Thursday, September 19, 2024

Agriculture Department machinery:ಕೃಷಿ ಇಲಾಖೆ ಯೋಜನೆಗಳ ಲಾಭ ಪಡೆಯಲು ಯಾವೆಲ್ಲಾ ದಾಖಲಾತಿಗಳು ನೀಡಬೇಕು ?

ಆತ್ಮೀಯ ರೈತ ಬಾಂದವರೇ ರಾಜ್ಯದ ಹೋಬಳಿ ಮಟ್ಟದಲ್ಲಿ ಇರುವ ಕೃಷಿ ಇಲಾಖೆಯಿಂದ (ರೈತ ಸಂಪರ್ಕ ಕೇಂದ್ರ ) ದಲ್ಲಿ ಶೇ 90 ಮತ್ತು ಶೇ 50 ರಷ್ಟು ಸಹಾಯಧನದಲ್ಲಿ ವಿವಿಧ ಬಗ್ಗೆಯ (Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಇಲಾಖೆಯಲ್ಲಿ ರೈತರಿಗೆ ಪ್ರತಿ ವರ್ಷ ಬಿತ್ತನೆಯಿಂದ ಕಟಾವಿನವರೆಗೆ ರೈತರಿಗೆ ಬೇಕಾಗುವ ಸಲಕಣೆಗಳು/ಉಪಕರಣಗಳು ಸಹಾಯಧನದಲ್ಲಿ ದೊರೆಯುತ್ತವೆ. ಈ ಎಲ್ಲಾ ಉಪಕರಣಗಳನ್ನು ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ? ಹಾಗೂ ಯಾವೆಲ್ಲಾಉಪಕರಣಗಳು ಸಿಗುತ್ತವೆ? ಎಂಬುವುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಮಾಹಿತಿಯನ್ನುಆದಷ್ಟು ರೈತರಿಗೆ ಹಂಚಿಕೊಳ್ಳಿ.

ಇಲಾಖೆಯ ಎಲ್ಲಾ ಸೇವೆಗಳಿಗೆ ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಪ್ರಸ್ತುತ ಯಾವೆಲ್ಲ ಯಂತ್ರಗಳನ್ನು ಸಹಾಯಧನದಲ್ಲಿ ಪಡೆಯಬಹುದು? ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: First installment drought payment Failure list:ಬರ ಪರಿಹಾರ ಹಣ ಬರದೇ ಇರುವವರ ಪಟ್ಟಿ ಮತ್ತು ಕಾರಣ :

Required documents for Agriculture machinery application- ಅಗತ್ಯ ದಾಖಲಾತಿಗಳು:
1.ಅರ್ಜಿ ನಮೂನೆ

2.ಅರ್ಜಿದಾರರ ಪೋಟೋ.

3.ಆಧಾರ್ ಕಾರ್ಡ ಪ್ರತಿ.

4.ಹಿಡುವಳಿ ಪ್ರಮಾಣ ಪತ್ರ.

5.20 ರೂ ಬಾಂಡ್(ಜಂಟಿ ಖಾತೆ ಹೊಂದಿದ್ದಲ್ಲಿ ಮಾತ್ರ).

6.ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ).

7.ಬಾಂಕ್ ಪಾಸ್ ಬುಕ್ ಪ್ರತಿ.

8.ರೈತರ ನೋಂದಣಿ ಸಂಖ್ಯೆ

ವಿಶೇಷ ಸೂಚನೆ:

ರೈತರು ಮೊದಲು ಸಹಾಯಧನದಲ್ಲಿ ಪಡೆದಿರುವ ಉಪಕರಣಗಳಿಗೆ ಮತ್ತೊಮ್ಮೆ ಸಬ್ಸಿಡಿ ನೀಡಲಾಗುವುದಿಲ್ಲ.ಇದು ಎಲ್ಲಾ ರೀತಿಯ ರೈತರಿಗೆ ಅನ್ವವಾಗುತ್ತದೆ.

