ಆತ್ಮೀಯ ರೈತ ಬಾಂದವರೇ ರೈತರಿಗೆ ಮಳೆ ಕೊರತೆಯಿಂದ ಹಾನಿ ಆದ ರೈತರಿಗೆ ಸರ್ಕಾರದ ಸಹಾಯಹಸ್ತವಾಗಿ ಖಾತೆಗೆ 2000/- ರೂ ಬರ ಪರಿಹಾರದ ಹಣ ನೇರ ನಗದು ವರ್ಗಾವಣೆ ಮೂಲಕ (DBT) ಹಾಕುವ ಕಾರ್ಯಕ್ಕೆ ಚಾಲನೆಯನ್ನು ಸರ್ಕಾರ ತೀರ್ಮಾನಿಸಿ ಈಗಾಗಲೇ ಹಣ ಬಿಡುಗಡೆ ಮಾಡಿರುತ್ತದೆ. ಕೆಲವು ರೈತರಿಗೆ ಹಣ ಜಮಾ ಆಗಿರುತ್ತದೆ.
ಆದರೆ ಇನ್ನೂ ಕೆಲವು ರೈತರಿಗೆ ಹಣ ಜಮಾ ಆಗಿರುವುದಿಲ್ಲ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರುವುದು ಲಿಂಕ್ ಆಗದೇ ಇರುವ ರೈತರ ಜಿಲ್ಲಾ ಮತ್ತು ತಾಲೂಕು ಹಾಗೂ ಹೋಬಳಿವಾರು ಪಟ್ಟಿ ಈ ಲೇಖನದಲ್ಲಿ ನೀಡಿರುತ್ತೆವೆ ಚೇಕ್ ಮಾಡಿಕೊಂಡು ಹೆಚ್ಚಿನ ಜನಗಳಿಗೆ ಹಂಚಿಕೊಳ್ಳಿ..
ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ,ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ ಲಿಂಕ್ ಮಾಡಿ
ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂ.ಗಳನ್ನು ಒದಗಿಸಲಾಗಿದೆ. ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಟ್ವಿಟ್ ಮಾಡಿದ್ದಾರೆ
ಹಾಗಾದರೆ ಆಧಾರ್ ಲಿಂಕ್ ಆಗದ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಚೆಕ್ ಮಾಡಿ
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ : 1: ಮೊದಲು ಈ ಲಿಂಕ್ ಮೇಲೇ ಕ್ಲಿಕ್ ಮಾಡಿ https://fruitspmk.karnataka.gov.in/MISReport/AadharNotSeededReport.aspx
ಹಂತ : 2: ನಂತರ ಜಿಲ್ಲೆಗಳ ಹೆಸರು ಗೋಚರಿಸುತ್ತದೆ ನಂತರ ನಿಮ್ಮ ಜಿಲ್ಲೆಯ ಮೇಲೇ ಓತ್ತಿ.
ಹಂತ : 3: ನಂತರ ತಾಲೂಕು ಹೆಸರು ಗೊಚರಿಸುತ್ತದೆ ನಿಮ್ಮ ತಾಲೂಕು ಆಯ್ಕೆ ಮಾಡಿ ತಾಲೂಕು ಹೆಸು ಮೇಲೇ ಓತ್ತಿ
ಹಂತ: 4: ನಂತರ ಹೋಬಳಿವಾರು ನಿಮ್ಮ ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮದಲ್ಲಿ ನಿಮ್ಮ ಹೆಸರು ಇದೆಯಾ ಎಂದು ಇಲಾಖೆಯನ್ನು ಸಂಪರ್ಕಿಸಿ.
ಇದನ್ನೂ ಓದಿ: Crop insurance 2024: ಬಾಕಿ 800 ಕೋಟಿ ಬೆಳೆವಿಮೆ ಪರಿಹಾರ ಮಾರ್ಚ ಅಂತ್ಯಕ್ಕೆ ಬಿಡುಗಡೆ:
ಹಾಗೂ ಕೃಷಿ ಮತ್ತು ಕೃಷಿಯೇತರ ಇಲಾಖೆಗಳಲ್ಲಿ ಹಲವಾರು ಯೋಜನೆಗಳಡಿ ಸಹಾಯಧನ ಪಡೆಯಲು, ರೈತರು ಮುಖ್ಯವಾಗಿ ಪೋಟೋ, ಆಧಾರ್ ಕಾರ್ಡ,ಬ್ಯಾಂಕ್ ಪಾಸ್ ಬುಕ್, ಹೊಲದ ಉತಾರ್ ದ ದಾಖಲೆಗಳನ್ನು ನೀಡುರಿತ್ತಿರಿ, ನಂತರ ಅರ್ಜಿ ಸಲ್ಲಿಸಿ ಹಲವಾರು ದಿನಗಳು ಕಳೆದರೂ ಹಣ ವರ್ಗಾವಣೆ ಆಗದೇ ಇರುವ ಸನ್ನೀವೇಶಗಳ ಮಾರ್ಪಟ್ಟಿರುತ್ತವೆ.
