Friday, September 20, 2024

ಅಡಿಕೆ ಬೆಳೆಯಲ್ಲಿ ಲಾಭ ಪಡೆಯಬೇಕಾದರೆ ರೈತ ಬಾಂದವರಿಗೆ ಈ ಮಾಹಿತಿ ಮುಖ್ಯವಾಗಿ ಗೊತ್ತಿರಬೇಕು..

ಅಡಿಕೆ ಕರ್ನಾಟಕ ರಾಜ್ಯದ ಒಂದು ಪ್ರಮುಖ ವಾಣಿಜ್ಯ ಬೆಳೆ.ಅಡಿಕೆಯನ್ನು ರಾಜ್ಯದ ಕರಾವಳಿ,ಘಟ್ಟ ಪ್ರದೇಶ ಮತ್ತು ಮೈದಾನ ಪ್ರದೇಶಗಳಾದ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.ಅಡಿಕೆಯನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.ಅಡಿಕೆಯನ್ನು ಬೇಯಿಸುವಾಗ ಬರುವ “ಟ್ಯಾನಿನ್ “ಎಂಬ ವಸ್ತುವನ್ನು ಚರ್ಮ ಹದ ಮಾಡುವ ಕೈಗಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಅಡಿಕೆಯಲ್ಲಿ ಕೆಲವು ಸಸ್ಯಕ್ಷಾರಗಳು (ಅಲ್ಕಲಾಯಿಡ್)ಇವೆ.ಹಲವಾರು ಔಷಧಿ ಗುಣಗಳು ಸಹ ಇವೆ. ಮರದ ಕಾಂಡವನ್ನು ಮನೆ ಕಟ್ಟಲು ಉಪಯೋಗಿಸುತ್ತಾರೆ. ಅಡಿಕೆ ಪಟ್ಟೆಯಿಂದ ದೊನ್ನೆ ಮತ್ತು ತಟ್ಟೆ
ಮಾಡಿ ಉಯೋಗಿಸುತ್ತಾರೆ. ಇದರಿಂದ ಅಡಿಕೆಯನ್ನು ವ್ಯಾಪಕವಾಗಿ ಬೆಳೆಯಲು ಪ್ರಾರಂಭವಾಗಿದೆ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ಭಾರತದಲ್ಲೂ ಇದರ ಬೇಡಿಕೆ ತುಂಬಾ ಹೆಚ್ಚಾಗಿದೆ.

ಅಡಿಕೆ ಬೆಳೆಯಲು ಮಣ್ಣು , ಹವಮಾನ ಮತ್ತು ತಾಪಮಾನ ಯಾವುದು ಸೂಕ್ತ:


ನೀರು ಬಸಿದು ಹೋಗುವ ಕೆಂಪು ಗೋಡು, ಜಂಬಿಟ್ಟಿಗೆ ಅಥವಾ ಮೆಕ್ಕಲು ಗೋಡು ಮಣ್ಣು ಅಡಿಕೆ ಬೆಳೆಯಲು ಸೂಕ್ತ ,ಮುಖ್ಯವಾಗಿ ಮಣ್ಣಿನ ರಸಸಾರ 6 ರಿಂದ 7 ಸೂಕ್ತ. ಅಡಿಕೆ ಕೃಷಿಗೆ ತಾಪಮಾನ 15-30 ಡಿಗ್ರಿ ಸೆ. ಉಷ್ಣಾಂಶದೆಲ್ಲಿ ಉತ್ತಮವಾಗಿ ಬೆಳೆಯುತ್ತದೆ.

