Friday, November 22, 2024

Aadhar joint/Link to RTC-ಆಧಾರನ್ನೂ ಪಹಣಿ/ RTC ಗೆ ಜೋಡಣೆ ಮಾಡದಿದ್ದರೆ ಈ ಸೌಲಭ್ಯಗಳು ಸಿಗುವುದಿಲ್ಲ.

ಹೌದು ಜನರೇ ಕಂದಾಯ ಇಲಾಖೆಯು ಕಳೆದ ಎರಡು ತಿಂಗಳಿಂದ ಪಹಣಿ/ RTC ಗೆ ಜೋಡಣೆ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನೂ ಹಲವಾರು ರೈತರು ತಮ್ಮ ತಮ್ಮ ಜಮೀನಿನ್ನು ಪಹಣಿ/ RTC ಗೆ ಜೋಡಣೆ ಮಾಡುತ್ತಿಲ್ಲ ಇದರಿಂದ ಏನೆಲ್ಲ ಸಮಸ್ಯೆಗಳು ಬರುತ್ತವೆ ಮತ್ತು ರೈತರಿಗೆ ಆಗುವ ನಷ್ಟಗಳು ಏನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಸರಕಾರದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೆಗೌಡ ಇವರು RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಲು ಜುಲೈ ತಿಂಗಳ ಗಡವು ನೀಡಿದ್ದಾರೆ. ಅಷ್ಟರೋಳಗೆ ಎಲ್ಲಾ ರೈತರು ಮತ್ತು ಸಾರ್ವಜನಿಕರು ತಮ್ಮ ತಮ್ಮ RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಿಸಿ ಕೊಳ್ಳಿ ಇಲ್ಲವಾದಲ್ಲಿ ನಿಮಗೆ ಸರಕಾರಿ ಯೋಜನೆಗಳ ಸೌಲಭ್ಯ ಸಿಗುವುದಿಲ್ಲ.

ಇನ್ನೂ ಎಷ್ಟು ಜನರ RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಲು ಬಾಕಿ ಇದೆ ಎಂಬ ಪಟ್ಟಿಯನ್ನು ಗ್ರಾಮ ಪಂಚಾಯತ್‌ ಅಥವಾ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ/ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಇರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದ್ದರೆ ಕೂಡಲೇ RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಸಿ ಕೊಳ್ಳಿ ಇಲ್ಲವಾದಲ್ಲಿ ಇಲಾಖೆಯ ಸೌಲಭ್ಯಗಳಿಂದ ವಂಚಿತರಾಗುತ್ತಿರಾ.

ಇದನ್ನೂ ಓದಿ: ಕಿಸಾನ್ ಸಮ್ಮಾನ್ ರೂ.2000  ಹಣ ಬಂದಿಲ್ಲವೇ, ಇಲ್ಲಿವೇ ಕಾರಣಗಳು!

RTC/ಪಹಣಿ ಗೆ ಆಧಾರ್‌ ಲಿಂಕ್‌ ಎಲ್ಲಿ ಮಾಡಿಸಬೇಕು?

ನಿಮ್ಮ ಗ್ರಾಮಗಳಲ್ಲಿರುವ ಗ್ರಾಮ ಲೆಕ್ಕಾಧಿಕಾರಿ/ಗ್ರಾಮ ಆಡಳಿತ ಅಧಿಕಾರಿ ಕಛೇರಿ ಭೇಟಿ ಮಾಡಿ RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡಿಸಬಹುದು ಈ ಕಾರ್ಯವನ್ನು ಇದೇ ತಿಂಗಳು ಜುಲೈ-2024 ರ ಒಳಗೆ ಮುಗಿಸಲು ಕಂದಾಯ ಸಚಿವರಿಂದ ಸಮಯ ನೀಡಲಾಗಿದೆ.

RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ಈ ಸೌಲಭ್ಯಗಳು ಸಿಗುವುದಿಲ್ಲ?

1)ಕಂದಾಯ ಇಲಾಖೆಯ ಪಿಂಚಣಿಗಳು.

2)ರೇಷನ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇರುತ್ತದೆ.

3)ನಿಮ್ಮ ಮಕ್ಕಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗುವುದಿಲ್ಲ.

4)ರೇಷನ್ ಕಾರ್ಡ್ ರದ್ದಾದರೇ ಗೃಹ ಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.

5)ಹಲವಾರು ಗ್ರಾಮ ಪಂಚಾಯತ್ ಸೌಲಭ್ಯಗಳು ಸಿಗುವುದಿಲ್ಲ.

6)ಸಹಕಾರಿ ಬ್ಯಾಂಕ್ ಮತ್ತು ರಾಷ್ರ್ಟೀಕೃತ ಬ್ಯಾಂಕ್ ಗಳಿಂದ ಕೃಷಿ ಸಾಲ ಸಿಗುವುದಿಲ್ಲ.

ಇದನ್ನೂ ಓದಿ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ರದ್ದು ಮಾಡಲಾದ ರೇಷನ್ ಕಾರ್ಡ್ ನೋಡುವ ವಿಧಾನ!

7)ಬೆಳೆ ಹಾನಿ ಪರಿಹಾರ ಸಿಗುವುದಿಲ್ಲ.

8)ಬೆಳೆ ವಿಮೆ ನಷ್ಟ ಪರಿಹಾರ ಸಿಗುವುದಿಲ್ಲ.

9)ಕೃಷಿ ಮತ್ತು ತೋಟಗಾರಿಕೆ ಸೌಲಭ್ಯಗಳು ಸಿಗುವುದಿಲ್ಲ.

10)ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಹಣ ಸಿಗುವುದಿಲ್ಲ.

11)ಅತೀವೃಷ್ಠಿ ಮತ್ತು ಬರ ಹಾಗೂ ಮಳೆ ಹಾನಿ ಪರಿಹಾರ ಸಿಗುವುದಿಲ್ಲ.

12)ವಿವಿಧ ಸರಕಾರಿ ಸೌಲಭ್ಯಗಳು ಸಿಗುವುದಿಲ್ಲ.

13)ಜಮೀನಿನ ಕೆಲಸಗಳಿಗೆ ಮುಂದೆ ಸಮಸ್ಯೆ ಉಂಟಾಗುತ್ತದೆ RTC/ಪಹಣಿ ಗೆ ಆಧಾರ್‌ ಲಿಂಕ್‌ ಮಾಡದಿದ್ದಲ್ಲಿ.

ಇತ್ತೀಚಿನ ಸುದ್ದಿಗಳು

Related Articles