Friday, September 20, 2024

Aadhar card Update : ಆಧಾರ್‍ ನವೀಕರಣ ಮಾಡಲು Website link ಬಿಡುಗಡೆ:

ಆತ್ಮೀಯರೇ…ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು ವೆಬ್ಸಿಟ್ ಲಿಂಕ್ ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಆಧಾರ ಕಾರ್ಡ ಅಪಡೇಟ್( ನವೀಕರಣ) (Aadhar card update)ಮಾಡಿಕೊಳ್ಳಬಹುದಾಗಿದೆ. ಹೌದು, ಆಧಾರ್‍ ಕಾರ್ಡ ಯಾವುದೇ ಸರ್ಕಾರಿ, ಮತ್ತು ಅರೆಸರ್ಕಾರಿ ಯೋಜನೆಗಳ ಫಲಾನುಭವಿಗಳು ಆಗಲು ಮುಖ್ಯವಾಗಿ ಆಧಾರ್‍ ಕಾರ್ಡ ಕಡ್ಡಾಯ ಗೊಳಿಸಲಾಗಿದೆ. ಹಾಗಾಗಿ ಈ ಒಂದು ಆಧಾರ್‍ ಅಪಡೇಟ್ ಮಾಡಿಸುವುದು ಅತೀ ಅವಶ್ಯಕವಾಗಿದೆ.

ನಿಮ್ಮ ಆಧಾ‌ರ್ ಕಾರ್ಡ ಅನ್ನು ಮಾಡಿಕೊಂಡು 10 ವರ್ಷ ಪೂರೈಸಿದರು ಇನ್ನು ಮುಂದೆ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ನಿಮ್ಮ ಆಧಾರ್ ಕಾರ್ಡ ನೈಜನೆಯನ್ನು ಖಚಿತಪಡಿಸಲು ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳುವುದನ್ನು ಯುಐಡಿಎಐ(UIDAI)- ಆಧಾರ್ ಕಾರ್ಡ ಪ್ರಾಧಿಕಾರದಿಂದ ಕಡ್ಡಾಯಗೊಳಿಸಲಾಗಿದ್ದು ಆಧಾರ್ ಕಾರ್ಡ ನ ಅಧಿಕೃತ ವೆಬ್ಬೆತ್ ಭೇಟಿ ಮಾಡಿ 14 ಮಾರ್ಚ 2024ರ ಒಳಗಾಗಿ
ಉಚಿತವಾಗಿ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: PM Kisan ಹಣ ಜಮಾ ಆಗಲು NPCI Active ಕಡ್ಡಾಯ ಚೆಕ್ ಮಾಡಿ ಈ ಲಿಂಕ್ ಮೇಲೆ ಓತ್ತಿ ಪರಿಕ್ಷೀಸಿಕೊಳ್ಳಿ.

Why Aadhar card Renewal? ಆಧಾರ್ ನವೀಕರಣ ಯಾಕೆ ?
ಆಧಾರ್ ಕಾರ್ಡ ಹೊಂದಿ ಹತ್ತು(10) ವರ್ಷ ಅಗಿರುವವರು ತಾವು ನೋದಣಿ ಮಾಡಿಕೊಂಡಿರುವ ಸಮಯದಲ್ಲಿ ನಮೂದಿಸಿರುವ ವಿಳಾಸ ಮತ್ತು ತಮ್ಮ ಗುರುತಿನ ವಿವರವನ್ನು ಕಡ್ಡಾಯವಾಗಿ ನವೀಕರಿಸಲು (UIDAI) ನಿಂದ ಸೂಚಿಸಲಾಗಿದೆ.ಈ ಪ್ರಕ್ರಿಯೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಲು ಮತ್ತು ಸಹಾಯಧನ ಪಡೆಯಲು ಅಗುವುದಿಲ್ಲ ಅದರಿಂದ ಇಂದೇ ಹತ್ತಿರದ ಗ್ರಾಮ ಒನ್ ಕೇಂದ್ರಕ್ಕೆ ಅಥವಾ ನಾಡಚಚೇರಿ, ಅಂಚೆ ಕಚೇರಿಗಳಲ್ಲಿ ನವೀಕರಣ ಮಾಡಿಕೊಳ್ಳಿ.

