ಆತ್ಮೀಯ ಓದುಗರೇ, ಈ ಆಧುನಿಕ ಕಾಲಘಟ್ಟದಲ್ಲಿ ಎಲ್ಲರಿಗೂ ಅವರದ್ದೇ ಆದ ಆಸೆ ಆಕಾಂಕ್ಷಿಗಳು ಇರುತ್ತವೆ, ಅದರಲ್ಲಿ ಇದು ಕೂಡಾ ಒಂದು ಏನೆಂದರೆ, ಸುಖ ಮತ್ತು ನೆಮ್ಮದಿ ಜೀವನ ನಡೆಸಲು ಒಂದು ಸ್ವಂತ ಜಮೀನು ತೆಗೆದುಕೊಳ್ಳಬೇಕು,ಆ ಜಾಗದಲ್ಲಿ ಮನೆ ಕಟ್ಟಿಕೊಂಡು ಪಕ್ಕದಲೇ, ಕೃಷಿ ಮತ್ತು ಕೃಷಿಗೆ ಸಂಬಂದಿಸಿದಂತೆ ಕೃಷಿಯೇತರ ಚಟುವಟಿಕೆಗಳನ್ನು ಮಾಡಿಕೊಂಡು ನೆಮ್ಮದಿ ಜೀವನ ನಡೆಸಬೇಕು ಅಂತ ಇರುತ್ತೆ. ಅದಕ್ಕೆ ಅನೇಕ ಜನರು ಮತ್ತು ಅದರಲ್ಲೂ ಯುವಕರು ದೂರದ ನಗರ ಪ್ರದೇಶಕ್ಕೆ ಹೋಗಿ ಕಷ್ಟಪಟ್ಟು ದುಡಿದು ಬಂದ ಹಣದಿಂದ ಅಲ್ಪಸ್ವಲ್ಪ ಜಮೀನು ಖರೀದಿಸುತ್ತಾರೆ. ಅಥವಾ ಯಾವುದು ವ್ಯಾಪಾರ ಕೇಂದ್ರ ತೆರೆಯಲು ಬೇರೆ ಯಾವುದೋ ಉದ್ದೇಶದಿಂದ ಅಥವಾ ಕಾರಣಕ್ಕೆ ಖರೀದಿಸಿದರು, ಆ ಜಮೀನಿನ ದಾಖಲೆಗಳ ಪರೀಶಿಲನೆ ಬಹಳ ಮುಖ್ಯ. ಈ ದಿಶೆಯಲ್ಲಿ ಈ ಲೇಖನದಲ್ಲಿ ನಾವು ಜಮೀನು ಖರೀದಿಸುವ ಮುನ್ನ ಯಾವೆಲ್ಲಾ ಕಾಗದ ಪತ್ರಗಳು ಸರಿಯಾಗಿ ಇರಬೇಕು ಅಂತ ಸಂಪೂರ್ಣ ಮಾಹಿತಿ ನೀಡಿರುತ್ತೇವೆ. ಆದಷ್ಟೂ ಈ ಲೇಖನವನ್ನು ನಿಮ್ಮ ಪರಿಚಯದಾರರಿಗೆ ಹಂಚಿಕೊಳ್ಳುವ ಮೂಲಕ ನೇರವಾಗುತ್ತಿರಾ ಎಂದು ಭಾವಿಸುತ್ತೇವೆ.
ಇದನ್ನೂ ಓದಿ: Krishimela – 2025: ಧಾರವಾಡ ಕೃಷಿ ಮೇಳದ ವಿಶೇಷತೆಗಳೇನು?