Agriculture machinery subsidy- ಯಂತ್ರೋಪಕರಗಳ ವಿವರ:

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

ಎಲ್ಲಾ ರೈತರು (ಎಲ್ಲ ವರ್ಗದ), SMAM (Agriculture machinery subsidy yojana), & ಉಪಕರಣಗಳನ್ನು ಸಾಮಾನ್ಯ ರೈತರಿಗೆ ಶೇ. 50 ವರೆಗೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರವರೆಗೆ (ಕೆಲವು ಮಿತಿಗೊಳಪಟ್ಟು) ಸಬ್ಸಿಡಿ ದರದಲ್ಲಿ ಪಡೆಯಬಹುದು.

Agriculture machinery-ಪಡೆಯಬಹುದಾದ ಉಪಕರಣಗಳು :

ಕಳೆ ಕತ್ತರಿಸುವ ಯಂತ್ರ

ಹುಲ್ಲು ಕತ್ತರಿಸುವ ಯಂತ್ರ

ರೋಟರಿ/ಪವರ್ ವೀಡರ್

ಯಂತ್ರ ಚಾಲಿತ ಕೈಗಾಡಿಗಳು (Load cart) 350 KG ವರೆಗೆ

ಔಷಧಿ ಸಿಂಪಡಣೆ ಗೆ HTP sprayers

ಕಾರ್ಬನ್ ಫೈಬರ್ ದೋಟಿ ಮತ್ತು ಏಣಿಗಳು

ಭತ್ತ ನಾಟಿ ಯಂತ್ರ

ಭತ್ತ ಕಟಾವು ಯಂತ್ರ

ಪವರ್‍ ಟಿಲ್ಲರ್‍

ಡೀಸೆಲ್ ಪಂಪ್ಪೆಟ್

ಗುಂಡಿ ತೆಗೆಯುವ ಡಿಗ್ಗರ್

ರೋಟೋವೇಟರ್

ವಿಶೇಷ ಸೂಚನೆ ರೈತರ ಗಮನಕ್ಕೆ:


ಕಳೆದ ವರ್ಷಗಳಲ್ಲಿ (ಹಿಂದಿನ ವರ್ಷ) ಇಲಾಖೆಯಿಂದ ಸಹಾಯಧನದಲ್ಲಿ ಯಾವುದೇ ಉಪಕರಣಗಳನ್ನು ಪಡೆದು ಪುನಃ ಪಡೆಯಲು ಸಹಾಯಧನ ದೊರೆಯುವುದಿಲ್ಲ.


ಅನುದಾನ ಲಭ್ಯತೆ ಹಾಗೂ ಜೇಷ್ಟತೆ ಆಧಾರದ ಮೇಲೆ ಉಪಕರಣಗಳಿಗೆ ಸಬ್ಸಿಡಿ ನೀಡಲಾಗುತ್ತದೆ.


ಕೆಲವು ಉಪಕರಣಗಳಿಗೆ ಸಹಾಯಧನಕ್ಕೆ ಕಾಲದ ಮಿತಿ ಇರುತ್ತದೆ ಉದಾ: ಯಂತ್ರೋಪಕರಣಕ್ಕೆ 3 ವರ್ಷ ಮತ್ತು ತುಂತುರು ನೀರಾವರಿ ಘಟಕಕ್ಕೆ 7 ವರ್ಷಗಳ ಪುನಃ ಅರ್ಜಿ ಸಲ್ಲಿಸಲು ಪ್ರಸ್ತುತ ಅವಕಾಶವಿರುವುದಿಲ್ಲ .

Easy life- ಹೆಚ್ಚಿನ ಮಾಹಿತಿಗಾಗಿ ಈಸೀ ಲೈಫ್ ಕಂಪನಿಯ ಪ್ರತಿನಿಧಿಯ ಮೊಬೈಲ್ ಸಂಖ್ಯೆ: 9901876682

ಇತ್ತೀಚಿನ ಸುದ್ದಿಗಳು

Related Articles