ರಾಜ್ಯದಲ್ಲಿ ಆಧಾ‌ರ್ ಕಾರ್ಡ ಹೊಂದಿ 10 ವರ್ಷ ಮೇಲ್ಪಟ್ಟ ನಾಗರೀಕರು ಆಧಾರ್ ನೋಂದಣಿ ಸಮಯದಲ್ಲಿ ನಮೂದಿಸಿದ ವಿಳಾಸದಲ್ಲಿ ಈಗಲೂ ಇದ್ದರೂ ಸಹಿತ ಅಂತಹ ಆಧಾರ ಕಾರ್ಡಗಳು ನಿಷ್ಕ್ರಿಯವಾಗುತ್ತಿರುವುದರಿಂದ 11 ವರ್ಷ ಮೇಲ್ಪಟ್ಟ ಆಧಾರ್ ಕಾರ್ಡ ಹೊಂದಿದವರು ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ (Proof of Identity) ಮತ್ತು ವಿಳಾಸದ ದಾಖಲೆಗಳನ್ನು (Proof of Address) ಆಧಾರ ನೋಂದಣಿ ಕೇಂದ್ರದಲ್ಲಿ ಆಧಾ‌ರ್ ಪ್ರಾಧಿಕಾರ(UIDAI) ರವರು ಅಭಿವೃದ್ಧಿಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣಕ್ಕೆ (Aadhar card update) ಅವಕಾಶ ಕಲ್ಪಿಸಲಾಗಿರುತ್ತದೆ.

ಇದನ್ನೂ ಓದಿ: PM kisan Scheme 16 Beneficiaries list: ಪಿ ಎಂ ಕಿಸಾನ್ 16 ನೇ ಕಂತಿನ ಅರ್ಹ ಫಲಾನುಭವಿಗಳ ಪಟ್ಟಿ:

Last date: ಉಚಿತ ನವೀಕರಣಕ್ಕೆ ಕೊನೆಯ ದಿನಾಂಕ:
ಯುಐಡಿಎಐ(UIDAI)-ರವರು ಅಧಿಕೃತ ವೆಬ್ಬೆಟ್ Website ನಲ್ಲಿ ನಮೂದಿಸಿರುವ ಮಾಹಿತಿಯನ್ವಯ ಉಚಿತವಾಗಿ ಸಾರ್ವಜನಿಕರು ಆಧಾರ್ ಕಾರ್ಡ ನವೀಕರಣ ಮಾಡಿಕೊಳ್ಳಲು 14 ಮಾರ್ಚ 2024 ಕೊನೆಯ ದಿನಾಂಕ ನಿಗಧಿಪಡಿಸಲಾಗಿದೆ.

Required Documents: ಆಧಾರ್ ಅಪ್ ಡೇಟ್ (Aadhar card update) ಮಾಡಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬಹುದು?

1) ಪಡಿತರ ಚೀಟಿಗಳು (Ration card) ಅಥವಾ ಮತದಾರರ ಗುರುತಿನ ಚೀಟಿಗಳು,

2) ಸರ್ಕಾರ ನೀಡಿದ ಗುರುತಿನ ಚೀಟಿಗಳು / ವಿಳಾಸದ ಪುರಾವೆಗಳು ಮತ್ತು ಭಾರತೀಯ ಪಾಸ್ಪೋರ್ಟ್ಗಳು ಗುರುತಿನ ಮತ್ತು ವಿಳಾಸ ಎರಡಕ್ಕೂ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ.

3) ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಸೆಕೆಂಡರಿ ಅಥವಾ ಸೀನಿಯರ್ ಸೆಕೆಂಡರಿ ಶಾಲಾ ಅಂಕಪಟ್ಟಿ /ಛಾಯಾಚಿತ್ರವನ್ನು ಹೊಂದಿರುವ ಶಾಲಾ ಬಿಡುವ ಪ್ರಮಾಣಪತ್ರ, ಸರ್ಕಾರ ನೀಡಿದ ಗುರುತಿನ ಚೀಟಿ / ಪ್ರಮಾಣಪತ್ರ – ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತವೆ. ವಿದ್ಯುತ್ / ನೀರು / ಗ್ಯಾಸ್ ಬಿಲ್ (ಕಳೆದ 3 ತಿಂಗಳು), ಬ್ಯಾಂಕ್ / ಪೋಸ್ಟ್ ಆಫೀಸ್ ಪಾಸ್ಟುಕ್, ಬಾಡಿಗೆ / ಗುತ್ತಿಗೆ / ರಜೆ ಮತ್ತು ಪರವಾನಗಿ ಒಪ್ಪಂದವು ವಿಳಾಸದ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ.

ಈ ಮೇಲೇ ಕಾಣಿಸಿರುವ ಯಾವುದಾದ 2 ದಾಖಲೆಗಳನ್ನು ಅನೈನ್ ಮೂಲಕ ಅಪ್ಲೋಡ್ ಮಾಡಿ ನಿಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು Website link ಬಿಡುಗಡೆ:
ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಧಾ‌ರ್ ಪ್ರಾಧಿಕಾರದ(UIDAI) https://uidai.gov.in/kn/ ಅಧಿಕೃತ ವೆಬ್ಬೆಟ್ ಭೇಟಿ ಮಾಡಿ ತಮ್ಮ ಮೊಬೈಲ್ ನಲ್ಲೇ ಅಧಾ‌ರ್ ಕಾರ್ಡ ನವೀಕರಣ ಮಾಡಿಕೊಳ್ಳಬಹುದು.

ಹಂತ -1: ಮೊದಲು Aadhar update link ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಪ್ರಾಧಿಕಾರದ(UIDAI) ಅಧಿಕೃತ ವೆಬೈಟ್ ಭೇಟಿ ಮಾಡಬೇಕು ತದನಂತರ ಅರ್ಜಿದಾರರ ಅಧಾರ್ ಕಾರ್ಡ ನಂಬ‌ರ್ ಮತ್ತು ಕ್ಯಾಪ್ಟ (Captcha Code ) ಕೋಡ್ ಅನ್ನು ನಮೂದಿಸಿ “Login With OTP ಅನ್ನು ನಮೂದಿಸಬೇಕು. ಇದಾದ ಬಳಿಕ ನಿಮ್ಮ ಮೊಬೈಲ್ ಗೆ ಬರುವ OTP ಅನ್ನು ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಹಂತ -2: ನಂತರ ಎರಡು ಬಾರಿ ಬರುವ “Next” ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ವಿಳಾಸದ ವಿವರ ತೋರಿಸುತ್ತದೆ ಈ ವಿವರವನ್ನು ಒಮ್ಮೆ ಸರಿಯಾಗಿದಿಯಾ? ಎಂದು ಚೆಕ್ ಮಾಡಿ I verify that the above details are correct” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತೆ “Next” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಹಂತ -3: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ದೃಢೀಕರಣಕ್ಕೆ ಪಾನ್ ಕಾರ್ಡ(Pan card) ಮತ್ತು ಗುರುತಿನ ಚೀಟೀಯ (Voter ida) PDF
ಪೈಲ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Next” ಬಟನ್ ಮೇಲೆ ಕ್ಲಿಕ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ ಅಪಡೇಟ್ ಮಾಡಿಕೊಳ್ಳಬೇಕಾಗಿರುತ್ತದೆ.

ಈ ಒಂದು ಪ್ರಕ್ರಿಯೇ ಮಾಡಿಕೊಂಡರೇ ಮಾತ್ರ ನಿಮ್ಮ ಆಧಾರ್‍ ಕಾರ್ಡ ಬಳಕೆ ಮುಂದೆ ಸುಲಭವಾಗುತ್ತದೆ. ಇಲ್ಲ ಅಂದರೇ ಸರ್ಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ಸುದ್ದಿಗಳು

Related Articles