ಇದಕ್ಕೂ ಮೊದಲು ಎಲ್ಲರಿಗೂ ಆಸ್ತಿ ನೋಂದಣಿ ಇದ್ದರೆ, ಅವರು ಅದರ ಮಾಲೀಕರು ಎಂದು ತಿಳಿದಿತ್ತು ಆದರೆ ನ್ಯಾಯಾಲಯದ ತೀರ್ಪಿನ ಪ್ರಕಾರ, ಆಸ್ತಿಯ ಸಂಪೂರ್ಣ ಕಾನೂನುಬದ್ಧ ಮಾಲೀಕತ್ವಕ್ಕೆ ನೋಂದಣಿ ಮಾತ್ರ ಸಾಕಾಗುವುದಿಲ್ಲ ಮತ್ತು ಇದೇ ಪರಿಪೂರ್ಣ ಅಲ್ಲ. ಇದಕ್ಕಾಗಿ, ನೀವು ಕಾನೂನುಬದ್ಧವಾಗಿ ಸಂಪೂರ್ಣ ಮಾಲೀಕತ್ವವನ್ನು ಹೊಂದಿರಬೇಕು. ಇದು ಆಸ್ತಿ ವಿವಾದಗಳು ಮತ್ತು ವಂಚನೆ ಪ್ರಕರಣಗಳನ್ನು ಕಡಿಮೆ ಮಾಡುತ್ತದೆ ಎಂದು ನ್ಯಾಯಾಲಯ ಒಪ್ಪುತ್ತದೆ.ಆಸ್ತಿ ವಹಿವಾಟುಗಳನ್ನು ನೋಂದಣಿ ಆಧಾರದ ಮೇಲೆ ಮಾತ್ರ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿರುತ್ತದೆ.
ಯಾರಾದರೂ ಆಸ್ತಿಯ ನೋಂದಣಿಯನ್ನು ಮಾತ್ರ ಹೊಂದಿದ್ದರೆ ಮತ್ತು ಅದನ್ನು ಬೇರೆಯವರು ಆಕ್ರಮಿಸಿಕೊಂಡಿದ್ದರೆ ಅಥವಾ ಆ ಆಸ್ತಿಯ ಮೇಲಿನ ಹಕ್ಕುಗಳ ಬಗ್ಗೆ ಯಾವುದೇ ರೀತಿಯ ಅಪೂರ್ಣ ದಾಖಲೆಗಳು ಇದ್ದರೆ, ಅಂದರೆ ಭೂಮಿಗೆ ಸಂಬಂದಿಸಿದಂತೆ ಸಮಸ್ಯೆಗಳು ಇದ್ದರೆ, ಮಾಲೀಕತ್ವದ ಹಕ್ಕುಗಳನ್ನು ಪ್ರಶ್ನಿಸಬಹುದು ಎಂದು ನ್ಯಾಯಾಲಯವು ತಿಳಿಸುತ್ತದೆ. ಈಗ ನೀವು ಆಸ್ತಿಯನ್ನು ಖರೀದಿಸಿದರೆ, ಬಹಳ ಜಾಗರೂಕರಾಗಿರಬೇಕು ಮತ್ತು ಆಸ್ತಿಯ ಎಲ್ಲಾ ಇತರ ದಾಖಲೆಗಳನ್ನು ಪರೀಕ್ಷಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಕಾನೂನು ಸಂಕಷ್ಟವನ್ನು, ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಹೌದು.. ಸಾರ್ವಜನಿಕರು ಜಮೀನು ಕೊಳ್ಳುವಾಗ ಕೆಲ ಮುಖ್ಯ ದಾಖಲೆಗಳನ್ನು ಪರಿಶೀಲಿಸಲೇಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನೀವು ಕಾನೂನು ಸಂಕಷ್ಟಕ್ಕೆ ಸಿಲುಕಿ, ತೊಂದರೆಗೆ ಒಳಗಾಗಬೇಕಾಗುತ್ತದೆ. ಹೀಗೆ ಆಗಬಾರದು ಅಂದರೇ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ. ಅವುಗಳು ಸರಿಯಾಗಿದ್ದರೇ ಮಾತ್ರವೇ ಜಮೀನು ಖರೀದಿಸಲು ಮುಂದಾಗಿ ಮಿತ್ರರೇ. ಇಲ್ಲವಾದಲ್ಲಿ ಆ ಜಮೀನು ಖರೀದಿಗೆ ಕಾನೂನು ತೊಡಕಿದೆ ಎಂದೇ ಭಾವಿಸಕೊಳ್ಳಬೇಕಾಗುತ್ತದೆ.
ಇದನ್ನೂ ಓದಿ: Gruhalaxmi New Update: ಗೃಹಲಕ್ಷ್ಮೀ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್:
ಯಾವ ಯಾವ ದಾಖಲೆಗಳು:
ಆರ್ ಟಿ ಸಿ (RTC)
ಆಕಾರ್ಬಂದ್
ಇಸಿ (EC)
ಎಂ ಆರ್(MR)
ಸೇಲ್ ಡೀಡ್ (Sale Deed)
ಮದರ್ ಡೀಡ್ (Mother Deed)
ಫಾರ್ಮ್-10 (Form-10)
11ಇ ಸ್ಕೆಚ್ (11E sketch)
ಸರ್ವೆ ಸ್ಕೆಚ್(Survey Sketch)
ಟಿಪ್ಪಣಿ
ವಂಶವೃಕ್ಷ
ಪಿಟಿಸಿಎಲ್ (PTCL)
ಸಾಗುವಳಿ ಚೀಟಿ
ಇದನ್ನೂ ಓದಿ: ಟ್ರಾಕ್ಟರ್ ಟ್ರೋಲಿ ಖರೀದಿಸಲು ಸಹಾಯಧನ
ಆಗಿದ್ದರೇ ಈ ದಾಖಲೆಗಳ ಅರ್ಥ ತಿಳಿಯೋಣ:
RTC: ಆರ್ ಟಿ ಸಿ ಅಂದರೇ (RTC) Record of Rights, Tenancy, and Crops ಎಂದು ಕರೆಯುತ್ತಾರೆ. ಪಹಣಿ ಅಥವಾ ಉತಾರ ಎಂಬುದಾಗಿಯೂ ಕರೆಯುವಂತ ಈ ದಾಖಲೆಯಲ್ಲಿ ಖರಬ್ ಮತ್ತು ಸಾಲಗಳು, ಹಕ್ಕು ಬದಲಾವಣೆ, ಮಾಲೀಕರು ಎಷ್ಟು ಜನ ಎಂಬುದನ್ನು ನೀವು ತಿಳಿಸುವ ದಾಖಲೆಯಾಗಿರುತ್ತದೆ.
ಆಕಾರ್ಬಂದ್ : ಆಕಾರ್ಬಂದ್ ಎನ್ನುವ ದಾಖಲೆಯಲ್ಲಿ ಜಮೀನು ಖರೀದಿಸುವವರಿಗೆ ಜಮೀನಿನ ಸರಿಯಾದ ವಿಸ್ತೀರ್ಣ ಎಷ್ಟು ಎನ್ನುವುದು ದಾಖಲಾಗಿರುತ್ತದೆ. ಈ ಮಾಹಿತಿ ಪರಿಶೀಲಿಸಿ ಜಮೀನು ವಿಸ್ತೀರ್ಣ ಎಷ್ಟು ಎಂಬುದನ್ನು ತಿಳಿದು ಖರೀದಿಸುವುದು ಮುಂದಿನ ತೊಡಕುಗಳನ್ನು ತಪ್ಪಿಸಿಕೊಳ್ಲುವುದಕ್ಕೆ ಒಳ್ಳೆದು.
EC – Encumbrance Certificate: ಇಸಿ ಎಂದು ಕರೆಯಲಾಗುವಂತ ಇಸಿಯಲ್ಲಿ ಜಮೀನಿನ ಮೇಲೆ ಸಾಲ ತೆಗೆದುಕೊಂಡಿದ್ದರೇ ತಿಳಿಯಬಹುದು. ಒಂದು ವೇಳೆ ಸಾಲ ಇದ್ದರೆ ಖರೀದಿಯ ಬಗ್ಗೆ ಎಚ್ಚರಿಕೆಯ ನಡೆಯನ್ನು ನೀವು ತೋರಬೇಕಾಗುತ್ತದೆ.
M R : Mutation Record ಎಂದು ಕರೆಯಲಾಗುತ್ತದೆ. ಮ್ಯೂಟೇಷನ್ ರೆಕಾರ್ಡ್ (M R) ನಲ್ಲಿ ಜಮೀನಿನ ಹಕ್ಕು ಬದಲಾವಣೆ ಯಾರಿಂದ ಯಾರಿಗೆ ಎಷ್ಟು ಬಾರಿ ಆಗಿದೆ ಎಂಬುವುದರ ಸಂಪೂರ್ಣಮಾಹಿತಿ ಒಳಗೊಂಡಿರುತ್ತದೆ. ಇದನ್ನು ನೀವು ಜಮೀನು ಖರೀದಿಯ ಸಂದರ್ಭದಲ್ಲಿ ಪರಿಶೀಕ್ಷಿಸಿಕೊಳ್ಳುವುದು ಉತ್ತಮ.
ಸೇಲ್ ಡೀಡ್ (Sale Deed) : ಅಂದರೆ ಕ್ರಯಪತ್ರ. ನೀವು ಖರೀದಿಸುತ್ತಿರುವಂತ ಜಮೀನಿನ ಕ್ರಮವು ಈ ಮುಂಚೆ ಯಾರ ಹೆಸರಿನಲ್ಲಿ ಇತ್ತು. ಹಾಗೆ ಚೆಕ್ಕುಬಂದಿ ವಿವರಗಳು ಇರುತ್ತವೆ. ಚೆಕ್ಕುಬಂದಿ ಮಾಹಿತಿ ಅನುಸಾರ ಜಮೀನು ಇದೆ. ಯಾವ ದಿಕ್ಕಿನಲ್ಲಿ ಯಾವ ವ್ಯಕ್ತಿಯ ಜಮೀನು ಇದೆ ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿಯಬೇಕಾಗುತ್ತದೆ.
ಮದರ್ ಡೀಡ್: (Mother Deed) ಅಂದರೆ ಮೂಲ ಪತ್ರ ಎಂದೇ ಕರೆಯಲಾಗುತ್ತದೆ. ನೀವು ಖರೀದಿಸುವಂತ ಜಮೀನಿನ ಮೂಲ ಮಾಲೀಕರು ಯಾರು.? ಯಾರಿಂದ ನೀವು ಖರೀದಿಸುವರಿಗೆ ಬಂದಿದೆ ಎಂದೆಲ್ಲವನ್ನು ತಿಳಿದುಕೊಳ್ಳಬಹುದಾಗಿದೆ.
ಫಾರ್ಮ್-10 : (Farm 10) – ಇದರಲ್ಲಿ ಒಂದು ಸರ್ವೆ ನಂಬರಿನಲ್ಲಿ ಇರುವಂತ ನಿರ್ಧಿಷ್ಟ ಹಿಸ್ಸಾ ಜಮೀನಿನ ವಿವರ ಸಿಗುತ್ತದೆ. ಇದನ್ನು ನೀವು ಪರಿಶೀಲಿಸುವುದು ಒಳಿತಾಗಿದೆ.
11ಇ ಸ್ಕೆಚ್ :(11E Sketch)- ಈ ದಾಖಲೆಯಲ್ಲಿ ಒಂದು ಸರ್ವೆ ನಂಬರಿನ ಜಮೀನಿಂದ ವಿಭಾಗ ಆಗಿರುವ ಭಾಗದ ಬಗ್ಗೆ ತಿಳಿಯಬಹುದು.