ಅಡಿಕೆ ಕೃಷಿ ಯಲ್ಲಿ ಈ ಎರಡು ಅಂಶಗಳು ಗಮನದಲ್ಲಿರಬೇಕು :


1.ನರ್ಸರಿ ನೆಡುವಿಕೆ :
ಅಡಿಕೆ ಸಸಿಗಳನ್ನು ನರ್ಸರಿಯಲ್ಲಿ ನಾಟಿ ಮಾಡುವ ಸುಮಾರು ಒಂದು ವರ್ಷ ಮೊದಲು ಮೇ,ಜೂನ್ ತಿಂಗಳುಗಳಲ್ಲಿ ತಯಾರಿಸಲಾಗುತ್ತದೆ.
ನರ್ಸರಿಯಲ್ಲಿ ಅದರ ಸಸಿಗಳನ್ನು ಉತ್ಪಾದಿಸಲು ನಾಟಿ ವಿಧಾನವನ್ನು ಬಳಸಲಾಗುತ್ತದೆ. ಜುಲೈ-ಅಗಷ್ಟ ತಿಂಗಳಿಂದಲೇ ನರ್ಸರಿಯನ್ನು ಸಿದ್ದಪಡಿಬೇಕಾಗುತ್ತದೆ.
ಇದರ ತಯಾರಿಗೆ ಸುಮಾರು 2-3 ತಿಂಗಳುಗಳು ಬೇಕಾಗುತ್ತದೆ. ನೀವು ಸಸಿಗಳನ್ನು ಡಿಸೆಂಬರ್‍ ತಿಂಗಳವರೆಗೆ ನೆಡುಬಹುದಾಗಿರುತ್ತದೆ.

2.ನೀರಾವರಿಯಿಂದ ಅಡಿಕೆ ಕೊಯ್ಲುನಿವರೆಗೆ :
ಬೇಸಿಗೆ ಕಾಲದಲ್ಲಿ ವಾರಕೊಮ್ಮೆ ಮತ್ತು ಚಳಿಗಾಲದ ಸಮಯದಲ್ಲಿ 20 ರಿಂದ 30 ದಿನಗಳಿಗೊಮ್ಮೆ ಅಡಿಕೆ ಸಸ್ಯಕ್ಕೆ ನೀರು ಹಾಕಬೇಕಾಗುತ್ತದೆ. ಹಾಗೆಯೇ,4 -5 ವರ್ಷಗಳ ನಂತರ ಮಾತ್ರ ಫಲ ನೀಡಲು ಪ್ರಾರಂಭಿಸುತ್ತದೆ.
ಮತ್ತು ರೈತರು ಅಡಿಕೆ ತೋಟದಿಂದ ಸುಮಾರು 25-30 ವರ್ಷಗಳವರೆಗೆ ಉತ್ಪಾದನೆಯನ್ನು ಪಡೆಯುತ್ತಾರೆ. ಅಡಿಕೆ ಬೆಳೆಯಲ್ಲಿ, ಮೇಲ್ಬಾಗದ ತೊಗಟೆ ವಿಭಜನೆಯಾದ ನಂತರ ಅಡಿಕೆ ಕೊಯ್ಲು ಪ್ರಾರಂಭಿಸುವುದು
ಮುಖ್ಯವಾಗಿರುತ್ತದೆ.

ಮುಖ್ಯವಾಗಿ ಸ್ಥಳೀಯ ತಳಿಗಳ ಹೆಸರು:


ತೀರ್ಥಹಳ್ಳಿ, ದಕ್ಷಿಣ ಕನ್ನಡ, ಶ್ರೀವರ್ಧನ, ಮಂಗಳ ಸುಮಂಗಳ,ಮೋಹಿತ್ ನಗರ, ಸಿರ್ಸಿ-1(ಎಸ್.ಎ.ಎಸ್-1), ಸ್ವರ್ಣ ಮಂಗಳ,
ಸಂಕರಣ ತಳಿಗಳು :
ವಿ. ಟಿ. ಎಲ್ -ಎ.ಎಚ್ -2 ( ಎಚ್.ಡಿ * ಕ್ರಾಸ್*ಮೋಹಿತ್ ನಗರ) ಗಿಡ್ಡ ಸಂಕರಣ ತಳಿ.

ಇತ್ತೀಚಿನ ಸುದ್ದಿಗಳು

Related Articles