Saturday, August 30, 2025

Agriculture department: ಕೃಷಿ ಇಲಾಖೆಯಿಂದ ಮಹತ್ವದ ಪ್ರಕಟಣೆ

ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಹಾಯಧನ ಪಡೆಯಲು ಕಡ್ಡಾಯವಾಗಿ ಈ ಕೆಲಸ ಮಾಡಿ.

ಪ್ರಿಯ ರೈತ ಬಾಂವದರೇ, ಕೃಷಿ ಇಲಾಖೆಯಲ್ಲಿ ಎಲ್ಲಾ ಯೋಜನೆಗಳಲ್ಲಿ ಲಾಭ ಪಡೆಯಲು ಮತ್ತು ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ರೈತರ ನೋಂದಣಿ ಮಾಡಿಸುವುದಾಗಿರುತ್ತದೆ. ಈ ದಿಸೆಯಲ್ಲಿ ನೋಂದಣಿ ಕಾರ್ಯವನ್ನು ಇಲಾಖೆ ಹಮ್ಮಿಕೊಂಡಿರುತ್ತದೆ. ಆಗಿದ್ದರೆ ಈ ನೋಂದಣಿ ಮಾಡಿಸುವುದರ ಉದ್ದೇಶವೇನು? ರೈತರಿಗೆ ಏನೆಲ್ಲಾ ಲಾಭಗಳಗುತ್ತವೆ? ಇಲಾಖೆ ಯಾವ ಯೋಜನೆಗೆ? ಈ ಕಾರ್ಯ ಉಪಯೋಗವಾಗುತ್ತದೆ? ಏಲ್ಲಿ ನೋಂದಣಿ ಮಾಡಿಸಬೇಕು? ದಾಖಲೆಗಳೇನು? ಮತ್ತು ಪಹಣಿಯಲ್ಲಿ ವಿಭಾಗ,ದಾನ,ಕ್ರಯ, ಪೌತಿ, ಮತ್ತು ಕೋರ್ಟ ಆದೇಶ ಇತರೆ ಸಮಸ್ಯೆಯಿಂದ ಉತಾರ (RTC) ಬದಲಾವಣೆ ಆದ ನಂತರ ಎನು? ಮಾಡಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: Krishi Prashasti 2025 : ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಥಮ ಬಹುಮಾನ ಮೊತ್ತ 50,000/-ರೂ

ರೈತರ ನೋಂದಣಿ ಉದ್ದೇಶ :
ರೈತ ಬಾಂದವರೂ ನೋಂದಣಿ ಮಾಡಿಸುವುದರಿಂದ ಕೃಷಿ ಮತ್ತು ಕೃಷಿಯೇತರ ( ತೋಟಗಾರಿಕೆ, ಮೀನುಗಾರಿಕೆ,ಪಶು ಸಂಗೋಪನೆ, ಕಂದಾಯ ಇಲಾಖೆ, ರೇಷ್ಮೆ ಇಲಾಖೆ) ಇಲಾಖೆಯ ಸರ್ಕಾರದ
ಸವಲತ್ತುಗಳನ್ನು ಪಡೆಯಬಹುದಾಗಿರುತ್ತದೆ. K-KISAN (Krishi Information Service And Networking) FRUITS (Farmers Registration and Unified beneficiary Information System) ರಾಜ್ಯದ ರೈತರ ವಿವರಗಳನ್ನು ದಾಖಲಿಸಲು ರಾಜ್ಯ ಸರ್ಕಾರದಿಂದ ‘FRUITS’ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ.

FRUITS’ ತಂತ್ರಾಂಶದಲ್ಲಿ ಜೂನ್ 2018 ರಿಂದ ರೈತರ ನೊಂದಣಿ ಮಾಡಲಾಗುತ್ತಿದೆ. ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ವಿವಿಧ ಸೇವೆಗಳನ್ನು ಪಡೆಯಲು ಸದರಿ ರೈತರ ನೊಂದಣಿ ಸಂಖ್ಯೆಯನ್ನು ಬಳಸಬಹುದಾಗಿರುತ್ತದೆ.

