ಪುಸ್ತಕ)
- Tippani (ಟಿಪ್ಪಣಿ)
- Akarband (ಆಕಾರಬಂದು)
- FMB (ಎಫ್.ಎಮ್.ಬಿ)
- Survey Prati Book (ಸರ್ವೆ ಪ್ರತಿ ಪುಸ್ತಕ)
ಒಟ್ಟು 94 ದಾಖಲೆಗಳ ದರಪಟ್ಟಿ ಪಡೆಯಲು ಇಲ್ಲಿಕ್ಲಿಕ್ ಮಾಡಿ: https://bhoomojini.karnataka.gov.in/oscitizen
ಕೃಷಿಗೆ ಸಂಬಂಧಿಸಿದ ಇತರೆ ಯೋಜನೆಗಳು:
ಇದನ್ನೂ ಓದಿ: ಹೊಲ/ ಗದ್ದೆ / ಜಾಗ ಖರಿದೀಸುವ ಮುನ್ನ ಅವಶ್ಯಕವಾಗಿ ಇದರ ಗಮನವಿರಲಿ.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆ ಬೋರವೆಲ್ ಕೊರೆಸಲು ಅರ್ಜಿ ಆಹ್ವಾನ
ಇದನ್ನೂ ಓದಿ: ಕುಶಲ ಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ
ಇದನ್ನೂ ಓದಿ: Crop insurance: ಬೆಳೆವಿಮೆ ಹಣ ದೊರೆಯಲು ಎಲ್ಲಾ ರೈತರು ಈ ಕೆಲಸ ಮಾಡುವುದು ಕಡ್ಡಾಯ
ರೈತರು ಜಮೀನಿನ ಸರ್ವೆ ಸಂಬಂದಪಟ್ಟ ಪ್ರಮುಖ ಈ ಆರು ದಾಖಲೆಗಳನ್ನು ಸೇರಿ ಒಟ್ಟು 94 ದಾಖಲೆಗಳನ್ನು ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ನಲ್ಲೇ ಡೌನ್ಹೋಡ್ ಮಾಡಿಕೊಳ್ಳಬವುದು.
ಮೊದನೆ ಹಂತ-1: ಮೊದಲೆದಾಗಿ ನಿಮ್ಮ ಇಲ್ಲಿ ಕಾಣಿಸಿದ ಜಾಲತಾಣದ ಲಿಂಕ್ ಬಳಸಿಕೊಂಡು ನೋಡಬಹುದಾಗಿದೆ.
https://bhoomojini.karnataka.gov.in/oscitizen ಮೇಲೆ ಕ್ಲಿಕ್ ಮಾಡಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಪಡೆಯಿರಿ ಮೇಲೆ ಕಿ ಮಾಡಿ ನಂತರ ನಿಮ್ಮ ಮೊಬೈಲ್ ಗೆ ಬರುವ 4 ಅಂಕಿ ಒಟಿಪಿಯನ್ನು ನಮೂದಿಸಿ ಅಲ್ಲೇ ಕೆಳಗೆ ಕಾಣುವ ಕಾ.ಪ್ಯಾರ್ ಕೋಡ್ ಹಾಕಿ LOGIN ಬಟನ್ ಮೇಲೆ ಓತ್ತಿ ಲಾಗಿನ್ ಆಗಬೇಕು.
ಒಟಿಪಿಯನ್ನು ನಮೂದಿಸಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಟಾರ್ ಕೋಡ್ ಹಾಕಿ LOGIN ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.
ಓದುಗರ ಗಮನಕ್ಕೆ: ಮೊಬೈಲ್ ನಲ್ಲಿ ನೋಡುವವರು “Desktop site” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡು ಲಾಗಿನ್ ಅಗಬೇಕಾಗುತ್ತದೆ.
ಎರಡನೇ ಹಂತ-2: ನಂತರದಲ್ಲಿ ಈ ಪುಟದಲ್ಲಿ ಎರಡು ಆಯ್ಕೆಗಳಿರುತ್ತದೆ ಕನ್ನಡ/ENGLISH ಇದನ್ನು ಆಯ್ಕೆ ಮಾಡಿಕೊಂಡು ತದನಂತರ “ಹೊಸ ಕೋರಿಕೆ” ಬಟನ್ ಮೇಲೆ ಕ್ಲಿಕ್ ಮಾಡಬೇಕು ಆಗ Do You Want To for Digilocker Document Save and E-sign of the Acknowledgement Report? ಈ ಮಾಹಿತಿ ಗೋಚರಿಸುತ್ತದೆ ನಿಮಗೆ ಬೇಕಾದ ದಾಖಲಾತಿಯನ್ನು ಡಿಜಿಲಾಕರ್ ನಲ್ಲಿ ಸೇವ್ ಮಾಡಲು ಇಚ್ಚಿಸಿದಲ್ಲಿ YES ಎಂದು ಕೊಡಿ ಬೇಡವಾದಲ್ಲಿ NO ಎಂದು ಕ್ಲಿಕ್ ಮಾಡಬೇಕು.
ಮೂರನೇ ಹಂತ-3: ಈ ಮೇಲಿನ ಹಂತಗಳನ್ನು ಮುಗಿಸಿದ ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಸರ್ನೋಕ್, ಹಿಸ್ಸಾ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು “ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ನಾಲ್ಕನೇ ಹಂತ-4: ಈ ಪ್ರಕ್ರಿಯೆ ಮುಗಿಸಿದ ಬಳಿಕ ಆ ಸರ್ವೆ ನಂಬರಿನ ಎಲ್ಲಾ ಸರ್ವೆ ದಾಖಲಾತಿಗಳು ಗೋಚರಿಸುತ್ತವೆ “View Document” ಸಿಂಬಲ್ ಮೇಲೆ ಕ್ಲಿಕ್ ಮಾಡಿ ನೀವು ಆ ದಾಖಲೆಗಳನ್ನು ಉಚಿತವಾಗಿ ನೋಡಬವುದು ಅದರೆ ಡೌನ್ಹೋಡ್ ಮಾಡಿಕೊಳ್ಳಲು “Pay and Print” ಬಟನ್ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿ ಮಾಡಿ ಡೌನ್ಫೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬವುದಾಗಿದೆ.