ಆಧಾರ ಕಾರ್ಡ ಅಪಡೇಟ್ ಮಾಡಲು ದಿನಾಂಕ ವಿಸ್ತರಣೆ: ಕೊನೆಯ ದಿನಾಂಕ ಯಾವಾಗ? ನಿಮ್ಮ ನಿಮ್ಮ ಮೊಬೈಲ್ ನಲ್ಲಿ ಮಾಡಿಕೊಳ್ಳುವುದು ಹೇಗೆ? ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಆತ್ಮೀಯ ಸ್ನೇಹಿತರೆ ಇತ್ತೀಚೀನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಇಲಾಖೆಯ ಯೋಜನೆಗಳ ಫಲಾನುಭವಿಗಳು ಆಗಲು ಮುಖ್ಯವಾಗಿ ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಗಳಲ್ಲಿ ಒಂದಾಗಿದೆ. ನಾವು ಎಲ್ಲ ಹಣಕಾಸು ಕಾರ್ಯಕ್ಕೂ, ಇತರೆ ಕಾರ್ಯಗಳಿಗೂ ಆಧಾರ್ ಕಾರ್ಡ್ ಪ್ರತಿಯನ್ನು ನೀಡಬೇಕಾಗುತ್ತದೆ. ಈ ದಾಖಲೆಯನ್ನು, ಆದಾಯ ಪುರಾವೆ, ವಿಳಾಸ ಪುರಾವೆಯಾಗಿ ಬಳಕೆ ಮಾಡಲಾಗುತ್ತದೆ. ಆದರೆ ನೀವು 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಮುಖ್ಯವಾದ ವಿಷಯವಾಗಿದೆ.
ಇದಕ್ಕಾಗಿ ಯುಐಡಿಎಐ (UIDAI) ನಿಮಗೆ ಮತ್ತೆ ಉಚಿತ ಸೇವೆಯನ್ನು ನೀಡಲು ಆರಂಭಿಸಿದೆ.
ಆಧಾರ್ ಕಾರ್ಡ್ ಬಳಸಿಕೊಂಡು ಸರ್ಕಾರದ ಯಾವುದೇ ಯೋಜನೆ ಸದುಪಯೋಗ ಪಡೆಯುವಲ್ಲಿ ತೊಂದರೆ ಉಂಟಾಗಬಾರದು ಎಂದಾದರೆ ನೀವು ಆಧಾರ್ ಅನ್ನು ಸಮಯಕ್ಕೆ ಸರಿಯಾಗಿ ಅಪ್‌ಡೇಟ್ ಮಾಡಿಕೊಳ್ಳುವುದು ಅವಶ್ಯಕವಾಗಿರುತ್ತದೆ. ಜನರು ನೀಡುವ ಡೇಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) (UIDAI) ಆಧಾರ್ ಸಂಖ್ಯೆಯನ್ನು ಹೊಂದಿರುವ ಎಲ್ಲಾ ವ್ಯಕ್ತಿಗಳು ದಾಖಲಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳಿಗೊಮ್ಮೆ ಆಧಾರ್‌ನಲ್ಲಿ ತಮ್ಮ ದಾಖಲೆಗಳನ್ನು ಅಪ್‌ಡೇಟ್ ಮಾಡಲು ತಿಳಿಸಿದೆ.
ಹೆಚ್ಚುವರಿಯಾಗಿ, ಯುಐಡಿಎಐ (UIDAI) ಇದಕ್ಕಾಗಿ ಇಂಟರ್‌ನೆಟ್ ಬಳಕೆದಾರರು ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಯುಐಡಿಎಐ (UIDAI) ಈ ಉಚಿತ ಸೇವೆಯನ್ನು ವಿಸ್ತರಣೆ ಮಾಡಿದೆ. ಈ ಹಿಂದೆ ಈ ಉಚಿತ ಸೇವೆ ಪಡೆಯಲು ಕೊನೆಯ ದಿನಾಂಕ ಜೂನ್ 14 ಆಗಿತ್ತು. ಆದರೆ ಈಗ ಅದನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಲಾಗಿದೆ.
Aadhaar Card: ಗಮನಿಸಿ, ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಕೊನೆಯ ಅವಕಾಶ!
ನಿಮ್ಮ ಮೊಬೈಲ್ ನಲ್ಲಿ ಅಪಡೇಟ್ ಮಾಡುವುದು ಹೇಗೇ? :
ಹಂತ 1: ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (https://myaadhaar.uidai.gov.in/verifyAadhaar ಇಲ್ಲಿ ಕಾಣಿಸಿರುವ ಲಿಂಕ್ ಮೇಲೆ ಓತ್ತಿ ನಂತರ ಆಧಾರ ಪ್ರಾಧಿಕಾರದ ವೆಬ್ಸೈಟ್ ಕಾಣುತ್ತದೆ. ಮುಂದೆ “ಲಾಗಿನ್” ಕಾಣುವ ಬಟನ್ ಮೇಲೆ ಓತ್ತಿ . ನಂತರ ಆಧಾರ್ ಕಾರ್ಡ್ ನಂಬರ್ ಮತ್ತು ಅದರ ಕೆಳಗೆ ಇರುವ ಕ್ಯಾಪ್ಪರ್ ಹಾಕಿSend OTP ಮೇಲೇ ಓತ್ತಿ
ಹಂತ 2 : Send OTP ಮೇಲೆ ಕ್ಲಿಕ್ ಮಾಡದ ,ನಂತರ ನಿಮ್ಮ ಆಧಾರ್ ಕಾರ್ಡ ಜೋಡಣೆಯಾದ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ ಅದನ್ನು ನಮೂದಿಸಿ
ಹಂತ 3:‘ ನಂತರ ಈ ಒಂದು ಪುಟದಲ್ಲಿ “Document Upadate”ಮೇಲೆ ಓತ್ತಿ ಇದಾದ ಮೇಲೆ ಮುಂದೆ ಅಥವಾ Next ಅಂತ ಕಾಣುವ ಮೇಲೆ ಓತ್ತಿ.
ಹಂತ 4 : ಈ ಪೇಜ್ ನಲ್ಲಿ ನಿಮ್ಮ ಆಧಾರ ಕಾರ್ಡ ನಲ್ಲಿ ಇರುವಂತೆ ಹೆಸರು,ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಕಾಣುತ್ತದೆ.ಅಲ್ಲಿ ಕಾಣುವ ಎಲ್ಲಾ ಮಾಹಿತಿ ಸರಿ ಇದ್ದಲ್ಲಿ I verify that above details are correct” ಅಂತ ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿ Next Option ಮೇಲೆ ಓತ್ತಿ ಮುಂದೆವರೆಯಬಹುದು.
ಹಂತ 5: ಈ ಒಂದು ಪೇಜ್ ನಲ್ಲಿ ನಿಮ್ಮ ಗುರುತಿನ ಪುರಾವೆ ಮತ್ತು ಅಡ್ರೆಸ್ ಪುರಾವೆ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ಮುಖ್ಯವಾಗಿ ನಿಮ್ಮ ದಾಖಲಾತಿಗಳ ಸೈಜ್ ಈ ರೀತಿ ಇರಬೇಕು( Document size should be less than 2 MB Supported file Formats are: JPEG,PNG and PDF) ಕೊನೆಯಲ್ಲಿ ಕಾಣುವ Next ಆಯ್ಕೆಯ ಮೇಲೆ ಕ್ಲಿಕ್ ಮಾಡಿ submit ಓತ್ತಿ.
ಇನ್ನೂ ಹೆಚ್ಚಿನ ವಿಷಯ ಪಡೆಯಲು ಆಧಾರ್ ಸಹಾಯವಾಣಿ ಸಂಖ್ಯೆ: Aadhar helpline Number 1947 ಕರೆ ಮಾಡಿ
ಇದನ್ನೂ ಓದಿ:ಅಡಿಕೆ ಬೆಳೆಯಲ್ಲಿ ಕೊಳೆರೋಗದ ಭಾದೆಗೆ ಇಲಾಖೆಯ ಸಲಹೆ: ಅಡಿಕೆ ಕೊಳೆರೋಗದ ಲಕ್ಷಣಗಳೇನು? ಹಾಗೂ ಹತೋಟಿ ಕ್ರಮಗಳು? ಸಂಪೂರ್ಣ ಮಾಹಿತಿ.