ಕೃಷಿ ಮತ್ತು ಕೃಷಿಯೇತರ ಇಲಾಖೆಯಲ್ಲಿ ಯಾವ ಯೋಜನೆಯ ಲಾಭಗಳು ಸಿಗುತ್ತವೆ:

ಕೃಷಿ ಇಲಾಖೆಯ ಕೆ-ಕಿಸಾನ್ ತಂತ್ರಾಂಶದಲ್ಲಿ ಕೃಷಿ ಯಾಂತ್ರೀಕರಣ ಯೋಜನೆ, ಕೃಷಿ ಸಂಸ್ಕರಣೆ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ಬೀಜ ವಿತರಣೆ, ಬೀಜ/ರಸಗೊಬ್ಬರ / ಪೀಡೆನಾಶಕ ಪರವಾನಗಿ ವಿತರಣೆ, ವಿವಿಧ ಕೃಷಿ ಪರಿಕರಗಳ ವಿತರಣೆಯನ್ನು Agriculture inputs support system ಮೂಲಕ ಮಾಡಲಾಗುತ್ತಿದೆ.
ಕೃಷಿ ಇಲಾಖೆಯ ಯೋಜನೆಗಳಾದ NFSM,
ಸಮಗ್ರ ಕೃಷಿ ಪದ್ಧತಿ,
ರೈತ ಸಿರಿ.
ರೈತ ಶಕ್ತಿ,
ಮೆಕ್ಕೆಜೋಳ ಬೆಳೆದ ರೈತರಿಗೆ ಪ್ರೋತ್ಸಾಹ ಧನ,
ತೊಗರಿ ನೆಟ್ ರೋಗ ಪರಿಹಾರ ಹಾಗೂ ಇತರೆ ಯೋಜನೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಮಾಡುವ ಸಂದರ್ಭದಲ್ಲಿ ರೈತರ ಜಮೀನಿನ ವಿವರಗಳು FRUITS ತಂತ್ರಾಂಶದ ಮಾಹಿತಿ ಆಧರಿಸಿ DBT ಮುಖಾಂತರ ಹಣ ವರ್ಗಾವಣೆ ಮಾಡಲಾಗುತ್ತದೆ. ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರೇ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆಯಡಿ ,ಹವಾಮಾನ ಆಧಾರಿತ ಬೆಳೆವಿಮಾ ಯೋಜನೆ,

ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ

ಪಶು ಸಂಗೋಪನೆ ಇಲಾಖೆ ಯಾವ ಯೋಜನೆಗಳು:
ಹಾಲು ಉತ್ಪಾದಕರಿಗೆ ಉತ್ತೇಜನ, ಸಣ್ಣ ಪ್ರಾಣಿಗಳು ಆಕಸ್ಮೀತ ಸಾವಿಗೆ ಆಪತ್ತು ನಿಧಿ, ಹೈನು ಘಟಕ ವಿತರಣೆ ಇನ್ನೂ ಹೆಚ್ಚಿನ ಯೋಜನೆ ಲಾಭ ಪಡೆಯಲು ಈ ನೋಂದಣಿ ಉಪಯೋಗವಾಗಲಿದೆ.

ತೋಟಗಾರಿಕೆ ಇಲಾಖೆಯ ಯಾವ ಯೋಜನೆಗಳು :
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ತೋಟಗಾರಿಕೆ ಯಾಂತ್ರಿಕರಣ ಉಪ ಅಭಿಯಾನ, ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ, ಇನ್ನೂ ಅನೇಕ ಯೋಜನೆಗಳ ಲಾಭ ಪಡೆಯಬಹುದಾಗಿರುತ್ತದೆ.

ನೋಂದಣಿ ಎಲ್ಲಿ ಮಾಡಲಾಗುವುದು?
FRUITS’ ತಂತ್ರಾಂಶದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ರೈತರು ಕೃಷಿ ಇಲಾಖೆ /ತೋಟಗಾರಿಕೆ ಇಲಾಖೆ/ ರೇಷ್ಮೆ ಇಲಾಖೆ / ಪಶುಸಂಗೋಪನಾ/ಮೀನುಗಾರಿಕೆ/ಕಂದಾಯ ಇಲಾಖೆಗಳಲ್ಲಿ ನೋಂದಾಯಿಸಿಕೊಳ್ಳಲಾಗುತ್ತಿದೆ.

ಬೇಕಾದ ದಾಖಲೆಗಳು:
ಸದರಿ ತಂತ್ರಾಂಶದಲ್ಲಿ ರೈತರ ಹಿಡುವಳಿ ಸಮೇತ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅವಶ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್,
ಪಹಣಿ (RTC), ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರ ಜಾತಿ ಪ್ರಮಾಣ ಪತ್ರ,
ಬ್ಯಾಂಕ್ ವಿವರ, ಈ ಎಲ್ಲಾ ದಾಖಲಾತಿಗಳನ್ನು ಇಲಾಖೆ ನೀಡಿ ನೋಂದಣಿ ಮಾಡಲು ಕೋರಿರುತ್ತಾರೆ.
ಕೆ-ಕಿಸಾನ್ ತಂತ್ರಾಂಶ

ಇದನ್ನೂ ಓದಿ: E-Pauti Movement: ಇ- ಪೌತಿ ಮಾಡದೆ ಇದ್ದರೆ ಸರ್ಕಾರ ಈ ಎಲ್ಲಾ ಯೋಜನೆ ಲಾಭ ಬಂದ್!!

ನೋಂದಣಿ ಮಾಡಿದ ನಂತರ ಪಹಣಿ ಬದಲಾವಣೆ ಮಾಡಿದರೆ ಏನು ಮಾಡಬೇಕು:
ಹೌದು, ರೈತ ಬಾಂದವರೇ, ನೀವು ಏನಾದರೂ ಮೊದಲು ನೋಂದಣಿ ಮಾಡಿಕೊಂಡು ಕೆಲವು ಕಾರಣಗಳಿಂದ ಉದಾ: (ವಿಭಾಗ,ಪೌತಿ,ದಾನ,ಕ್ರಯ, ಮತ್ತು ಕೋರ್ಟ ಆದೇಶ) ಇತರೆ ಕಾರಣಗಳಿಂದ ಪಹಣಿ ಬದಲಾವಣೆ ಮಾಡಿಕೊಂಡರೆ ಅದನ್ನು ಮತ್ತೆ ನೋಮದಣಿ ಮಾಡಿಸಬೇಕಾಗುವುದು ಇಲ್ಲವಾದಲ್ಲಿ ಯೋಜನೆ ಲಾಭ ಸಿಗುವುದಿಲ್ಲ.

ವಿಶೇಷ ಸೂಚನೆ: ಸದ್ರಿ ಮಾಹಿತಿಯನ್ನು ವಿವಿಧ ಇಲಾಕೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಕೆ ಮಾಡುವುದರಿಂದ ರೈತರು ನಿರ್ಭಿತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ Fruits ತಂತ್ರಾಂಶದಲ್ಲಿ ನೋಂದಯಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕಟಣೆ ಪತ್ರ:

ಹೆಚ್ಚಿನ ಮಾಹಿತಿಗಾಗಿ ಕೃಷಿ ಮತ್ತು ಕೃಷಿಯೇತರ ಇಲಾಖೆಯನ್ನು ಸಂಪರ್ಕಿಸಿ.

ಇತ್ತೀಚಿನ ಸುದ್ದಿಗಳು

Related Articles