ಇಂತಹ ರೈತರು ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಯ NPCI Active (National Payments Corporation of India) ಇದ್ದರೆ ಮಾತ್ರ ಇಲಾಖೆಗಳ ಸಹಾಯಧನ ರೈತರ ಖಾತೆಗಳಿಗೆ ಜಮಾ ಆಗುತ್ತದೆ. ಹಾಗಿದ್ದರೆ NPCI Activeಇದೆಯೋ ಇಲ್ಲವೋ ಅಂತ ಈ ಲೇಖನದಲ್ಲಿ ತಿಳಿಯೋಣ..
NPCI (National Payments Corporation of India) Status Active ಚೆಕ್ ಮಾಡುವ ಪ್ರಕ್ರಿಯೆ?
Step:1: ಮೊದಲು ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ,ನಂತರ ಈ ನಿಮಗೆ https://fruits.karnataka.gov.in/OnlineUserLogin.aspx
“Citizen Registration”page ತೆರೆಯುತ್ತದೆ. ಆ ಆಯ್ಕೆ ಮೇಲೆ ಓತ್ತಿ. ನಂತರ ಮುಂದಿನ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡನಲ್ಲಿರುವ ಹಾಗೆ ಹೆಸರು ಮತ್ತು ಆಧಾರ್ ನಂಬರ್ ನಮೂದಿಸಿ, ನಂತರ I Agree ಆಯ್ಕೆ ಮೇಲೆ ಓತ್ತಿ Submit ಆಯ್ಕೆ ಮೇಲೆ ಓತ್ತಿ.
Step:2: ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು Mail.ID ಹಾಕಿ Proceed Option ಮೇಲೆ ಓತ್ತಿ.
Step:3: ನಂತರ ನಿಮ್ಮ ಮೊಬೈಲ್ ಗೆ ಬರುವ 5 ಸಂಖ್ಯೆಯ OTP Number ನಮೂದಿಸಿ Submit ಆಯ್ಕೆ ಮೇಲೆ ಓತ್ತಿ. ನಂತರ ನಿಮಗೆ ಬೇಕಾದ ಪಾಸವರ್ಡ ತಯಾರಿಸಿಕೊಳ್ಳಿ.
ಮೊಬೈಲ್ ನಂಬರ್ ಮತ್ತು Password ಹಾಗೂ captcha code ಹಾಕಿ ಲಾಗಿನ ಮಾಡಿಕೊಂಡು ಮುಂದುವರೆಯಿರಿ.
Step:4: ಮುಂದೆ ಈ ಪೇಜ್ ನಲ್ಲಿ Search ಮೇಲೆ ಓತ್ತಿದಾಗ ಅಲ್ಲಿ ಕಾಣುವ ಮೂರನೇ ಆಯ್ಕೆ ಮೇಲೆ NPCI Check ಗೋಚರಿಸುತ್ತದೆ. ಅಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ NPCI Active ಆಗಿದ್ದರೆ Status ಕೆಳಗೆ Active ಅಂತ ಗೋಚರಿಸುತ್ತದೆ. ಒಂದು ವೇಳೆ NPCI Active ಆಗದೇ ಇಲ್ಲವಾದರೆ NPCI inactive ಎಂದು ಇರುತ್ತದೆ.
ವಿಶೇಷ ಸೂಚನೆ: ಈ ತರ NPCI inactive ಅಂತ ಇರುವ ಎಲ್ಲಾ ರೈತರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಗೆ ತೆರಳಿ NPCI Mapping ಮತ್ತು ಆಧಾರ್ Mapping ಹಾಗೂ ನಿಮ್ಮ ಬ್ಯಾಂಕ್ ಖಾತೆಯನ್ನು ಚಾಲ್ತಿ ಮಾಡಿಕೊಳ್ಳಿ.