ಸರ್ವೆ ಸ್ಕೆಚ್ (Survy Sketch)– ಇದರಿಂದ ಜಮೀನಿನ ನಕ್ಷೆ ಜೊತೆಗೆ ಆ ಜಮೀನಿಗೆ ಇರುವಂತ ಬಂಡಿ ದಾರಿ, ಕಾಲು ದಾರಿ ಯಾವ ಕಡೆ ಇದೆ ಎನ್ನುವಂತ ಮಾಹಿತಿಯನ್ನು ನೀವು ತಿಳಿಯಬಹುದಾಗಿದೆ.
ಟಿಪ್ಪಣಿ – ಒಂದು ಸರ್ವೆ ರೆಕಾರ್ಡ್ ನಲ್ಲಿನ ದಾಖಲೆಗಳಲ್ಲಿ ಟಿಪ್ಪಣಿ ಕೂಡ ಬರೆಯಲಾಗಿರುತ್ತದೆ. ಅದರಲ್ಲಿ ಜಮೀನಿನ ಆಕಾರ, ಅಂಕಿ ಸಂಖ್ಯೆ, ಗುಣ ಲಕ್ಷಣ ತಿಳಿಯಬಹುದಾಗಿದೆ.
ವಂಶವೃಕ್ಷ– ಇದರಿಂದ ನೀವು ಭೂ ಮಾಲೀಕರು ಎಷ್ಟು ಜನ ಇದ್ದಾರೆ.? ಯಾರಿಗೆಲ್ಲ ಹಕ್ಕಿದೆ ಎನ್ನುವಂತ ಮಾಹಿತಿಯನ್ನು ತಿಳಿಯಬಹುದಾಗಿದೆ. ಇದನ್ನು ನೀವು ಗಮನಿಸುವುದು ಬಹುಮುಖ್ಯವಾಗಿದೆ.
PTCL ಅಂದರೆ Prevention of Transfer Certain Land Act ಎಂದು ಕರೆಯಲಾಗುತ್ತದೆ. ಈ ದಾಖಲೆಯ ಅನುಸಾರ ನೀವು ಖರೀದಿಸುವಂತ ಜಮೀನು ಎಸ್ಸಿ, ಎಸ್ಟಿ ವರ್ಗದವರಿಗೆ ಸೇರಿದ್ದರ ಬಗ್ಗೆ ಮಾಹಿತಿ ತಿಳಿಯಲಿದೆ.
ಇದನ್ನೂ ಓದಿ: Good News: ಹೊಲ,ಗದ್ದೆಗೆ ಹೋಗುವ ಕಾಲುದಾರಿ ,ಬಂಡಿದಾರಿ, ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ:
ಸಾಗುವಳಿ ಚೀಟಿ – ಒಂದು ವೇಳೆ ಜಮೀನು ಸರ್ಕಾರದಿಂದ ಮಂಜೂರಾಗಿದ್ದರೆ ಬೇಕಾಗುತ್ತದೆ.
ಕಂದಾಯ ಪಾವತಿ ರಶೀದಿಯಿಂದ ಕಂದಾಯ ಪಾವತಿ ಮಾಡಿರುವ ಬಗ್ಗೆ ತಿಳಿಯಬಹುದು. ಪ್ರಿಯ ಓದುಗರೇ ಯಾವುದೇ ವ್ಯಕ್ತಿಯಾಗಲಿ ಇಲ್ಲಿ ಮೇಲೆ ತೋರಿಸಿರುವ ಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರೀಶೀಲಿಸಿ ಮುಂದಿನ ಹೆಜ್ಜೆ ಇಡಲು ಹೇಳುತ್ತಾ ಜೊತೆಗೆ ಯಾವುದೇ ಕಾನೂನು ಸಮಸ್ಯೆಗಳು ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿದು ಜಮೀನುಗಳನ್ನು ಖರೀದಿಸಿಕೊಳ್ಳಿ. ಅಥವಾ ಅನುಭವಂತ ವ್ಯಕ್ತಿಗಳನ್ನು ಜೊತೆಯಲ್ಲಿ ಈ ಕೆಲಸ ಮಾಡುವುದು ಉತ್ತಮ.
