19-7-2025 ಶನಿವಾರದ ಹವಾಮಾನ ಮುನ್ಸೂಚನೆ
ಕರಾವಳಿ ಜಿಲ್ಲೆಗಳ ತೀರ ಪ್ರದೇಶಗಳಲ್ಲಿ ನಿನ್ನೆ ಉತ್ತಮ ಮಳೆಯಾಗಿದ್ದು ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಉ.ಕ ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದ್ದು ಬೆಳ್ತಂಗಡಿ ತಾ. ಕಡಿಮೆ ಮಳೆಯಾಗಿದೆ. ಮಲೆನಾಡು ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ತುಂತುರು/ಸಾಧಾರಣ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಮುನ್ಸೂಚನೆ:
ಇವತ್ತಿನ ವರದಿ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಕಾಸರಗೋಡು ರೆಡ್ ಅಲಾರ್ಟ್ ಕೊಡಲಾಗಿದ್ದು ದ.ಕ ಉಡುಪಿ ಜಿಲ್ಲೆಗಳಲ್ಲಿ ಉ.ಕ. ಕರಾವಳಿ ತೀರದಲ್ಲಿ ಉತ್ತಮ ಮಳೆಯಾಗಬಹುದು. ಕಾಸರಗೋಡು ದ.ಕ ಗಡಿಪ್ರದೇಶಗಳ ಸುತ್ತಮುತ್ತ ಕರಾವಳಿ ತೀರಪ್ರದೇಶಗಳಲ್ಲಿ, ಸುಳ್ಯ ಬೆಳ್ತಂಗಡಿ ಕಾರ್ಕಳ ತಾಲ್ಲೂಕುಗಳ ಘಟ್ಟಪ್ರದೇಶಗಳ ತಪ್ಪಲಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಪ್ರದೇಶಗಳಲ್ಲಿಯೂ ನಿರಂತರ ತುಂತುರು ಮಳೆ ಮುಂದುವರಿಯಬಹುದು. ಜುಲೈ 23 ತನಕ ಉತ್ತಮ ಮಳೆಯಾಗಲಿದ್ದು ನಂತರವೂ ಸಾಧಾರಣ ಮಳೆ ಜುಲೈ 28 ತನಕ ಮುಂದುವರೆಯಬಹುದು. ಸದ್ಯ ಉತ್ತಮ ಬಿಸಿಲು ಬರುವ ಸಾಧ್ಯತೆ ಕಡಿಮೆಯಾಗುತ್ತಿದೆ.
ಇದನ್ನೂ ಓದಿ: ಟ್ರಾಕ್ಟರ್ ಚಾಲಿತ ಔಷಧಿ ಸಿಂಪರಣೆ ಉಪಕರಣಗಳು ಶೇ.50 ರ ಸಹಾಯಧನ
ಮಲೆನಾಡು ಜಿಲ್ಲೆಗಳಲ್ಲಿ ಹವಾಮಾನ ಮುನ್ಸೂಚನೆ :
ಮಲೆನಾಡಿನಲ್ಲಿ ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ. ಕೊಡಗಿನಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಕೇರಳ ಗಡಿಪ್ರದೇಶಗಳಲ್ಲಿ ಅಧಿಕ ಮಳೆಯಾಗಬಹುದು. ಹಾಸನ ಜಿಲ್ಲೆಯ ಕರಾವಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ, ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯ ಮುನ್ಸೂಚನೆ ಇದೆ. ಚಾರ್ಮಾಡಿ ಕುದುರೆಮುಖ ಆಗುಂಬೆ ಸುತ್ತಮುತ್ತ ಅಧಿಕ ಮಳೆಯಾಗಬಹುದು.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಹವಾಮಾನ ಮುನ್ಸೂಚನೆ :
ದಕ್ಷಿಣ ಒಳನಾಡಿನಲ್ಲಿಯೂ ಭಾರಿ ಮಳೆ ಮುನ್ಸೂಚನೆ
ಚಾಮರಾಜನಗರ ಮೈಸೂರು ಮಂಡ್ಯ ರಾಮನಗರ ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು – ಗ್ರಾಮಾಂತರ ಜಿಲ್ಲೆಗಳಾದ್ಯಂತ ಉತ್ತಮ ಮಳೆಯ ಮುನ್ಸೂಚನೆ ಇದೆ.ಮೈಸೂರು ಚಾಮರಾಜನಗರ ರಾಮನಗರ ಬೆಂಗಳೂರಿನ ಕೆಲವೆಡೆ ಭಾರಿ ಮಳೆಯ ಮುನ್ಸೂಚನೆ ಇದೆ. ತುಮಕೂರು ಚಿತ್ರದುರ್ಗ ದಾವಣಗೆರೆ ಬಳ್ಳಾರಿ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಬಹುದು. ಜುಲೈ 22 ರಿಂದ ಮಳೆ ಕಡಿಮೆ ಆಗಬಹುದು.
ಇದನ್ನೂ ಓದಿ: ಕಾಳು ಮೆಣಸು ಬಿಡಿಸುವ ಯಂತ್ರ, ಮಳೆ ನೀರು ಕೊಯ್ಲು ,ಪಂಪ್ ಸೆಟ್ ಗೆ ಸಹಾಯಧನ ಅರ್ಜಿ
ಒಳನಾಡು ಜಿಲ್ಲೆಗಳಲ್ಲಿ ಹವಾಮಾನ ಮುನ್ಸೂಚನೆ :
ಉತ್ತರ ಒಳನಾಡಿನ ಬೆಳಗಾವಿ ಧಾರವಾಡ ಗದಗ ಹಾವೇರಿ ರಾಯಚೂರು ಯಾದಗಿರಿ ಕಲ್ಬುರ್ಗಿ ಬೀದರ್ ಬಾಗಲಕೋಟೆ ಬಿಜಾಪುರ ಜಿಲ್ಲೆಗಳ ಬಹುತೇಕ ಪ್ರದೇಶಗಳಲ್ಲಿ ಒಂದೆರಡು ಸಾಧಾರಣ ಮಳೆ ಇವತ್ತು ಮುಂದುವರೆಯಬಹುದು.
ಬಂಗಾಳ ಕೊಲ್ಲಿಯಲ್ಲಿ ಆಂಧ್ರ ಕರಾವಳಿ ಸಮೀಪ ಸಣ್ಣ ಪ್ರಮಾಣದ ಸೈಕ್ಲೋನಿಕ್ ಸರ್ಕ್ಯುಲೇಷನ್ ಇರುವ ಕಾರಣ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು ಒಳನಾಡು ಜಿಲ್ಲೆಗಳಿಗೆ ಸಂಜೆಯ ನಂತರ ಪೂರ್ವದ ಗಾಳಿ ಮೋಡ ಬರುತ್ತಿರುವ ಕಾರಣ ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯ ಗಾಳಿಯ ತಿರುಗುವಿಕೆಯು ಉತ್ತರಕ್ಕೆ ಚಲಿಸಲಿದ್ದು ಇದರ ಪ್ರಭಾವ ಒಂದು ವಾರ ಮುಂದುವರಿಯಲಿದೆ.
ಇದನ್ನೂ ಓದಿ: Weed Mat Subsidy: ತೋಟಗಾರಿಕೆ ಇಲಾಖೆಯಿಂದ ಕಳೆ ಚಾಪೆಗೆ 1.ಲಕ್ಷ ರೂ. ಸಹಾಯಧನ
ಮಾಹಿತಿ,
ರಘುರಾಮ ಕಂಪದಕೋಡಿ